ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ರ ಲಂಡನ್ ನಿವಾಸದ ಮುಂದೆ ಪ್ರತಿಭಟನೆ
ಲಂಡನ್‌ನಲ್ಲಿ ವಾಸವಾಗಿರುವ ನವಾಜ್ ಷರೀಫ್ ಅವರ ನಿವಾಸದ ಎದುರು ಭಾನುವಾರ ತಡರಾತ್ರಿವರೆಗೂ ಪ್ರತಿಭಟನೆಗಳು ನಡೆದಿವೆ ಎಂದು ಮೂಲಗಳು ತಿಳಿಸಿದೆ.
ಲಂಡನ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧದ ಅವಿಶ್ವಾಸ ನಿರ್ಣಯ ಅಂಗೀಕಾರವಾಗಿರುವ ಬೆನ್ನಲ್ಲೇ ಅಲ್ಲಿನ ಮಾಜಿ ಪ್ರಧಾನಿ ನವಾಜ್ ಷರೀಫ್(Nawaz Sharif)ರ ಲಂಡನ್‌ನಲ್ಲಿರುವ ನಿವಾಸ ಎದುರು ಪ್ರತಿಭಟನೆಗಳು ನಡೆದಿವೆ.
ಇದನ್ನು ಓದಿ: Indian Railways:ಚಾರ್ಟ್ ಸಿದ್ಧಪಡಿಸಿದ ನಂತರವೂ ಕ್ಯಾನ್ಸಲ್ ರೈಲ್ವೆ ಟಿಕೆಟ್‌ಗೆ ಸಿಗುತ್ತೆ ರೀಫಂಡ್
ಲಂಡನ್‌ನಲ್ಲಿ ವಾಸವಾಗಿರುವ ನವಾಜ್ ಷರೀಫ್ ಅವರ ನಿವಾಸದ ಎದುರು ಭಾನುವಾರ ತಡರಾತ್ರಿವರೆಗೂ ಪ್ರತಿಭಟನೆಗಳು ನಡೆದಿವೆ ಎಂದು ಮೂಲಗಳು ತಿಳಿಸಿದೆ. ಪಾಕಿಸ್ತಾನ ಮುಸ್ಲಿಂ ಲೀಗ್–ನವಾಜ್ (ಪಿಎಂಎಲ್–ಎನ್) ಅಧ್ಯಕ್ಷ ಹಾಗೂ ನವಾಜ್ ಷರೀಫ್ ಅವರ ಸಹೋದರ ಶಾಹಬಾಝ್ ಷರೀಫ್ ಅವರು ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಇದನ್ನು ವಿರೋಧಿಸಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ (PTI) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ.
ಪಿಟಿಐ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದ ನವಾಜ್ ಷರೀಫ್ ಬೆಂಬಲಿಗರು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದದ್ದು, ಕೂಡಲೇ ಲಂಡನ್ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಇದನ್ನು ಓದಿ: 'ಬೆಂಗಳೂರು ಬಾಯ್ಸ್' ಟೀಸರ್ ರಿಲೀಸ್.. ಅಂತ, ರಣಧೀರ, ಓಂ ಸಿನಿಮಾ ನೆನಪಿಸಿದ ಫಸ್ಟ್ ಲುಕ್!
ಪ್ರತಿಭಟನೆ ನಡೆದರೂ ಹೊರಬಾರದ ನವಾಜ್: ಪ್ರತಿಭಟನೆ ನಡೆಯುತ್ತಿದ್ದರೂ ನವಾಜ್ ಷರೀಫ್ ನಿವಾಸದಿಂದ ಹೊರ ಬಂದಿಲ್ಲವಂತೆ. ಪಾಕಿಸ್ತಾನದ ಈ ಬೆಳವಣಿಗೆಗಳಿಗೆ ನವಾಜ್ ಷರೀಫ್ ಕಾರಣ. ಸಹೋದರನನ್ನು ಪ್ರಧಾನಿ ಮಾಡಲು ನವಾಜ್ ಷರೀಫ್ ಈ ರಾಜಕೀಯ ಹುನ್ನಾರ ನಡೆಸಿದ್ದಾರೆ ಎಂದು ಪಿಟಿಐ ಪಕ್ಷದ ಕಾರ್ಯಕರ್ತರು ಆರೋಪಿಸಿದ್ದಾರೆ.
ಇಮ್ರಾನ್ ಅವರನ್ನು ಶನಿವಾರ ತಡರಾತ್ರಿ ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಗೊಳಿಸಲಾಗಿದೆ. ಹೊಸ ಸರ್ಕಾರ ರಚನೆಯ ಪ್ರಕ್ರಿಯೆಗಳು ಪಾಕಿಸ್ತಾನ ಸಂಸತ್ತಿನಲ್ಲಿ ಆರಂಭಗೊಂಡಿದ್ದರೂ ದೇಶದ ರಾಜಕೀಯ ಅನಿಶ್ಚಿತ ಸ್ಥಿತಿ ಮುಂದುವರೆದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.