Russia-Ukraine War: ಮಾಸ್ಕೋ : ಉಕ್ರೇನ್ ಜೊತೆ ನಡೆಯುತ್ತಿರುವ ಬಿಕ್ಕಟ್ಟಿನ ನಡುವೆ ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಿಲಿಟರಿ ಕ್ರಮವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಇದರೊಂದಿಗೆ ಉಕ್ರೇನ್ ವಿರುದ್ಧದ ರಷ್ಯಾ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ಮಾಡುವವರ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳುವುದಾಗಿ ರಷ್ಯಾ ಅಧ್ಯಕ್ಷ ಪುಟಿನ್ (Russian President Vladimir Putin) ವಾಗ್ದಾನ ನಡೆಸಿದ್ದಾರೆ. ಅದೇ ಸಮಯದಲ್ಲಿ, ಈ ಪ್ರಕಟಣೆಯ ನಂತರ, ವಿಶ್ವಸಂಸ್ಥೆಯು (ಯುಎನ್) ಯುದ್ಧವನ್ನು ನಿಲ್ಲಿಸುವಂತೆ ಪುಟಿನ್ಗೆ ಮನವಿ ಮಾಡಿದೆ. ರಷ್ಯಾ ತನ್ನ ಪಡೆಗಳ ದಾಳಿಯನ್ನು ನಿಲ್ಲಿಸಬೇಕು ಎಂದು ಯುಎನ್ ಹೇಳಿದೆ.


COMMERCIAL BREAK
SCROLL TO CONTINUE READING

ರಾಜಧಾನಿ ಕೀವ್‌ನಲ್ಲಿ ಸ್ಫೋಟಗಳು ಪ್ರಾರಂಭ:
ಸುದ್ದಿ ಸಂಸ್ಥೆ AFP ಪ್ರಕಾರ, ರಷ್ಯಾದ ಯುದ್ಧ ಘೋಷಣೆಯ ನಂತರ, ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಸ್ಫೋಟಗಳ ವರದಿಗಳಿವೆ. ಉಕ್ರೇನ್ ರೆಡ್ ಲೈನ್ ದಾಟಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. 


Russia Ukraine Crisis) ಕಳೆದ ಹಲವಾರು ದಿನಗಳಿಂದ ಹೊಗೆಯಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಯುರೋಪ್ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಮಾತುಕತೆಯ ಮಟ್ಟದಿಂದಲೇ ಪರಿಹಾರ ಕಂಡುಕೊಳ್ಳುವಂತೆ ಎರಡೂ ದೇಶಗಳಿಗೆ ಸೂಚಿಸಿದ್ದವು. ಏತನ್ಮಧ್ಯೆ, ರಷ್ಯಾ ಉಕ್ರೇನ್‌ನ ಎರಡು ಪ್ರದೇಶಗಳನ್ನು ಪ್ರತ್ಯೇಕ ದೇಶವಾಗಿ ಗುರುತಿಸಿದೆ. ಇದರ ನಂತರ, ಅಮೆರಿಕ ಮತ್ತು ಯುರೋಪ್ ಸೇರಿದಂತೆ ಇತರ ದೇಶಗಳು ರಷ್ಯಾದ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಿದವು.


ಇದನ್ನೂ ಓದಿ- Russia-Ukraine Conflict: ಆರಂಭವಾಯ್ತಾ ರಕ್ತದೋಕುಳಿ? ಐವರು ನುಸುಳುಕೋರರನ್ನು ಸದೆಬಡಿದ ರಷ್ಯಾ, Fake News ಎಂದ ಉಕ್ರೇನ್!


ಆಕ್ರಮಣದ ಉದ್ದೇಶವಿಲ್ಲ ಎಂದ ರಷ್ಯಾ:
ನಿರ್ಬಂಧಗಳ ಹೊರತಾಗಿಯೂ, ರಷ್ಯಾ ಇಂದು ಯುದ್ಧ ಘೋಷಿಸಿದೆ. ಸುದ್ದಿ ಸಂಸ್ಥೆ AFP ಪ್ರಕಾರ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ಅವರು ಔಪಚಾರಿಕವಾಗಿ ಯುದ್ಧವನ್ನು ಘೋಷಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಡೀ ವಿಶ್ವವೇ ಸ್ಥಬ್ಧಗೊಂಡಿದೆ. ಯುದ್ಧವನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯು ವ್ಲಾಡಿಮಿರ್ ಪುಟಿನ್ ಅವರನ್ನು ಕೇಳಿದೆ. ಅದೇ ಸಮಯದಲ್ಲಿ, ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಯಾವುದೇ ಉದ್ದೇಶವಿಲ್ಲ ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ.


ಉಕ್ರೇನ್ ಸೈನ್ಯ ಶರಣಾಗತಿ:
ಅದೇ ಸಮಯದಲ್ಲಿ, ರಷ್ಯಾದ ಯುದ್ಧದ ಘೋಷಣೆಯ ನಂತರ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನಿಯನ್ ಸೇನೆಯು ಶರಣಾಗಬೇಕು ಮತ್ತು ಯುದ್ದಕ್ಕೆ ಪ್ರಚೋದನೆ ನೀಡದೆ ಹಿಂದಿರುಗಬೇಕು ಎಂದು ಒತ್ತಾಯಿಸಿದ್ದಾರೆ. ಅದೇ ಸಮಯದಲ್ಲಿ, ನ್ಯಾಟೋ ದೇಶಗಳ ಬಗ್ಗೆಯೂ ಮಾತನಾಡಿರುವ ಪುಟಿನ್, ನಾವು ಎಲ್ಲಾ ರೀತಿಯ ಪರಿಣಾಮಗಳಿಗೆ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಯಾರಾದರೂ ಕಾರ್ಯಾಚರಣೆಗೆ ಅಡ್ಡಿಪಡಿಸಿದರೆ, ಅದರ ಪರಿಣಾಮಗಳನ್ನು ಎದುರಿಸಲು ಅವರು ಸಿದ್ಧರಾಗಿರಬೇಕು ಎಂದವರು ಎಚ್ಚರಿಸಿದ್ದಾರೆ.


ಇದನ್ನೂ ಓದಿ- Helicopter Crash Video: ಕಡಲತೀರದಲ್ಲಿ ಸಾವಿರಾರು ಜನರ ಕಣ್ಣೆದುರೇ ಹೆಲಿಕಾಪ್ಟರ್ ಪತನ, ಬೆಚ್ಚಿ ಬೀಳಿಸುವ ದೃಶ್ಯ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.