ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೇಪಾಳ (ಚೀನಾ-ನೇಪಾಳ ಗಡಿ) ಪಕ್ಕದಲ್ಲಿರುವ ತನ್ನ ಪ್ರದೇಶಗಳಲ್ಲಿ ಚೀನಾ ಲಾಕ್‌ಡೌನ್ ವಿಧಿಸಿದೆ. ಈ ಕ್ರಮದ ಅಡಿಯಲ್ಲಿ ನೇಪಾಳದ ಪಕ್ಕದಲ್ಲಿರುವ ರಾಸುವಾಗಾಧಿ ಮತ್ತು ಟಾಟೋಪಾನಿ ಗಡಿ ಬಿಂದುಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ನೇಪಾಳದಿಂದ ಬಂದ ನೂರಾರು ಕಂಟೈನರ್‌ಗಳು ಚೀನಾದಲ್ಲಿ ಸಿಲುಕಿಕೊಂಡಿವೆ. ಚೀನಾದ ಈ ನಿರ್ಧಾರದ ಬಗ್ಗೆ ನೇಪಾಳದ ವ್ಯಾಪಾರಿಗಳಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೀನಾ ಆಗಸ್ಟ್ 10 ರಿಂದ ಟಾಟೋಪಾನಿ ಬಾರ್ಡರ್ ಪಾಯಿಂಟ್ ಮತ್ತು ಆಗಸ್ಟ್ 14ರಿಂದ ರಾಸುವಾಗಾಧಿ ಬಾರ್ಡರ್ ಪಾಯಿಂಟ್ ಅನ್ನು ಮುಚ್ಚಿದೆ. ವ್ಯಾಪಾರಿಗಳಲ್ಲಿ ಹೆಚ್ಚುತ್ತಿರುವ ಅಸಮಾಧಾನದಿಂದಾಗಿ ನೇಪಾಳದ ವಿದೇಶಾಂಗ ಸಚಿವ ನಾರಾಯಣ ಖಡ್ಕಾ ಅವರು ಚೀನಾದ ಪಕ್ಕದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಇದನ್ನೂ ಓದಿ: Imran Khan : ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನಾ ಕಾಯ್ದೆಯಡಿ ಪ್ರಕರಣ ದಾಖಲು
ನೇಪಾಳದಲ್ಲಿ ಹಬ್ಬಗಳಿರುವ ಕಾರಣ ನೇಪಾಳದ ವ್ಯಾಪಾರಿಗಳು ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳು, ಪಾದರಕ್ಷೆಗಳು ಮತ್ತು ಆಹಾರ ಪದಾರ್ಥಗಳು ಸೇರಿದಂತೆ ಚೀನಾದಿಂದ ಹೆಚ್ಚಿನ ಪ್ರಮಾಣದ ಸರಕುಗಳನ್ನು ಆರ್ಡರ್ ಮಾಡಿದ್ದಾರೆ. ನೇಪಾಳಿ ವ್ಯಾಪಾರಿಗಳು ಹೇಳುವಂತೆ, ಈ ಹಿಂದೆ ಕೋವಿಡ್ ಹೆಸರಿನಲ್ಲಿ ಚೀನಾ ಗಡಿ ಬಿಂದುವನ್ನು ಮುಚ್ಚಲಾಗಿತ್ತು. ಇದರಿಂದಾಗಿ ನೇಪಾಳದ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದರು.
ವರದಿಯ ಪ್ರಕಾರ, ನೇಪಾಳಿ ವ್ಯಾಪಾರಿಗಳ 300 ಕ್ಕೂ ಹೆಚ್ಚು ಕಂಟೈನರ್‌ಗಳು ಈ ಎರಡು ಗಡಿ ಬಿಂದುಗಳಲ್ಲಿ ಸಿಲುಕಿಕೊಂಡಿವೆ. ನೇಪಾಳದ ವ್ಯಾಪಾರಿಗಳು ವರ್ಷವಿಡೀ ಈ ಹಬ್ಬಗಳಿಗಾಗಿ ಕಾಯುತ್ತಾರೆ ಏಕೆಂದರೆ ಅವರು ಈ ಸಮಯದಲ್ಲಿ ಉತ್ತಮ ಹಣವನ್ನು ಗಳಿಸುತ್ತಾರೆ. ಚೀನಾದ ಲಾಕ್‌ಡೌನ್ ನಿರ್ಧಾರದಿಂದಾಗಿ ನೇಪಾಳದ ಅನೇಕ ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.
ಚೀನಾ ಗಡಿಯನ್ನು ಸೀಲ್ ಮಾಡಿದ ನಂತರ, ಈಗ ನೇಪಾಳದ ಅನೇಕ ವ್ಯಾಪಾರಿಗಳು ಕೋಲ್ಕತ್ತಾ ಗಡಿಯ ಮೂಲಕ ನೇಪಾಳಕ್ಕೆ ಸರಕುಗಳನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಆದಾಗ್ಯೂ, ಕೋಲ್ಕತ್ತಾ ಬಂದರಿನಿಂದ ನೇಪಾಳಕ್ಕೆ ತರಲು ಎರಡು ತಿಂಗಳವರೆಗೆ ತೆಗೆದುಕೊಳ್ಳಬಹುದು. ವ್ಯಾಪಾರ ಗಡಿಯನ್ನು ಮುಚ್ಚಲಿದ್ದೇವೆ ಎಂದು ಚೀನಾ ಮೊದಲೇ ತಿಳಿಸಿದ್ದರೆ, ತಮ್ಮ ಕಂಟೇನರ್ ಅನ್ನು ಕೋಲ್ಕತ್ತಾ ಬಂದರಿನಿಂದ ಆಮದು ಮಾಡಿಕೊಳ್ಳುತ್ತಿದ್ದರು ಎಂದು ನೇಪಾಳದವರು ಹೇಳುತ್ತಿದ್ದಾರೆ. ನೇಪಾಳದ ಎಷ್ಟು ಕಂಟೈನರ್‌ಗಳು ಚೀನಾದ ಬದಿಯಲ್ಲಿ ಸಿಲುಕಿಕೊಂಡಿವೆ ಎಂಬ ಅಧಿಕೃತ ಮಾಹಿತಿ ನೇಪಾಳ ಸರ್ಕಾರದ ಬಳಿ ಲಭ್ಯವಿಲ್ಲ.
ಚೀನಾದ ಕಡೆಯಿಂದ ರಾಸುವಾಗಾಧಿ ಮತ್ತು ಟಾಟೋಪಾನಿ ಗಡಿ ಬಿಂದುಗಳನ್ನು ಮುಚ್ಚುವ ವಿಷಯವು ತೀವ್ರ ಚರ್ಚೆಗೆ ಕಾರಣವಾಗುತ್ತಿದೆ. ನೇಪಾಳದ ವಿದೇಶಾಂಗ ಸಚಿವಾಲಯ ಈ ಹಿಂದೆ ಹಲವು ಬಾರಿ ಚೀನಾದ ಅಧಿಕಾರಿಗಳೊಂದಿಗೆ ಚರ್ಚಿಸಿದೆ. ಕೋವಿಡ್ ಪ್ರಕರಣಗಳು ಕಡಿಮೆಯಾದ ತಕ್ಷಣ, ನೇಪಾಳದ ಜನರಿಗೆ ಮತ್ತೆ ಗಡಿ ಬಿಂದುಗಳನ್ನು ತೆರೆಯಲಾಗುತ್ತದೆ ಎಂದು ಚೀನಾ ಹೇಳಿದೆ.
ಇದನ್ನೂ ಓದಿ: Heart Attack: ಜಿಮ್‌ನಲ್ಲಿ ಮಹಿಳೆಯರಿಗಿಂತ ಪುರುಷರಿಗೆ ಹೃದಯಾಘಾತದ ಅಪಾಯ ಹೆಚ್ಚು ಏಕೆ?
ನೇಪಾಳ ಸರ್ಕಾರದ ವರದಿಯ ಪ್ರಕಾರ, ನೇಪಾಳ ಮತ್ತು ಚೀನಾ ನಡುವಿನ ವ್ಯಾಪಾರವು ಬಲಗೊಂಡಿದೆ ಮತ್ತು ಕಳೆದ ಒಂದು ವರ್ಷದಲ್ಲಿ 13.19 ರಷ್ಟು ಹೆಚ್ಚಳವನ್ನು ಕಂಡಿದೆ. ನೇಪಾಳವು ಪ್ರತಿ ವರ್ಷ ಚೀನಾದಿಂದ ಸುಮಾರು 264.78 ಶತಕೋಟಿ ನೇಪಾಳದ ರೂಪಾಯಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.