ಜುರಿಚ್: ಸ್ವಿಟ್ಜರ್ಲೆಂಡ್ ಸರ್ಕಾರ ಬುರ್ಖಾ ಮತ್ತು ಫೇಸ್ ಕವರಿಂಗ್ ಅನ್ನು ನಿಷೇಧಿಸಲಿದೆ. ಈ ನಿಟ್ಟಿನಲ್ಲಿ ಭಾನುವಾರ ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಬಹುಸಂಖ್ಯಾತ ಜನರು ಬುರ್ಖಾ ನಿಷೇಧದ (Burqa Ban) ಪರವಾಗಿ ಮತ ಚಲಾಯಿಸಿದರು. ಜನಾಭಿಪ್ರಾಯ ಸಂಗ್ರಹಣೆಯಲ್ಲಿ, ಬುರ್ಖಾ ಮತ್ತು ಮುಖವಾಡವನ್ನು ನಿಷೇಧಿಸಬೇಕೆ ಎಂದು ದೇಶವಾಸಿಗಳನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಸುಮಾರು 51 ಪ್ರತಿಶತ ಜನರು ನಿಷೇಧವನ್ನು ಬೆಂಬಲಿಸಿದರು. ಆದ್ದರಿಂದ ಈಗ ಸರ್ಕಾರ ಶೀಘ್ರದಲ್ಲೇ ಬುರ್ಖಾ ಮತ್ತು ಮುಖವಾಡಗಳನ್ನು ಧರಿಸುವುದನ್ನು ನಿಷೇಧಿಸುವ ಬಗ್ಗೆ ಅಧಿಕೃತವಾಗಿ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.


COMMERCIAL BREAK
SCROLL TO CONTINUE READING

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಸುಮಾರು ಒಂದು ತಿಂಗಳ ಕಾಲ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದನ್ನು ಅಥವಾ ಬೇರೆ ಯಾವುದೇ ರೀತಿಯಲ್ಲಿ ಮುಖವಾಡವನ್ನು ಧರಿಸುವುದನ್ನು ನಿಷೇಧಿಸುವ ಪ್ರಸ್ತಾಪವಿತ್ತು, ಇದನ್ನು ಅನೇಕ ಸಂಸ್ಥೆಗಳು ಆಕ್ಷೇಪಿಸಿದವು. ವಿರೋಧಿಸಿದವರಲ್ಲಿ ಮುಸ್ಲಿಂ ಸಂಘಟನೆಗಳೂ ಇದ್ದವು. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸಾರ್ವಜನಿಕ ಅಭಿಪ್ರಾಯ ಪಡೆಯಲು ನಿರ್ಧರಿಸಿತು ಮತ್ತು ಭಾನುವಾರ ಜನಾಭಿಪ್ರಾಯ ಸಂಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಸುಮಾರು 51 ಪ್ರತಿಶತ ಜನರು ಬುರ್ಖಾ ಮತ್ತು ನಿಕಾಬ್ ಇತ್ಯಾದಿಗಳನ್ನು ನಿಷೇಧಿಸಬೇಕೆಂದು ಬಯಸುತ್ತಾರೆ ಎಂದು ತಿಳಿದುಬಂದಿದೆ.


ಯಾವುದೇ ಮಹಿಳೆಯರು ಬುರ್ಖಾ ಧರಿಸುವುದಿಲ್ಲ :
ಲುಸೆರ್ನ್ ವಿಶ್ವವಿದ್ಯಾಲಯವು ವರ್ಷದ ಆರಂಭದಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ (Switzerland) ಯಾವುದೇ ಮಹಿಳೆಯರು ಬುರ್ಖಾ ಧರಿಸುವುದಿಲ್ಲ, ಕೇವಲ 30 ಪ್ರತಿಶತದಷ್ಟು ಮಹಿಳೆಯರು ಮಾತ್ರ ಮುಖವಾಡಗಳನ್ನು ಧರಿಸುತ್ತಾರೆ  ಎಂದು ಹೇಳಿಕೊಂಡಿದೆ. ಸ್ವಿಟ್ಜರ್ಲೆಂಡ್‌ನ 5.2 ರಷ್ಟು ಜನಸಂಖ್ಯೆಯು ಮುಸ್ಲಿಮರಿದ್ದಾರೆ. ಇಲ್ಲಿ ವಾಸಿಸುವ ಹೆಚ್ಚಿನ ಮುಸ್ಲಿಮರು ಬೋಸ್ನಿಯಾ, ಟರ್ಕಿ ಮತ್ತು ಕೊಸೊವೊ ಮೂಲದವರು. ಈ ದೇಶಗಳ ಮುಸ್ಲಿಂ ಕುಟುಂಬಗಳ ಮಹಿಳೆಯರು ನಿಕಾಬ್ ಮತ್ತು ಬುರ್ಖಾ ಧರಿಸುತ್ತಾರೆ. ಈ ಜನಾಭಿಪ್ರಾಯ ಮುಸ್ಲಿಂ ಸಮುದಾಯದ ವಿರುದ್ಧವಾಗಿದೆ ಎಂದು ಕರೆಯಲು ಇದೇ ಮುಖ್ಯ ಕಾರಣ.


ಇದನ್ನೂ ಓದಿ - New Corona Variant! ಅಮೇರಿಕಾದಲ್ಲಿ ಪತ್ತೆಯಾದ ಖತರ್ನಾಕ್ ಕೊರೊನಾ ರೂಪಾಂತರಿ, ವ್ಯಾಕ್ಸಿನ್ ಗೂ ಬಗ್ಗಲ್ವಂತೆ


ಸ್ವಿಸ್ ಪಕ್ಷವು ಅಭಿಯಾನವನ್ನು ನಡೆಸುತ್ತಿದೆ:
ಬಲಪಂಥೀಯ ಸ್ವಿಸ್ ಪೀಪಲ್ಸ್ ಪಾರ್ಟಿ-ಎಸ್‌ವಿಪಿ  (Swiss People's Party-SVP) ಕೂಡ ಬುರ್ಖಾ ಮತ್ತು ಮುಖದ ಹೊದಿಕೆಗಳ ವಿರುದ್ಧ ಅಭಿಯಾನವನ್ನು ನಡೆಸಿದೆ. ಜನಾಭಿಪ್ರಾಯ ಸಂಗ್ರಹಣೆಗೆ ಮುಂಚಿತವಾಗಿ, ಪಕ್ಷವು ಜಾಹೀರಾತು ಫಲಕಗಳನ್ನು ಹಾಕಿತು, ಇದರಲ್ಲಿ ಬುರ್ಖಾ ಧರಿಸಿದ ಮಹಿಳೆಯ ಚಿತ್ರದೊಂದಿಗೆ ಉಗ್ರವಾದವನ್ನು ನಿಲ್ಲಿಸುತ್ತದೆ ಎಂದು ಹೇಳಲಾಗಿದೆ. ಎಸ್‌ವಿಪಿ ಸಂಸದ ಮತ್ತು ಜನಾಭಿಪ್ರಾಯ ಸಮಿತಿಯ ಸದಸ್ಯ ವಾಲ್ಟರ್ ವೋಬ್ಮನ್ (Walter Wobmann) ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವಂತೆ ಮನವಿ ಮಾಡಿದರು, ಸ್ವಿಟ್ಜರ್ಲೆಂಡ್‌ಗೆ ಮುಖ ತೋರಿಸುವ ಸಂಪ್ರದಾಯವಿದೆ, ಇದು ನಮ್ಮ ಮೂಲಭೂತ ಸ್ವಾತಂತ್ರ್ಯದ ಸಂಕೇತವಾಗಿದೆ ಎಂದು ಹೇಳಿದರು.


'ಇದು ಮುಸ್ಲಿಮರ ಸ್ವಾತಂತ್ರ್ಯವನ್ನು ತಡೆಯುತ್ತದೆ' :
ಮಾಧ್ಯಮ ವರದಿಗಳ ಪ್ರಕಾರ, ಮುಖದ ಹೊದಿಕೆಗೆ ಸಂಬಂಧಿಸಿದ ಪ್ರಸ್ತಾವನೆಯಲ್ಲಿ ಇಸ್ಲಾಂ ಮತ್ತು ಮುಸ್ಲಿಂ (Muslims) ಮಹಿಳೆಯರನ್ನು ನೇರವಾಗಿ ಉಲ್ಲೇಖಿಸಲಾಗಿಲ್ಲ. ಹಿಂಸಾತ್ಮಕ ಪ್ರತಿಭಟನಾಕಾರರು ಮತ್ತು ಮುಖವಾಡ ಧರಿಸಿದ ದುಷ್ಕರ್ಮಿಗಳನ್ನು ತಡೆಯಲು ಮುಖದ ಹೊದಿಕೆಗಳನ್ನು ನಿಷೇಧಿಸುವುದು ಅಗತ್ಯ ಎಂದು ಪ್ರಸ್ತಾಪದಲ್ಲಿ ತಿಳಿಸಲಾಗಿದೆ. ಆದರೆ, ಮುಸ್ಲಿಂ ಸಂಘಟನೆಗಳು ಇದನ್ನು ಬುರ್ಖಾ ನಿಷೇಧ ಎಂದು ಕರೆಯುತ್ತಿವೆ ಮತ್ತು ಇದು ಮುಸ್ಲಿಂ ಮಹಿಳೆಯರ ಸ್ವಾತಂತ್ರ್ಯವನ್ನು ತಡೆಯುತ್ತದೆ ಎಂದು ಅವರು ಹೇಳುತ್ತಾರೆ. ಈ ಪ್ರಸ್ತಾಪವು ಅವರ ಧರ್ಮದ ಪ್ರಕಾರ ಬುರ್ಖಾ ಧರಿಸುವುದನ್ನು ನಿಷೇಧಿಸುತ್ತದೆ.


ಇದನ್ನೂ ಓದಿ - Driverless Bus: ಡ್ರೈವರ್ ಇಲ್ಲದ ಬಸ್ ನಲ್ಲಿ ಎಂದಾದರು ಪ್ರಯಾಣ ಬೆಳೆಸಿದ್ದೀರಾ?


ಇಲ್ಲಿ ಸಂಪೂರ್ಣವಾಗಿ ನಿಷೇಧವಿದೆ :
ಮುಖ ಕವಚವನ್ನು ಫ್ರಾನ್ಸ್ 2011 ರಲ್ಲಿ ಸಂಪೂರ್ಣವಾಗಿ ನಿಷೇಧಿಸಿತು. ಡೆನ್ಮಾರ್ಕ್, ಆಸ್ಟ್ರಿಯಾ, ನೆದರ್ಲ್ಯಾಂಡ್ಸ್ ಮತ್ತು ಬಲ್ಗೇರಿಯಾದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸಲಾಗಿದೆ. ಆದರೆ ಸ್ವಿಟ್ಜರ್ಲೆಂಡ್ನಲ್ಲಿ ವಾಸಿಸುವ ಮುಸ್ಲಿಮರು ಬುರ್ಖಾ ನಿಷೇಧವು ಸಂಪೂರ್ಣವಾಗಿ ತಪ್ಪು ಎಂದು ನಂಬುತ್ತಾರೆ ಮತ್ತು ಇದು ಸ್ವಿಟ್ಜರ್ಲೆಂಡ್ ಇಸ್ಲಾಂ ವಿರೋಧಿ ದೇಶ ಎಂದು ಜಗತ್ತಿಗೆ ಸಂದೇಶವನ್ನು ರವಾನಿಸುತ್ತದೆ. ನಿರ್ಬಂಧಗಳನ್ನು ಹೇರುವ ಮೂಲಕ ತಮ್ಮ ಹಕ್ಕುಗಳನ್ನು ಮಿತಿಗೊಳಿಸಲು ಸರ್ಕಾರ ಬಯಸಿದೆ ಎಂದು ಅವರು ಹೇಳುತ್ತಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.