ಪ್ಯಾರಿಸ್: 37 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದ್ದ ರಾಬರ್ಟ್ ಮುಗಾಬೆ ಕೊನೆಗೂ ಜಿಂಬಾಬ್ವೆಯ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.  ತನ್ನ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಆಫ್ರಿಕಾದ ಮುಖ್ಯಸ್ಥರಾಗಿದ್ದರು.


COMMERCIAL BREAK
SCROLL TO CONTINUE READING

93 ವರ್ಷದ ಮುಗಾಬೆ, ತನ್ನ ಅಧಿಕಾರಾವಧಿಯ ಪ್ರಚೋದಕವನ್ನು ವಸಾಹತಿನ ಶಕ್ತಿಯಿಂದ ಉಳಿಸಿಕೊಳ್ಳಲು ಪ್ರಯತ್ನಿಸಿದ್ದನು. ಆದರೆ ಹೆಚ್ಚೂಕಮ್ಮಿ ದಬ್ಬಾಳಿಕೆಗಾರನಾಗಿದ್ದನು ಎಂದು ಇವನ ಕಾರ್ಯಪ್ರವೃತ್ತಿಗಳು ತಿಳಿಸುತ್ತವೆ. ಅದಲ್ಲದೆ ತಮ್ಮ ಪತ್ನಿ ಗ್ರೇಸ್ ಅವರನ್ನೇ ಮುಂದಿನ ಉತ್ತರಾಧಿಕಾರಿಯನ್ನಾಗಿ ಮಾಡುವ ಮುಗಾಬೆ ನಿರ್ಧಾರಕ್ಕೆ ಅಲ್ಲಿನ ಪ್ರಜೆಗಳೂ ಸೇರಿದಂತೆ ಸೇನೆ ಸಹ ಆಕ್ರೋಶ ವ್ಯಕ್ತ ಪಡಿಸಿತ್ತು. ಇದೇ ಕಾರಣಕ್ಕಾಗಿ ಇತ್ತೀಚಿಗೆ ಮುಗಾಬೆಯವರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಇದೀಗ ಮುಗಾಬೆಯನ್ನು ಅವರ ಪಕ್ಷದ ಮುಖಂಡರೆ ವಿರೋಧಗೊಳಿಸಿದ್ದು ಅವರನ್ನು ಅಧ್ಯಕ್ಷರ ಸ್ಥಾನದಿಂದ ವಜಾಗೊಳಿಸಿದ್ದು ಮಾತ್ರವಲ್ಲದೇ ಪಕ್ಷದಿಂದಲೇ ವಜಾಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.


ಇತ್ತೀಚಿಗೆ ನಡೆದಿದ್ದ ದಿಡೀರ್ ಬೆಳವಣಿಗೆಯಲ್ಲಿ ಜಿಂಬಾಬ್ವೆ ಆಡಳಿತವನ್ನು ವಶಪಡಿಸಿಕೊಂಡಿದ್ದ ಸೇನೆ ಮುಗಾಬೆ ರಾಜೀನಾಮೆಗೆ ಒತ್ತಾಯಿಸಿತ್ತು. ಒತ್ತಡಕ್ಕೆ ಮಣಿದ ಮುಗಾಬೆ ಜಿಂಬಾಬ್ವೆ ಸಂವಿಧಾನದ 96ನೇ ಕಾಲಂಗೆ ಅನುಗುಣವಾಗಿ ತಕ್ಷಣ ಜಾರಿಗೆ ಬರುವಂತೆ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸುತ್ತಿದ್ದೇನೆ" ಎಂದು ಪತ್ರ ಬರೆದಿರುವುದಾಗಿ ಸ್ಪೀಕರ್ ಜೇಕಬ್ ಮಂಗಳವಾರ ತಿಳಿಸಿದ್ದಾರೆ.