ನವದೆಹಲಿ: ಕಜಕಿಸ್ತಾನ್ ಅಧ್ಯಕ್ಷ ನರ್ಸುಲ್ತಾನ್ ನಝಾರ್ಬಯೆವ್ ಮೂರು ದಶಕಗಳ ಬಳಿಕ ತಮ್ಮ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಕಜಕಿಸ್ತಾನ್ ದೇಶವು ಹೇರಳವಾದ ತೈಲ ಸಂಪನ್ಮೂಲವನ್ನು ಹೊಂದಿದ್ದು, ಸೋವಿಯತ್ ರಿಪಪ್ಲಿಕ್ ಕಾಲದಿಂದಲೂ ಅವರು ಕಜಕಸ್ತಾನವನ್ನು ಮುನ್ನಡೆಸುತ್ತಿದ್ದರು ಎನ್ನಲಾಗಿದೆ."ನಾನು ಅಧ್ಯಕ್ಷ ಹುದ್ದೆಗೆ ರಾಜಿನಾಮೆ ನೀಡಲು ನಿರ್ಧರಿಸಿದ್ದು, ಆದರೆ ಈ ನಿರ್ಧಾರ ನನಗೆ ಅಷ್ಟು ಸುಲಭವಲ್ಲ" ಎಂದು ನರ್ಸುಲ್ತಾನ್ ನಝಾರ್ಬಯೆವ್ ರಾಜೀನಾಮೆ ನಿರ್ಧಾರವನ್ನು ದೂರದರ್ಶನದ ಭಾಷಣದ ಮೂಲಕ ಪ್ರಕಟಿಸಿದ್ದಾರೆ.


ಸಂಸತ್ತಿನ ಮೇಲ್ಮನೆ ಸಭೆಯ ಸ್ಪೀಕರ್ ಕಾಸಿಮ್-ಜೊಮಾರ್ಟ್ ಟೋಕಯೇವ್ ಅವರು ಸಂವಿಧಾನಕ್ಕೆ ಅನುಗುಣವಾಗಿ ತಮ್ಮ ಅವಧಿಯ ಉಳಿದ ಭಾಗಕ್ಕೆ ದೇಶದ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಲಿದ್ದಾರೆ ಎಂದು ನಜರ್ಬಯೆವ್ ಹೇಳಿದರು.