PM Modi US visit: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಕುಟುಂಬವು ಜೂನ್‌ 21 ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಆತ್ಮೀಯ ಭೋಜನವನ್ನು ಆಯೋಜಿಸಲು ಯೋಜಿಸಿದೆ. ಯುಎಸ್ ಅಧ್ಯಕ್ಷರ ಅಧಿಕೃತ ನಿವಾಸ ಮತ್ತು ಕಚೇರಿಯಾದ ಶ್ವೇತಭವನದಲ್ಲಿ ಈ ಔತಣವನ್ನು ಆಯೋಜಿಸಲಾಗಿದೆ. ಅಮೆರಿಕದ ಹಿರಿಯ ಆಡಳಿತಾಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ. ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್ ಬೈಡೆನ್ ಅವರು ಮೋದಿ ಅವರನ್ನು ಅಧಿಕೃತ ರಾಜ್ಯ ಪ್ರವಾಸಕ್ಕೆ ಆಹ್ವಾನಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಐತಿಹಾಸಿಕ ಭೇಟಿಗಾಗಿ ಜೂನ್ 22 ರಂದು ಸೌತ್ ಲಾನ್ಸ್‌ನಲ್ಲಿ ಸ್ವಾಗತವನ್ನು ಆಯೋಜಿಸಲಾಗುವುದು ಮತ್ತು ರಾತ್ರಿಯ ನಂತರ ಅದೇ ಸ್ಥಳದಲ್ಲಿ ರಾಜಕೀಯ ಔತಣಕೂಟವನ್ನು ಆಯೋಜಿಸಲಾಗುವುದು ಎಂದು ಉನ್ನತ ಭೇಟಿಯ ಯೋಜನೆಗಳ ಬಗ್ಗೆ ತಿಳಿದಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  


ಶ್ವೇತಭವನದ ಲಾನ್‌ನಲ್ಲಿ ಅತ್ಯಂತ ಮಹತ್ವದ ಸ್ವಾಗತ ನಡೆಯಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅದರ ಹಿಂದಿನ ರಾತ್ರಿ ಪ್ರಧಾನಿ ಮೋದಿ, ಅಧ್ಯಕ್ಷ ಬೈಡೆನ್ ಮತ್ತು ಬೈಡೆನ್ ಕುಟುಂಬ ಒಟ್ಟಿಗೆ ಕುಳಿತು ಆತ್ಮೀಯತೆಯಿಂದ ಮಾತನಾಡಲು ಅವಕಾಶ ಸಿಗಲಿದೆ. ಈ ಔತಣಕೂಟವನ್ನು ಎಲ್ಲಿ ಆಯೋಜಿಸಲಾಗುತ್ತದೆ ಎಂದು ಇನ್ನೂ ತಿಳಿಸಲಾಗಿಲ್ಲ ಎನ್ನಲಾಗಿದೆ.


ಇದನ್ನೂ ಓದಿ:ದುಬೈ ಜನರ ಈ ಬೆರಗುಗೊಳಿಸುವ ಈ ಸಂಗತಿಗಳ ಬಗ್ಗೆ ನಿಮಗೆಷ್ಟು ಗೊತ್ತು?


ಅಮೆರಿಕ ತಲುಪಿದ ಕೂಡಲೇ ಪ್ರಧಾನಿ ಮೋದಿ ಅವರು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನದಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಮತ್ತು ನಂತರ ಅವರು ವಾಷಿಂಗ್ಟನ್ ಡಿಸಿ ತಲುಪಲಿದ್ದಾರೆ.


ಜೂನ್ 22 ರಂದು ರಾಜಕೀಯ ಭೋಜನ : 


ಪ್ರಧಾನಿ ಮೋದಿಯವರ ಭೇಟಿಯ ಸಮಯದಲ್ಲಿ ಜೂನ್ 22 ಬಿಡುವಿಲ್ಲದ ದಿನವಾಗಿದ್ದು, ದಿನದ ಕೊನೆಯಲ್ಲಿ ಭೋಜನವನ್ನು ಆಯೋಜಿಸಲಾಗುತ್ತದೆ. ಇದಕ್ಕಾಗಿ ಶ್ವೇತಭವನದ ಸೌತ್ ಲಾನ್ಸ್‌ನಲ್ಲಿ ಟೆಂಟ್ ಗಳನ್ನು ಅಳವಡಿಸುವ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಆಹ್ವಾನಿತ ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸಬಹುದಾಗಿದೆ.


ಅತಿಥಿಗಳ ಪಟ್ಟಿಯನ್ನು ಸಾಮಾನ್ಯವಾಗಿ ಅಂದು ಸಂಜೆ ಬಿಡುಗಡೆ ಮಾಡಲಾಗುತ್ತದೆ. ಅಧಿಕಾರಿಯೊಬ್ಬರ ಮಾಹಿತಿಯ ಪ್ರಕಾರ, ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧವನ್ನು ಈ ರಾಜಕೀಯ ಭೋಜನದ ಸಮಯದಲ್ಲಿ ಸೆಲಿಬ್ರೇಟ್‌ ಮಾಡಲಾಗುವುದು. ಭಾರತ ಮತ್ತು ಅಮೆರಿಕದ ಮಿತ್ರರಾಷ್ಟ್ರಗಳು ಇದರಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಇದು ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಲಿದೆ. 


ಇದನ್ನೂ ಓದಿ: ಭೂಮಿಯತ್ತ ಬರುತ್ತಿವೆ ಎರಡು ದೈತ್ಯ ಕ್ಷುದ್ರಗ್ರಹಗಳು, NASA ದಿಂದ ಆಘಾತಕಾರಿ ಮಾಹಿತಿ!


ಮೂಲಗಳ ಪ್ರಕಾರ, ಜೂನ್ 23 ರಂದು, ಯುಎಸ್ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಫಾಗಿ ಬಾಟಮ್ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ಮೋದಿಯವರಿಗೆ ಮತ್ತೊಂದು ಔತಣಕೂಟವನ್ನು ಏರ್ಪಡಿಸಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.


ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು: 


ಪ್ರಧಾನಿ ಮೋದಿಯವರ ಈ ಭೇಟಿಯ ವೇಳೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರಿಗಾಗಿ ಸಾಧ್ಯವಾದಷ್ಟು ಈವೆಂಟ್‌ಗಳನ್ನು ಯೋಜಿಸಿದ್ದೇವೆ. ಇದು ಯುಎಸ್-ಭಾರತದ ಸಂಬಂಧದ ಮಹತ್ವವನ್ನು ಹಲವು ರೀತಿಯಲ್ಲಿ ವಿವರಿಸುತ್ತದೆ. ಶ್ವೇತಭವನವು ಮುಂದಿನ ದಿನಗಳಲ್ಲಿ ಭೋಜನ ಮತ್ತು ಇತರ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡುತ್ತದೆ ಎಂದು ಹಿರಿಯ ಆಡಳಿತಾಧಿಕಾರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಇದನ್ನೂ ಓದಿ:ಆನ್ ಲೈನ್ ಗೇಮಿಂಗ್ ಮೂಲಕ 52 ಲಕ್ಷ ಕಳೆದುಕೊಂಡ ಬಾಲಕಿ


ಪ್ರಧಾನಿಯವರ ಭೇಟಿಯ ಬಗ್ಗೆ ಭಾರತೀಯ-ಅಮೆರಿಕನ್ನರು ತುಂಬಾ ಉತ್ಸುಕರಾಗಿದ್ದಾರೆ. ದೇಶಾದ್ಯಂತದ ನೂರಾರು ಜನರು ಮುಂದಿನ ವಾರ ವಾಷಿಂಗ್ಟನ್ ಡಿಸಿಗೆ ವಿವಿಧ ಪ್ರಯಾಣ-ಸಂಬಂಧಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿದ್ದಾರೆ. ಇದರಿಂದಾಗಿ ಹೋಟೆಲ್ ಕೊಠಡಿಗಳು ಮತ್ತು ವಿಮಾನ ಟಿಕೆಟ್‌ಗಳ ಬೆಲೆಗಳು ದಿಢೀರ್ ಏರಿಕೆಯಾಗಿದೆ.  


ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್‌ನಂತಹ ಹಲವಾರು ಸಮುದಾಯ ಸಂಸ್ಥೆಗಳು ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಪ್ರದೇಶಗಳಿಂದ ಸಮುದಾಯದ ಸದಸ್ಯರನ್ನು ಕರೆತರುವ ವಿಶೇಷ ಬಸ್ ಸೇವೆಗಳನ್ನು ಆಯೋಜಿಸಿವೆ. ಜೂನ್ 21 ರಂದು ಮೋದಿಯನ್ನು ಸ್ವಾಗತಿಸಲು ನೂರಾರು ಭಾರತೀಯ-ಅಮೆರಿಕನ್ನರು ಶ್ವೇತಭವನದ ಎದುರಿನ ಪಾರ್ಕ್‌ನಲ್ಲಿ ಸೇರಲು ಯೋಜಿಸಿದ್ದಾರೆ. ಭಾರತೀಯ-ಅಮೆರಿಕನ್ ಸಮುದಾಯವು ಜೂನ್ 23 ರಂದು ರೊನಾಲ್ಡ್ ರೇಗನ್ ಬಿಲ್ಡಿಂಗ್‌ನಲ್ಲಿ ಪ್ರಧಾನ ಮಂತ್ರಿಗಾಗಿ ಭೋಜನವನ್ನು ಆಯೋಜಿಸುತ್ತಿದೆ.


ಇದನ್ನೂ ಓದಿ: ಈ ದೇಶದಲ್ಲಿ ಕುಳಿತು ಅಮೆರಿಕಾದ ಮೇಲೆ ಬೇಹುಗಾರಿಕೆ ನಡೆಸುತ್ತಿತ್ತು ಚೀನಾ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.