'ಬೆಂಗಳೂರು ಬಾಯ್ಸ್' ಟೀಸರ್ ರಿಲೀಸ್‌.. ಅಂತ, ರಣಧೀರ, ಓಂ ಸಿನಿಮಾ ನೆನಪಿಸಿದ ಫಸ್ಟ್‌ ಲುಕ್‌!

Bangalore Boys: ವಿ ಮೇಕರ್ಸ್ ಪ್ರಯತ್ನದಲ್ಲಿ ಮೂಡಿ ಬಂದಿರುವ ಬೆಂಗಳೂರು ಬಾಯ್ಸ್ ಸಿನಿಮಾದ ಫಸ್ಟ್ ಲುಕ್, ಟೀಸರ್ ರಿಲೀಸ್ ಆಗಿದೆ.  

Written by - Chetana Devarmani | Last Updated : Apr 11, 2022, 12:59 PM IST
  • ಸಿನಿಮಾ ಮಾಡೋದೇ ಒಂದು ಕಲೆ
  • 'ಬೆಂಗಳೂರು ಬಾಯ್ಸ್' ಟೀಸರ್ ರಿಲೀಸ್‌
  • ಸ್ಪೆಷಲ್ ಆಗಿದೆ ಬೆಂಗಳೂರು ಬಾಯ್ಸ್ ಟೀಸರ್‌
'ಬೆಂಗಳೂರು ಬಾಯ್ಸ್' ಟೀಸರ್ ರಿಲೀಸ್‌.. ಅಂತ, ರಣಧೀರ, ಓಂ ಸಿನಿಮಾ ನೆನಪಿಸಿದ ಫಸ್ಟ್‌ ಲುಕ್‌! title=
ಬೆಂಗಳೂರು ಬಾಯ್ಸ್

ಸಿನಿಮಾ (Kannada Cinema) ಮಾಡೋದೇ ಒಂದು ಕಲೆ. ಟೀಸರ್, ಟ್ರೇಲರ್ ಹಾಡುಗಳ ಮೂಲಕ ಸಿನಿಮಾದ ತಾಕತ್ತು ಏನು ಅನ್ನೋದನ್ನು ಸಾಬೀತು ಮಾಡುವುದು ಒಂದು ಜಾಣ್ಮೆ. ಅಂತಹ ಕಲೆಯನ್ನು ಬೆಂಗಳೂರು ಬಾಯ್ಸ್ (Bangalore Boys) ಸಿನಿಮಾ ಮೂಲಕ ವಿ ಮೇಕರ್ಸ್ ಸಾಬೀತು ಪಡಿಸಿದ್ದಾರೆ. 

ಇದನ್ನೂ ಓದಿ: Yash : ಯಶ್‌ ಬಗ್ಗೆ ಇಂಟ್ರೆಸ್ಟಿಂಗ್‌ ಮಾಹಿತಿ ಕೊಟ್ಟ ತಾಯಿ ಪುಷ್ಪ

ಸ್ಪೆಷಲ್ ಆಗಿದೆ ಬೆಂಗಳೂರು ಬಾಯ್ಸ್ ಟೀಸರ್: 

ವಿ ಮೇಕರ್ಸ್ (V Makers) ಪ್ರಯತ್ನದಲ್ಲಿ ಮೂಡಿ ಬಂದಿರುವ ಬೆಂಗಳೂರು ಬಾಯ್ಸ್ ಸಿನಿಮಾದ ಫಸ್ಟ್ ಲುಕ್, ಟೀಸರ್ ರಿಲೀಸ್ ಆಗಿದೆ. 90ರ ದಶಕದ ಸೂಪರ್ ಹಿಟ್ ಸಿನಿಮಾಗಳದ ಅಂತ, ರಣಧೀರ, ಓಂ ಹಾಗೂ ಎ ಸಿನಿಮಾಗಳ ನಾಯಕರ ರೀತಿಯಲ್ಲಿ ಸಚಿನ್ ಚೆಲುವರಾಯ ಸ್ವಾಮಿ, ಅಭಿಷೇಕ್ ದಾಸ್, ರೋಹಿತ್ ಮಿಂಚಿದ್ದಾರೆ. ಇವರ ಜೊತೆ ವೈನಿಧಿ ಜಗದೀಶ್, ಸೋನಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. 

ಬೆಂಗಳೂರು ಬಾಯ್ಸ್ ರೋಮ್ಯಾಂಟಿಕ್, ಕಾಮಿಡಿ ಎಂಟರ್ ಟೈನರ್ ಚಿತ್ರವಾಗಿದ್ದು, ಕಾಲೇಜು ಕಥೆ, ಲವ್ ಸ್ಟೋರಿ, ಎಮೋಷನ್-ಸೆಂಟಿಮೆಂಟ್ ಮಿಶ್ರಣದ ಹೂರಣವಾಗಿದ್ದು, ರ್ಯಾಪರ್ ಅಲೋಕ್  (Rapper Alok) ಸಂಗೀತ ನಿರ್ದೇಶನ, ಧರ್ಮ ವಿಷ್ ಸಂಗೀತ ಸಂಯೋಜನೆ ಸಿನಿಮಾಕ್ಕಿದೆ. 

ಇದನ್ನೂ ಓದಿ: ಈ ಕಾರಣಕ್ಕಾಗಿ ಕನ್ನಡಕ್ಕಿಂತಲೂ ತೆಲುಗಿನಲ್ಲಿ ಹೆಚ್ಚಿದ ಕೆಜಿಎಫ್‌-2 ಕ್ರೇಜ್...!

ವಿಕ್ರಮ್ ಕೆ ವೈ ಸಿನಿಮಾದ ಸಿನಿಮಾಗೆ ಬಂಡವಾಳ ಹೂಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಅಂಬಿ ನಿಂಗೆ ವಯಸ್ಸಾಯ್ತೋ ಖ್ಯಾತಿಯ ಗುರುದತ್ ಗಾಣಿಗ ಕ್ರಿಯೇಟಿವ್ ಡೈರೆಕ್ಟರ್ ಆಗಿ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡುವ ಮೂಲಕ ಪ್ರಮೋಷನ್ ಗೆ ಮುನ್ನುಡಿ ಬರೆದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News