Imran Khan Tweet: ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಂಕಷ್ಟಗಳು ಕಡಿಮೆಯಾಗುವ ಲಕ್ಷಣಗಳೇ ಗೋಚರಿಸುತ್ತಿಲ್ಲ ಮತ್ತು ಅದರಲ್ಲಿಯೇ ಅವರೊಂದು ದೊಡ್ಡ ತಪ್ಪು ಎಸಗಿದ್ದಾರೆ, ಇದಾದ ಬಳಿಕ ಅವರು ಸಾಕಷ್ಟು ಟೀಕೆಗಳನ್ನು ಎದುರಿಡಬೇಕಾದ ಪರಿಸ್ಥಿತಿ ಬಂದಿದೆ. . ಆದರೆ, ಟೀಕೆಗಳ ನಂತರ, ಅವರು ತ್ವರಿತ ಯು-ಟರ್ನ್ ಮಾಡಿ ಟ್ವೀಟ್ ಅನ್ನು ಅಳಿಸಿದ್ದಾರೆ. ವಾಸ್ತವವಾಗಿ, ಇಮ್ರಾನ್ ಖಾನ್ ಅವರು ಹಳೆಯ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ, ವಿಡಿಯೋದಲ್ಲಿರುವವರು ತಮ್ಮ ಪಕ್ಷದ ಸದಸ್ಯ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇಮ್ರಾನ್ ಖಾನ್ ಹಂಚಿಕೊಂಡ ವಿಡಿಯೋದಲ್ಲೇನಿದೆ
ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರು ತಮ್ಮ ಪಕ್ಷದ ಸದಸ್ಯನ ಟ್ರಕ್ ಸುಟ್ಟುಹೋದ ಹಳೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದಾದ ಬಳಿಕ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ. ದಿ ನ್ಯೂಸ್‌ನ ವರದಿಯ ಪ್ರಕಾರ, ಟ್ವಿಟರ್‌ನಲ್ಲಿ ಇಮ್ರಾನ್ ಖಾನ್ ಮತ್ತು ಅವರ ಪಕ್ಷದ ಹ್ಯಾಂಡಲ್ ಟ್ರಕ್‌ಗಳನ್ನು ಸುಡುವ ವೀಡಿಯೊಗಳನ್ನು ಟ್ವೀಟ್ ಮಾಡಿದೆ ಮತ್ತು ಅವು ಮಲಿಕ್ ಶಹಜಾದ್ ಅವರಿಗೆ ಸೇರಿವೆ ಎಂದು ಹೇಳಿಕೊಂಡಿದೆ, ಅವರು ಪಿಟಿಐ ತೊರೆಯುವಂತೆ ಒತ್ತಡ ಹೇರುತ್ತಿದ್ದಾರೆ. ಅವರು ಇದನ್ನು ಮಾಡಲು ನಿರಾಕರಿಸಿದಾಗ ಅವರ ಟ್ರಕ್‌ಗಳಿಗೆ ಬೆಂಕಿ ಹಚ್ಚಲಾಯಿತು ಎಂದೂ ಹೇಳಲಾಗಿದೆ.


ಇದನ್ನೂ ಓದಿ-Terror Funding: 'ಟೆರರ್ ಫಂಡಿಂಗ್ ಪ್ರಕರಣದಲ್ಲಿ ಗಲ್ಲುಶಿಕ್ಷೆಯಾಗಬೇಕು', NIA ಬೇಡಿಕೆ ಹಿನ್ನೆಲೆ ಯಾಸಿನ್ ಮಲಿಕ್ ಗೆ ನೋಟೀಸ್ ಜಾರಿಗೊಳಿಸಿದ ದೆಹಲಿ ಹೈಕೋರ್ಟ್


ಟ್ರೋಲ್ ಬಳಿಕ ಯುಟರ್ನ್ ತೆಗೆದುಕೊಂಡ ಇಮ್ರಾನ್
ದಿ ನ್ಯೂಸ್ ವರದಿಯ ಪ್ರಕಾರ, ಸಾಮಾಜಿಕ ಮಾಧ್ಯಮ ಬಳಕೆದಾರರು ಇಮ್ರಾನ್ ಖಾನ್ ಮತ್ತು ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅನ್ನು ತಪ್ಪು ಮಾಹಿತಿಯನ್ನು ಹರಡುವುದಕ್ಕಾಗಿ ಟ್ರೋಲ್ ಮಾಡಲಾಗಿದೆ. ವೀಡಿಯೋ ನೌಶೇರಾದ ತೈಲ ಸಂಗ್ರಹಾಗಾರದಲ್ಲಿ ನಡೆದ ಬೆಂಕಿ ಅವಘಡದ ದೃಶ್ಯ ಎನ್ನಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ನಿರಂತರ ಟೀಕೆಗಳನ್ನು ಎದುರಿಸಿದ ನಂತರ, ಇಮ್ರಾನ್ ಖಾನ್ ಯು-ಟರ್ನ್ ತೆಗೆದುಕೊಂಡಿದ್ದಾರೆ ಮತ್ತು ಮಾಜಿ ಪ್ರಧಾನಿ ಜೊತೆಗೆ ಅವರ ಪಕ್ಷವು ಟ್ವೀಟ್ ಅನ್ನು ಅಳಿಸಿ ಹಾಕಿದೆ.


ಇದನ್ನೂ ಓದಿ-Delhi: 16 ವರ್ಷದ ಅಪ್ರಾಪ್ತೆಯನ್ನು ಕೊಚ್ಚಿ ಕೊಲೆಗೈದ ತಲೆತಿರುಕ, ಬುಲಂದ್ ಶಹರ್ ನಲ್ಲಿ ಆರೋಪಿ ಸಾಹಿಲ್ ಬಂಧನ


ಇಮ್ರಾನ್ ಖಾನ್ ಏನು ಟ್ವೀಟ್ ಮಾಡಿದ್ದಾರೆ
ಡಿಲಿಟ್ ಮಾಡಲಾಗಿರುವ ಟ್ವೀಟ್ ನಲ್ಲಿ ಇಮ್ರಾನ್, "ಸಿಂಧ್ (ಕರಾಚಿ) ಯಿಂದ ನಮ್ಮ ಎಂಪಿಎ ಆಗಿರುವ ಮಲಿಕ್ ಶಹಜಾದ್ ಅವರನ್ನು  ಪಿಟಿಐ ತೊರೆಯುವಂತೆ ಒತ್ತಡ ಹೇರಲಾಗುತ್ತಿದೆ. ಆದರೆ ಅವರ ನಿರಾಕರಣೆಯ ಬಳಿಕ, ಅವರ ಟ್ರಕ್‌ಗಳಿಗೆ ಬೆಂಕಿ ಹಚ್ಚಿ ನಾಶಪಡಿಸಲಾಗಿದೆ. ಎಲ್ಲಾ ಪಿಟಿಐ ಟಿಕೆಟ್ ಹೊಂದಿರುವವರು ಮತ್ತು ಅಭ್ಯರ್ಥಿಗಳು ಇಂದು ಈ ಫ್ಯಾಸಿಸಂ ಅನ್ನು ಎದುರಿಸುತ್ತಿದ್ದಾರೆ. ನಮ್ಮ ನ್ಯಾಯಾಂಗವು ಅಸಹಾಯಕತೆಯಿಂದ ನೋಡುತ್ತಿರುವಾಗ ನಮ್ಮ ಮೂಲಭೂತ ಹಕ್ಕುಗಳನ್ನು ಬಹಿರಂಗವಾಗಿ ಉಲ್ಲಂಘಿಸಲಾಗುತ್ತಿದೆ" ಎಂದು ಅವರು ಬರೆದುಕೊಂಡಿದ್ದರು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.