ಮಾಸ್ಕೋ: Vladimir Putin Statement - ಉಕ್ರೇನ್ (Ukraine) ವಿರುದ್ಧ ನಡೆಯುತ್ತಿರುವ ಯುದ್ಧದ ಮಧ್ಯೆಯೇ ರಷ್ಯಾದಲ್ಲಿ (Russia) ಸಮರ ಕಾನೂನನ್ನು (Marshal Law) ಹೇರುವ ಯಾವುದೇ ಕಾರಣವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಶನಿವಾರ ಹೇಳಿದ್ದಾರೆ. ರಷ್ಯಾದಲ್ಲಿ ಮಾರ್ಷಲ್ ಕಾನೂನನ್ನು ಹೇರಬಹುದು ಎಂಬ ಊಹಾಪೋಹಗಳ ಹಿನ್ನೆಲೆ ಪುಟಿನ್ (Putin) ಈ ಹೇಳಿಕೆ ನೀಡಿದ್ದಾರೆ.
ಸಮರ ಕಾನೂನನ್ನು ಹೇರುವ ಪರಿಸ್ಥಿತಿ ಬಂದಿಲ್ಲ (War Situation)
ಬಾಹ್ಯ ದಾಳಿ ನಡೆಯುವ ದೇಶದಲ್ಲಿ ವಿಶೇಷವಾಗಿ ಸಮರ ಕಾನೂನನ್ನು ಹೇರಲಾಗುತ್ತದೆ ಎಂದು ಪುಟಿನ್ ಹೇಳಿದ್ದಾರೆ. ರಷ್ಯಾದಲ್ಲಿ ಅಂತಹ ಯಾವುದೇ ಪರಿಸ್ಥಿತಿ ಕಾಣುತ್ತಿಲ್ಲ ಎಂದ ಅವರು, ಅಂತಹ ಪರಿಸ್ಥಿತಿ ಉದ್ಭವಿಸದಿರಲಿ ಎಂದು ಹಾರೈಸಿದ್ದಾರೆ.
ಹೊರಗಿನ ಹಸ್ತಕ್ಷೇಪವನ್ನು ಸ್ವೀಕರಿಸಲಾಗುವುದಿಲ್ಲ
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ 'ನೊ ಫ್ಲೈ ಝೋನ್' ಘೋಷಿಸುವ ಯಾವುದೇ ಮೂರನೇ ವ್ಯಕ್ತಿವ್ಯಕ್ತಿಯನ್ನು "ಯುದ್ಧದಲ್ಲಿ ಶಾಮೀಲು" ಎಂದು ಮಾಸ್ಕೋ ಪರಿಗಣಿಸುತ್ತದೆ ಎಂದಿದ್ದಾರೆ. ಮಹಿಳಾ ಪೈಲಟ್‌ಗಳೊಂದಿಗಿನ ಸಭೆಯಲ್ಲಿ, ಪುಟಿನ್ ಶನಿವಾರ ಈ ದಿಕ್ಕಿನಲ್ಲಿ ಯಾವುದೇ ಕ್ರಮವನ್ನು ರಷ್ಯಾ ಹೊರಗಿನ ಹಸ್ತಕ್ಷೇಪ ಮತ್ತು ರಷ್ಯಾದ ಮಿಲಿಟರಿಗೆ ಬೆದರಿಕೆ ಎಂದು ಪರಿಗಣಿಸುತ್ತದೆ ಎಂದು ಹೇಳಿದ್ದಾರೆ "ಆ ಕ್ಷಣದಲ್ಲಿ ನಾವು ಅವರನ್ನು ಮಿಲಿಟರಿ ಸಂಘರ್ಷದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದುಭಾವಿಸುತ್ತೇವೆ ಮತ್ತು ಅವರು ಯಾರ ಸದಸ್ಯರಾಗಿದ್ದಾರೆ ಎಂಬುದು ನಮಗೆ ಮುಖ್ಯವಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Scorpion Snake Soup: ಹಾವು ಮತ್ತು ಚೇಳುಗಳಿಂದ ತಯಾರಾಗುತ್ತೆ ಈ ಸೂಪ್, ಇಷ್ಟಪಟ್ಟು ಸೇವಿಸುತ್ತಾರಂತೆ ಜನ
NATO ಕುರಿತು ಪುಟಿನ್ ಹೇಳಿದ್ದೇನು? (NATO Should Not Interfere)
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ತಮ್ಮ ದೇಶದ ಮೇಲಿನ ವಾಯುಪ್ರದೇಶವನ್ನು 'ನೊ ಫ್ಲೈ ಝೋನ್' ಎಂದು ಘೋಷಿಸಲು ನ್ಯಾಟೋವನ್ನು ಒತ್ತಾಯಿಸಿದ್ದಾರೆ. ಇಂತಹ 'ನೊ ಫ್ಲೈ ಝೋನ್' ಅನ್ನು ಘೋಷಿಸುವುದರಿಂದ ಉಕ್ರೇನ್ ಮೇಲೆ ಎಲ್ಲಾ ಅನಧಿಕೃತ ವಿಮಾನಗಳನ್ನು ನಿಷೇಧಿಸಲಾಗುವುದು ಎಂದು NATO ಹೇಳುತ್ತದೆ, ಇದು ಪರಮಾಣು-ಶಸ್ತ್ರಸಜ್ಜಿತ ರಷ್ಯಾದೊಂದಿಗೆ ಯುರೋಪಿಯನ್ ರಾಷ್ಟ್ರಗಳ ನಡುವೆ ದೊಡ್ಡ ಪ್ರಮಾಣದ ಯುದ್ಧಕ್ಕೆ ಕಾರಣವಾಗಲಿದೆ ಎಂದು ಪುಟಿನ್ ಹೇಳಿದ್ದಾರೆ,
ಇದನ್ನೂ ಓದಿ-Council of Baltic Sea States ನಿಂದ ರಷ್ಯಾ, ಬೆಲಾರಸ್ ಅಮಾನತು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.