Driverless Bus: ಡ್ರೈವರ್ ಇಲ್ಲದ ಬಸ್ ನಲ್ಲಿ ಎಂದಾದರು ಪ್ರಯಾಣ ಬೆಳೆಸಿದ್ದೀರಾ?

Driverless Bus: ಈ ಎಲ್ಲಾ ಬಸ್ ಗಳು ಇಲೆಕ್ಟ್ರಿಕ್ ಮೋಡ್ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧರಿಸಿ (Buses That Run On Artificial Intellegence) ಓಡಾಟ ನಡೆಸುತ್ತವೆ.

Written by - Nitin Tabib | Last Updated : Mar 6, 2021, 10:54 PM IST
  • ಚಾಲಕ ರಹಿತ ಬಸ್ ಗಳಲ್ಲಿ ಎಂದಾದರು ಸಂಚರಿಸಿದ್ದೀರಾ?
  • ಇಲ್ಲ ಎಂದಾದರೆ, ಇದಕ್ಕಾಗಿ ನೀವು ಸ್ಪೇನ್ ಗೆ ಭೇಟಿ ನೀಡಬೇಕು.
  • ಈ ಬಸ್ ಗಳು ಹೇಗೆ ಸಂಚರಿಸುತ್ತವೆ ತಿಳಿದುಕೊಳ್ಳಲು ಈ ವರದಿ ಓದಿ
Driverless Bus: ಡ್ರೈವರ್ ಇಲ್ಲದ ಬಸ್ ನಲ್ಲಿ ಎಂದಾದರು ಪ್ರಯಾಣ ಬೆಳೆಸಿದ್ದೀರಾ?  title=
Driverless Bus (File Photo)

ನವದೆಹಲಿ: Driverless Bus - ನೀವು ಎಂದಾದರೂ ಡ್ರೈವರ್ ಇಲ್ಲದ ಬಸ್ ಹತ್ತಿದ್ದೀರಾ? ಇಲ್ಲ ಎಂದಾದರ ಅದಕ್ಕಾಗಿ ನೀವು ಸ್ಪೇನ್‌ಗೆ ಹೋಗಬೇಕು. ಸ್ಪೇನ್‌ನ ಮಲಗಾದಲ್ಲಿ ವಿಜ್ಞಾನ ಯಾವ ರೀತಿ ಕಮಾಲ್ ಮಾಡಿದೆ ಎಂದರೆ,  ಇಲ್ಲಿನ ರಸ್ತೆಗಳ ಮೇಲೆ ಚಾಲಕರಹಿತ ಬಸ್ ಗಳು (Driverless Bus in Spain) ಓಡಾಟ ನಡೆಸುತ್ತಿವೆ. ಇದು ಸಂಪೂರ್ಣ ಆಟೋ ಪೈಲಟ್ ಮೋಡ್‌ನಲ್ಲಿ ರಸ್ತೆಗೆ ಇಳಿಯುತ್ತವೆ. ಈ ಬಸ್ ಗಳಲ್ಲಿ ಬಸ್‌ನ ಸ್ಟೀರಿಂಗ್ ಸಂವೇದಕದ ಮೂಲಕ ತಿರುಗುತ್ತದೆ. ಹೌದು, ಇದು ಖಂಡಿತವಾಗಿಯೂ ಭಾರತೀಯರಿಗೆ ಆಘಾತಕಾರಿ ಸಂಗತಿಯಾಗಿದೆ, ಆದರೆ ಸ್ಪೇನ್‌ನ (Spain) ಜನರಿಗೆ ಇದು ತುಂಬಾ ಸರಳ ವಿಷಯವಾಗಿ ಮಾರ್ಪಟ್ಟಿದೆ.

ಅಟೋ ಪೈಲೆಟ್ ಮೋಡ್ ಸಂಚರಿಸುತ್ತವೆ ಬಸ್ ಗಳು
ಸ್ಪೇನ್ ನಲ್ಲಿ ಆಟೋ ಪೈಲೆಟ್ ಮೋಡ್ ನಲ್ಲಿ ಬಸ್ ಗಳು ಸಂಚರಿಸುತ್ತವೆ. ಸ್ಪೇನ್ ನ ಮಲಗಾ ಪಟ್ಟಣದಲ್ಲಿ ಮೊಟ್ಟಮೊದಲ ಬಾರಿಗೆ ಇಂತಹ ಡ್ರೈವರ್ ಲೆಸ್ ಬಸ್ ಗಳ ಸಂಚಾರ ಆರಂಭಗೊಂಡಾಗ ಈ ವಿಶಿಷ್ಟ ಬಸ್ ನಲ್ಲಿ ಪ್ರಯಾಣ ಬೆಳೆಸಲು ಜನರ ದಂಡೆ ಹರಿದು ಬಂದಿದೆ. ಇದೀಗ ಒಮ್ಮೆ ಡ್ರೈವರ್ ಬಸ್ ನ ಶೀಟ್ ಮೇಲೆ ಕುಳಿತಿತ್ತು ಆತ ಏನನ್ನು ಮಾಡುತ್ತಿಲ್ಲ ಮತ್ತು ಬಸ್ ತನ್ನಷ್ಟಕ್ಕೆ ತಾನೇ ಸಾಗುತ್ತಿದೆ ಎಂಬುದರ ಕಲ್ಪನೆಯನ್ನೊಮ್ಮೆ ಮಾಡಿ. ಈ ಸಂಗತಿ ನಿಮಗೆ ಆಶರ್ಯಕ್ಕೀಡು ಮಾಡಲಿದೆ.

ಇದನ್ನೂ ಓದಿ-UCAV Arrow: ವಿಶ್ವದ ಮೊಟ್ಟಮೊದಲ ಮಾನವರಹಿತ ಸೂಪರ್ ಸಾನಿಕ್ ಯುದ್ಧ ಡ್ರೋನ್ ಬಿಡುಗಡೆ

ಇದರಲ್ಲಿ ವಿಶಿಷ್ಟ ರೀತಿಯ ಸೆನ್ಸಾರ್ ಬಳಸಲಾಗಿದೆ
ಈ ರೀತಿಯ ಬಸ್ ಗಳಲ್ಲಿ ಸ್ಟೀಯರಿಂಗ್ ತನ್ನಷ್ಟಕ್ಕೆ ತಾನೇ ತಿರುಗುತ್ತದೆ. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿಯೂ ಮೂಡಬಹುದು. ಹೌದು, ಸೈನ್ಸ್ ಸಹಾಯದಿಂದ ಇದು ಸಾಧ್ಯ. ನಿಜ ಹೇಳುವುದಾದರೆ ಈ ಬಸ್ ಗಳಲ್ಲಿ ಸೆನ್ಸಾರ್ ಅಳವಡಿಸಲಾಗಿದೆ. ಇವು ಆಪರೇಟಿಂಗ್ ಸಾಫ್ಟ್ ವೆಯರ್ ಸಹಾಯದಿಂದ ಕಾರ್ಯನಿರ್ವಹಿಸುತ್ತವೆ. ಈ ಸಾಫ್ಟ್ ವೆಯರ್ ಬಸ್ ನಲ್ಲಿಯೇ ಅಳವಡಿಸಲಾಗಿದೆ ಎಂಬುದು ಇಲ್ಲಿ ವಿಶೇಷ. ವಾಸ್ತವದಲ್ಲಿ ಈ ಬಸ್ ಗಳು ಇಲೆಕ್ಟ್ರಿಕ್ ಮೋಡ್ ಹಾಗೂ ಕೃತಕ ಬುದ್ಧಿಮತ್ತೆಯ (Electric-AI Busses) ಸಹಾಯದಿಂದ ಓಡಾಟ ನಡೆಸುತ್ತವೆ.

ಇದನ್ನೂ ಓದಿ-Indian Driving Licence: ಈ 15 ದೇಶಗಳಲ್ಲಿ ಚಿಂತೆ ಬಿಟ್ಟು ವಾಹನ ಓಡಿಸಿ, ಆದ್ರೆ Indian DL ನಿಮ್ಹತ್ರ ಇರಲಿ

ವಿಶ್ವದ ಹಲವು ದೇಶಗಳು ಉದಾಹರಣೆಗೆ ಜರ್ಮನಿಯಲ್ಲಿಯೂ ಕೂಡ ಸ್ಪೇನ್ ನಂತೆಯೇ ಎಲೆಕ್ಟ್ರಿಕ್ ಬಸ್ ಗಳು ಆಟೋ ಮಾಡ್ ನಲ್ಲಿ ಸಂಚರಿಸುತ್ತವೆ. ಈ ಬಸ್ ಗಳ ವೈಶಿಷ್ಟ್ಯ ಎಂದರೆ ಇವು ವಾಯುಮಾಲಿನ್ಯ ಹರಡುವುದಿಲ್ಲ. ಇದೀಗ ಭಾರತ ಕೂಡ ಈ ರೀತಿಯ ಎಲೆಕ್ಟ್ರಿಕ್ ವಾಹನಗಳಿಗಾಗಿ ರಸ್ತೆ ನಿರ್ಮಾಣದತ್ತ ಹರಿದಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-Viral vedio : 12ನೇ ಮಹಡಿಯಿಂದ ಕೆಳಗೆ ಬಿದ್ದರೂ ಕಿಲಕಿಲ ನಗುತ್ತಿತ್ತು ಮುದ್ದು ಕಂದ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News