Strange Facts: ದೊಡ್ಡ ಕಟ್ಟಡಗಳು, ಉತ್ತಮ ಮೂಲಸೌಕರ್ಯಗಳು, ಉದ್ದದ ವಾಹನಗಳು ಎಲ್ಲೆಡೆ ನೋಡಲು ಸಿಗುತ್ತವೆ. ವಿದೇಶಗಳ ಬಗ್ಗೆ ಆಲೋಚಿಸಿದಾಗ ಈ ರೀತಿಯ ಕೆಲ ರೀತಿಯ ಚಿತ್ರಗಳು ಕಣ್ಮುಂದೆ ಬರುತ್ತವೆ. ಆದರೆ ಒಂದು ದೇಶವು ಇತರ ದೊಡ್ಡ ದೇಶಗಳಿಗಿಂತ ಈ ವಿಷಯದಲ್ಲಿ ಎರಡು ಹೆಜ್ಜೆ ಮುಂದಿದೆ ಎಂದರೆ ಅತಿಶಯೋಕ್ತಿ ಎನಿಸದು.
Strange Facts: ದೊಡ್ಡ ಕಟ್ಟಡಗಳು, ಉತ್ತಮ ಮೂಲಸೌಕರ್ಯಗಳು, ಉದ್ದದ ವಾಹನಗಳು ಎಲ್ಲೆಡೆ ನೋಡಲು ಸಿಗುತ್ತವೆ. ವಿದೇಶಗಳ ಬಗ್ಗೆ ಆಲೋಚಿಸಿದಾಗ ಈ ರೀತಿಯ ಕೆಲ ರೀತಿಯ ಚಿತ್ರಗಳು ಕಣ್ಮುಂದೆ ಬರುತ್ತವೆ. ಆದರೆ ಒಂದು ದೇಶವು ಇತರ ದೊಡ್ಡ ದೇಶಗಳಿಗಿಂತ ಈ ವಿಷಯದಲ್ಲಿ ಎರಡು ಹೆಜ್ಜೆ ಮುಂದಿದೆ ಎಂದರೆ ಅತಿಶಯೋಕ್ತಿ ಎನಿಸದು. ಈ ದೇಶದ ಹೆಸರು ದುಬೈ ಮತ್ತು ಇಲ್ಲಿ ನೀವು ನಿಮ್ಮ ಜೀವನದಲ್ಲಿಯೇ ಸಾಮಾನ್ಯವಾಗಿ ನೋಡದ ಕೆಲವು ವಿಷಯಗಳನ್ನು ಕಾಣಬಹುದು. ಇವುಗಳಲ್ಲಿ ಚಿನ್ನದ ಲೇಪಿತ ವಾಹನಗಳಿಂದ ಹಿಡಿದು ಸಾಕು ಚಿರತೆಗಳು ಮತ್ತು ಸಿಂಹಗಳು ಕೂಡ ಶಾಮೀಲಾಗಿವೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
1. ಅಪಾಯಕಾರಿ ಸಾಕು ಪ್ರಾಣಿಗಳು - ದುಬೈನ ಶೇಖ್‌ಗಳು ಮತ್ತು ಇತರ ಶ್ರೀಮಂತರು ಸಿಂಹಗಳನ್ನು ಸಾಕಲು ಇಷ್ಟಪಡುತ್ತಾರೆ. ಈಗ ಸುಮ್ಮನೆ ಊಹಿಸಿ, ನಾಯಿಯ ಬಗ್ಗೆ ತುಂಬಾ ಭಯ ಇರುವಾಗ, ನಿಮ್ಮ ಬಳಿ ಸಾಕು ಸಿಂಹ ಇದ್ದರೆ, ನಿಮ್ಮೊಂದಿಗೆ ಯಾರು ವೈರತ್ವ ಕಟ್ಟಿಕೊಳ್ಳುವರು?
2. ಕುದುರೆಯಂತೆ ಕಾಣುವ ಬೈಕ್ ಗಳು - ಇಲ್ಲಿ ಜನರು ತಮ್ಮ ಹವ್ಯಾಸಗಳಿಗಾಗಿ ಒಂದು ಹೆಜ್ಜೆ ಮುಂದಿಡಲು ಹಿಂಜರಿಯುವುದಿಲ್ಲ. ಈಗ ಈ ಬೈಕನ್ನೇ ತೆಗೆದುಕೊಳ್ಳಿ. ಈ ಬೈಕ್ ಅನ್ನು ಮೊದಲು ದುಡ್ಡು ಖರ್ಚು ಮಾಡಿ ಕೊಂಡುಕೊಂಡಿರಬೇಕು. ನಂತರ ಈ ರೀತಿ ಮರುವಿನ್ಯಾಸ ಮಾಡಲು ಎಷ್ಟು ಹಣ ಖರ್ಚಾಗಿರಬೇಕು? ಕೇವಲ ಕುದುರೆ ನೋಟಕ್ಕೆ ಹಣ ನೀರಿನಂತೆ ಪೋಲಾಗಿರಬೇಕು ಮತ್ತು ಲುಕ್ ಬಂದಿರಬೇಕು.
3. 24 ಕ್ಯಾರೆಟ್ ಗೋಲ್ಡ್ ಪ್ಲೆಟೆಡ್ SUV - ಇಂತಹ ವಾಹನಗಳನ್ನು ನೀವು ವಿಡಿಯೋ ಗೇಮ್‌ಗಳಲ್ಲಿ ಮಾತ್ರ ನೋಡಿರಬಹುದು. ಆದರೆ ಇದು ಅಸಲಿ ಕಾರಾಗಿದೆ. ನೀವು ದುಬೈನಲ್ಲಿ ಸುತ್ತಾಡುತ್ತಿದ್ದರೆ, ಈ ರೀತಿಯ ವಾಹನ ಕಂಡರೆ ನೀವು ಆಶ್ಚರ್ಯ ಪಡಬೇಕಾಗಿಲ್ಲ.
4. Gold Bars ಹೊರಬರುವ ATM - ನೀವೆಲ್ಲರೂ ನೋಟು ನೀಡುವ ಎಟಿಎಂಗಳನ್ನು ಬಳಸಿರಬೇಕು. ದುಬೈನ ಶ್ರೀಮಂತಿಕೆಯನ್ನು ನೋಡಿ... ಗೋಲ್ಡ್ ಬಾರ್ಸ್ ಅಂದರೆ ಚಿನ್ನದ ಬಿಸ್ಕತ್ತುಗಳ ಎಟಿಎಂ ಕೂಡ ಅಲ್ಲಿದೆ.
5. ಸೂಪರ್ ಹೈಟೆಕ್ ಪೋಲೀಸ್ ಕಾರ್- ಪೊಲೀಸರ ಬಳಿ ಹೈಟೆಕ್ ವಾಹನಗಳು, ಆಯುಧಗಳು ಇರಲೇಬೇಕು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಪೊಲೀಸರ ಸ್ಥಿತಿ ಎಲ್ಲ ದೇಶಗಳಲ್ಲೂ ಒಂದೇ ರೀತಿ ಇರುವುದಿಲ್ಲ. ಕೆಲವೆಡೆ ಪೊಲೀಸರು ಶಸ್ತ್ರಾಸ್ತ್ರಗಳಿಗಾಗಿ ಪರದಾಡಿದರೆ, ದುಬೈನಂತಹ ದೇಶದಲ್ಲಿ ಪೋಲೀಸರ ಬಳಿ ಸೂಪರ್ ವಾಹನಗಳಿವೆ. ಕಾರು ಎಷ್ಟು ಅದ್ಭುತವಾಗಿದೆ ಎಂದರೆ ನೀವು ಅದರ ಸವಾರಿಗಾಗಿ ಒಮ್ಮೆ ಅರೆಸ್ಟ್ ಆಗಲು ಖಂಡಿತ ಬಯಸುವಿರಿ.
6. ಸ್ಟ್ರಿಕ್ಟ್ ಡ್ರೆಸ್ ಕೋಡ್ - ಡ್ರೆಸ್ ಕೋಡ್ ಮಹಿಳೆಯರಿಗೆ ದೊಡ್ಡ ಸವಾಲಾಗಿರುತ್ತದೆ. ದುಬೈ, ಮಹಿಳೆಯರಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್‌ಗೆ ಹೆಸರುವಾಸಿಯಾಗಿದೆ. ದುಬೈನಲ್ಲಿ, ಮಹಿಳೆಯರು ಸಂಪೂರ್ಣವಾಗಿ ದೇಹವನ್ನು ಮುಚ್ಚುವ ಬಟ್ಟೆಗಳನ್ನು ಧರಿಸಿ ಹೊರಗೆ ಹೋಗುವುದು ಅಲ್ಲಿನ ನಿಯಮವಾಗಿದೆ. ಆದಾಗ್ಯೂ, ಅನೇಕ ಬಾರಿ ಪ್ರವಾಸಿಗರು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳುತ್ತಾರೆ, ಇದನ್ನು ನೋಡಿ ಸ್ಥಳಿಯರು ಕೂಡ ಕೆಲವೊಮ್ಮೆ ಕೆಂಗಣ್ಣು ಬೀರುತ್ತಾರೆ.
7. ಅಂಬುಲೆನ್ಸ್ ಆಗಿ ಮಾರ್ಪಟ್ಟ ಲಿಮೋಸಿನ್ ವಾಹನ - ಲಿಮೋಸಿನ್‌ನಲ್ಲಿ ಸವಾರಿ ಮಾಡುವುದು ಯಾವುದೇ ವಾಹನ ಉತ್ಸಾಹಿಗಳ ಕನಸಾಗಿರುತ್ತದೆ. ದುಬೈನಲ್ಲಿ ಅನೇಕ ಲಿಮೋಸಿನ್ ವಾಹನಗಳನ್ನು ಆಂಬ್ಯುಲೆನ್ಸ್‌ಗಳಾಗಿ ಬಳಸಲಾಗುತ್ತದೆ.
8. ಐಶಾರಾಮಿ ಸ್ನಾನ ಗ್ರಹ - ಜನರು ಹೆಚ್ಚಾಗಿ ಸಾರ್ವಜನಿಕ ಶೌಚಾಲಯಗಳಿಗೆ ಹೋಗುವುದನ್ನು ತಪ್ಪಿಸುತ್ತಾರೆ. ಸಾರ್ವಜನಿಕ ಶೌಚಾಲಯಗಳ ಸ್ಥಿತಿ ಎಂದರೆ ದುರ್ಗಂಧದಿಂದ ಮೂಗು ತುಂಬಿಕೊಳ್ಳುತ್ತಿದೆ. ಯಾರೆ, ದುಬೈನ ವಿಷಯವೇ ಬೇರೆಯಾಗಿದೆ. ಪಂಚತಾರಾ ಹೋಟೆಲ್‌ನ ವಿಶ್ರಾಂತಿ ಕೊಠಡಿಗಿಂತ ಶೌಚಾಲಯವು ಉತ್ತಮವಾಗಿದೆ ಎಂಬುದಕ್ಕೆ ಇಲ್ಲಿ ನೀಡಲಾಗಿರುವ ಚಿತ್ರದಿಂದ ನೀವು ಊಹಿಸಬಹುದು.