ನವದೆಹಲಿ: ಜಮ್ಮು ಮತ್ತು ಕಾಶ್ಮೀರದನಡೆ ಸಂವಿಧಾನದ ಚೌಕಟ್ಟಿನಲ್ಲಿದೆ ಎಂದು ಈಗ ಭಾರತದ ನಡೆಯನ್ನು ರಷ್ಯಾ ಬೆಂಬಲಿಸಿದೆ. ಇನ್ನು ಉಭಯ ದೇಶಗಳ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ದ್ವಿಪಕ್ಷೀಯವಾಗಿ ಸಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣೆಯ ಆಧಾರದ ಮೇಲೆ ಪರಿಹರಿಸಿಕೊಳ್ಳಲಿವೆ ಎಂದು ಆಶಿಸಿದೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಜಮ್ಮು ಕಾಶ್ಮೀರಕ್ಕೆ ಭಾರತ 370 ನೇ ವಿಧಿ ಮೂಲಕ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಕಾಶ್ಮೀರದಿಂದ  ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು.ಈ ನಡೆಗೆ ಪಾಕ್ ಮತ್ತು ಚೀನಾ ದೇಶಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಪಾಕಿಸ್ತಾನವುಈ ಕ್ರಮಕ್ಕೆ ಪ್ರತಿಯಾಗಿ ಭಾರತದ ಜೊತೆಗಿನ ದ್ವೀಪಕ್ಷೀಯ ಮತ್ತು ವ್ಯಾಪಾರ ಸಂಬಂಧವನ್ನು ಕಡಿತ ಮಾಡುವುದಾಗಿ ಘೋಷಿಸಿತ್ತು.ಅಷ್ಟೇ ಅಲ್ಲದೆ ಸಂಜೋತಾ ಮತ್ತು ಥಾರ್ ಎಕ್ಸ್ಪ್ರೆಸ್ ರೈಲು ಸಂಚಾರಗಳನ್ನು ಕೂಡ ರದ್ದು ಪಡಿಸಿತ್ತು.


ಈಗ ಭಾರತ ನಡೆಗೆ ಪ್ರತಿಕ್ರಿಯಿಸಿರುವ ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ 'ಜಮ್ಮು ಮತ್ತು ಕಾಶ್ಮೀರ ಸ್ಥಿತಿಗೆ ಸಂಬಂಧಿಸಿದ ಬದಲಾವಣೆಗಳು ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿರುವುದು ಗಣರಾಜ್ಯದ ಸಂವಿಧಾನದ ಚೌಕಟ್ಟಿನೊಳಗೆ ಇವೆ" ಎಂದು ಸಚಿವಾಲಯ ತಿಳಿಸಿದೆ. ಆ ಮೂಲಕ ಈಗ ಭಾರತದ ನಡೆಯನ್ನು ರಷ್ಯಾ ಸಮರ್ಥಿಸಿಕೊಂಡಿದೆ.


ಇನ್ನು ಮುಂದುವರೆದು ಉಭಯ ದೇಶಗಳು ಈ ಪ್ರದೇಶದಲ್ಲಿ ಪರಿಸ್ಥಿತಿ ಉಲ್ಬಣಗೊಳಿಸಲು ಅನುಮತಿಸುವುದಿಲ್ಲ ಎಂದು ನಾವು ಭಾವಿಸುತ್ತೇವೆ ಎಂದು ರಷ್ಯಾ ಹೇಳಿದೆ. ಭಾರತ ಮತ್ತು ಪಾಕ್ ನಡುವಿನ ಬಿಕ್ಕಟ್ಟನ್ನು ಬಗೆ ಹರಿಸುವಲ್ಲಿ ರಷ್ಯಾ ಪಾತ್ರ ಈ ಹಿಂದೆಯೂ ಕೂಡ ಗಮನಾರ್ಹವಾದದ್ದು ಎಂದು ಹೇಳಿದರು.