ಸ್ನೇಹಪರವಲ್ಲದ ದೇಶಗಳ ನಾಗರಿಕರಿಗೆ ವೀಸಾ ನಿರ್ಬಂಧ: ಸುಗ್ರೀವಾಜ್ಞೆಗೆ ಸಹಿ ರಷ್ಯಾ ಅಧ್ಯಕ್ಷ
ನಾರ್ವೆ, ಐಲ್ಯಾಂಡ್, ಸ್ವಿಟ್ಜರ್‌ಲ್ಯಾಂಡ್ ಮತ್ತು ಲೀಚ್‌ಟೆನ್‌ಸ್ಟೈನ್ ಸೇರಿದಂತೆ ಯೂರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳೊಂದಿಗಿನ ತನ್ನ ಸರಳೀಕೃತ ವೀಸಾ ಒಪ್ಪಂದಗಳನ್ನು ಭಾಗಶಃ ರದ್ದುಗೊಳಿಸಿ ರಷ್ಯಾ ಆದೇಶ ಹೊರಡಿಸಿದೆ.
ಮಾಸ್ಕೋ: ಯುರೋಪಿಯನ್ ಒಕ್ಕೂಟ ರಷ್ಯಾ (Russia) ವಿರುದ್ಧ ತೆಗೆದುಕೊಂಡ ಪ್ರತಿಕೂಲ ಕ್ರಮಗಳಿಗೆ ಪ್ರತೀಕಾರವಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸ್ನೇಹಪರವಲ್ಲದ ದೇಶಗಳ ನಾಗರಿಕರಿಗೆ ವೀಸಾ (VISA) ನಿರ್ಬಂಧಗಳನ್ನು ಹೇರುವ ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ: Russia-Ukraine War: ರಷ್ಯಾನಲ್ಲಿ Marshal Law ಜಾರಿಗೆ Vladimir Putin ನಕಾರ, ಉಕ್ರೇನ್ ಬೆಂಬಲಿಸುವ ದೇಶಗಳಿಗೆ ಹೊಸ ಧಮ್ಕಿ
ಈ ಒಪ್ಪಂದದ ಪ್ರಕಾರ, ನಾರ್ವೆ, ಐಲ್ಯಾಂಡ್, ಸ್ವಿಟ್ಜರ್‌ಲ್ಯಾಂಡ್ ಮತ್ತು ಲೀಚ್‌ಟೆನ್‌ಸ್ಟೈನ್ ಸೇರಿದಂತೆ ಯೂರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳೊಂದಿಗಿನ ತನ್ನ ಸರಳೀಕೃತ ವೀಸಾ ಒಪ್ಪಂದಗಳನ್ನು ಭಾಗಶಃ ರದ್ದುಗೊಳಿಸಿ ರಷ್ಯಾ ಆದೇಶ ಹೊರಡಿಸಿದೆ ಎನ್ನಲಾಗಿದೆ.
ಇದನ್ನು ಓದಿ: ದ.ಕೊರಿಯಾಗೆ ಪರಮಾಣು ಶಸ್ತ್ರಾಸ್ತ್ರದ ಬೆದರಿಕೆ ಹಾಕಿದ ಕಿಮ್ ಜಾಂಗ್ ಉನ್ ಸಹೋದರಿ
ಅಷ್ಟೇ ಅಲ್ಲದೆ, ರಷ್ಯಾದ ವಿರುದ್ಧ, ಅಲ್ಲಿನ ನಾಗರಿಕರ ವಿರುದ್ಧ ಮತ್ತು ಕಾನೂನು ವ್ಯವಸ್ಥೆಯ ವಿರುದ್ಧ ಪ್ರತಿಕೂಲ ಕೃತ್ಯಗಳನ್ನು ಎಸಗುವ ವಿದೇಶಿಯರು ಸೇರಿದಂತೆ ಅನ್ಯ ದೇಶದ ನಿರಾಶ್ರಿತರಿಗೆ ವೈಯಕ್ತಿಕ ನಿರ್ಬಂಧಗಳನ್ನು ವಿಧಿಸಿ ರಷ್ಯಾ ವಿದೇಶಾಂಗ ಸಚಿವಾಲಯ ಆದೇಶ ಹೊರಡಿಸಿದೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.