ರಷ್ಯಾದಲ್ಲಿ ಸೆರೆಸಿಕ್ಕ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕನ ವಿಚಾರಣೆಯ ಸಂದರ್ಭದಲ್ಲಿ ಮಹತ್ವದ ಮಾಹಿತಿ ಹೊರಬಿದ್ದಿದೆ. ರಷ್ಯಾದಿಂದ ಲಭಿಸಿರುವ ಮಾಹಿತಿಯ ಪ್ರಕಾರ, ಬಿಜೆಪಿಯ ದೊಡ್ಡ ನಾಯಕರೊಬ್ಬರು ಈ ಭಯೋತ್ಪಾದಕನ ಟಾರ್ಗೆಟ್ ಲಿಸ್ಟ್ ನಲ್ಲಿದ್ದಾರೆ. ಭಾರತದಲ್ಲಿ ಭಯೋತ್ಪಾದಕ ದಾಳಿಗೆ ಯೋಜಿಸಿದ್ದ ಐಎಸ್ ಆತ್ಮಾಹುತಿ ಬಾಂಬ್ ದಾಳಿಕೋರನನ್ನು ಸದ್ಯ ರಷ್ಯಾ ಬಂಧಿಸಿದ್ದು, ಭಾರತೀಯ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಜನರನ್ನು ಕರೆಳಿಸಿದ ಚೀನಾದ ಹೊಸ ನೀತಿ: ಕೊರೊನಾ ಮಧ್ಯೆ ನೆರೆರಾಷ್ಟ್ರ ಮಾಡಿದ ಕೆಲಸ ಏನುಗೊತ್ತಾ?


ಮಾಹಿತಿ ಪಡೆದ ಬಳಿಕ ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಸಚಿವಾಲಯದ ಪ್ರಕಾರ, “ಐಸಿಸ್ ತನ್ನ ಸಿದ್ಧಾಂತವನ್ನು ಪ್ರಚಾರ ಮಾಡಲು ವಿವಿಧ ಇಂಟರ್ನೆಟ್ ಆಧಾರಿತ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಿದೆ. ಈ ನಿಟ್ಟಿನಲ್ಲಿ ಸೈಬರ್‌ಸ್ಪೇಸ್ ಅನ್ನು ಸಂಬಂಧಪಟ್ಟ ಏಜೆನ್ಸಿಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ ಮತ್ತು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ತಿಳಿಸಿದೆ.


ಬಂಧಿತನನ್ನು ಐಸಿಸ್ ಟರ್ಕಿಯಲ್ಲಿ ಆತ್ಮಹತ್ಯಾ ಬಾಂಬರ್ ಆಗಿ ನೇಮಿಸಿಕೊಂಡಿದೆ ಎಂದು ರಷ್ಯಾ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು. ಸದ್ಯ ಈ ವಿಚಾರಣೆಯು ಮುಂದುವರೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.


“ISIS ಮತ್ತು ಅದರ ಎಲ್ಲಾ ಅಭಿವ್ಯಕ್ತಿಗಳನ್ನು ಭಯೋತ್ಪಾದಕ ಸಂಘಟನೆ ಎಂದು ಸೂಚಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಮೊದಲ ಪಟ್ಟಿಯಲ್ಲಿ ಕೇಂದ್ರ ಸರ್ಕಾರವು ಈ ವಿಚಾರವನ್ನು ಸೇರಿಸಿದೆ.


ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ನಿಷೇಧಿತ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್) ಅಂತರರಾಷ್ಟ್ರೀಯ ಘಟಕದ ಸದಸ್ಯನೆಂದು ಆತ್ಮಹತ್ಯಾ ಬಾಂಬ್ ಕೋರನನ್ನು ಗುರುತಿಸಿದೆ. ಈ ಭಯೋತ್ಪಾದಕ ಮಧ್ಯ ಏಷ್ಯಾ ದೇಶದ ನಿವಾಸಿಯಾಗಿದ್ದು, ಟರ್ಕಿಯಲ್ಲಿ ಆತ್ಮಹತ್ಯಾ ಬಾಂಬರ್ ಆಗಿ ನೇಮಕಗೊಳಿಸಲಾಗಿತ್ತು. ಇನ್ನು ಈತನ ಟಾರ್ಗೆಟ್ ಲಿಸ್ಟ್ ನಲ್ಲಿ ಭಾರತದ ದೊಡ್ಡ ನಾಯಕನ ಹೆಸರೂ ಸಹ ಇತ್ತು ಎಂದು ಹೇಳಲಾಗಿದೆ.  


ಇದನ್ನೂ ಓದಿ: ಉದ್ಯೋಗದಲ್ಲಿ ಸಿಗುವುದು ಪದೋನ್ನತಿ, ಮುಂದಿನ ಎರಡು ತಿಂಗಳು ಈ ರಾಶಿಯವರಿಗೆ ಹಣದ ಸುರಿ ಮಳೆ


ರಷ್ಯಾದ ಏಜೆನ್ಸಿಗಳು ಈ ಆತ್ಮಹತ್ಯಾ ಬಾಂಬರ್ ನಿರಂತರವಾಗಿ ತನಿಖೆ ನಡೆಸುತ್ತಿವೆ. ಭಾರತೀಯ ಏಜೆನ್ಸಿಗಳು ಈ ವಿಷಯದಲ್ಲಿ ಹೊಸ ಬೆಳವಣಿಗೆಗಾಗಿ ಕಾಯುತ್ತಿದ್ದಾರೆ. ಸದ್ಯ ಈ ಭಯೋತ್ಪಾದಕ ಗುರಿಯಾಗಿಸಲು ಹೊರಟಿದ್ದ ಬಿಜೆಪಿ ನಾಯಕನ ಹೆಸರು ಬಹಿರಂಗವಾಗಿಲ್ಲ. ಪ್ರಪಂಚದ ಅನೇಕ ದೇಶಗಳಂತೆ, ಇಸ್ಲಾಮಿಕ್ ಸ್ಟೇಟ್ ಭಾರತದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿದೆ. ಅದರ ಎಲ್ಲಾ ಘಟಕಗಳ ಚಟುವಟಿಕೆಗಳು ಭಯೋತ್ಪಾದಕ ಚಟುವಟಿಕೆಗಳ ವ್ಯಾಪ್ತಿಗೆ ಬರುತ್ತವೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ