ಮಾಸ್ಕೋ: Russia Hypersonic Nuclear Missile -  ರಷ್ಯಾ (Russia) ಮತ್ತು ಉಕ್ರೇನ್ (Ukraine) ನಡುವಿನ ಯುದ್ಧ (Russia-Ukraine War) ಮುಂದುವರೆದಿದೆ. ಏತನ್ಮಧ್ಯೆ, ಪಾಶ್ಚಿಮಾತ್ಯ ದೇಶಗಳು (Western Countries) ರಷ್ಯಾ ವಿರುದ್ಧ ನಿರಂತರವಾಗಿ ನಿರ್ಬಂಧನೆಗಳನ್ನು (Sanctions) ವಿಧಿಸುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ ಮಿಂಚಿನ ವೇಗದ ಹೈಪರ್ಸಾನಿಕ್ ಪರಮಾಣು ಕ್ಷಿಪಣಿಯ ದೃಶ್ಯಾವಳಿಗಳನ್ನು (Hypersonic Nuclear Missile Footage) ರಷ್ಯಾ ಬಿಡುಗಡೆ ಮಾಡಿದೆ. ಪಾಶ್ಚಿಮಾತ್ಯ ಮಾಧ್ಯಮ ವರದಿಗಳ ಪ್ರಕಾರ, ಕ್ಷಿಪಣಿಯ ಫೂಟೇಜ್ ಹಂಚಿಕೊಳ್ಳುವ ಮೂಲಕ, Russia  ಹೇಗೆ ಪಾಶ್ಚಿಮಾತ್ಯ ದೇಶಗಳ ಮೇಲೆ ಒಂದೇ ಹೊಡೆತದಲ್ಲಿ ದಾಳಿ ನಡೆಸಬಲ್ಲದು ಎಂಬುದನ್ನು ಪ್ರದರ್ಶಿಸಿಸಲು ಬಯಸಿದೆ ಎನ್ನಲಾಗಿದೆ.

COMMERCIAL BREAK
SCROLL TO CONTINUE READING

ಯುದ್ಧನೌಕೆಯಿಂದ ಕ್ಷಿಪಣಿಯನ್ನು ಹಾರಿಸಲಾಗಿದೆ
'ಮಿರರ್' ನಲ್ಲಿನ ಪ್ರಕಟಗೊಂಡ ವರದಿಯ ಪ್ರಕಾರ, ಮ್ಯಾಕ್ 9 'ಜಿರ್ಕಾನ್' (Zircon Nuke Missile) ಅಥವಾ 'ಸಿರ್ಕಾನ್' ಹೆಸರಿನ ಈ ಕ್ಷಿಪಣಿಯನ್ನು ಬಿಳಿ ಸಮುದ್ರದಲ್ಲಿ ಅಡ್ಮಿರಲ್ ಗೋರ್ಶ್ಕೋವ್ ಯುದ್ಧನೌಕೆಯಿಂದ ಉಡಾವಣೆ ಮಾಡಲಾಗಿದೆ. ಯುದ್ಧದ ನಡುವೆಯೇ, ಈ ದೃಶ್ಯಾವಳಿಗಳನ್ನು ಬಿಡುಗಡೆ ಮಾಡುವ ಉದ್ದೇಶವೆಂದರೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಒಂದು ವೇಳೆ ಯಾವುದೇ ದೇಶ ಹಸ್ತಕ್ಷೇಪ ಮಾಡಿದರೆ, ನಂತರ ಈ ಪರಮಾಣು ಕ್ಷಿಪಣಿಗಳನ್ನು ಬಳಸಲಾಗುವುದು ಎಂಬುದನ್ನು ರಷ್ಯಾ ತೋರಿಸಿದೆ ಎನ್ನಲಾಗಿದೆ.

ವೇಗದ ಕಾರಣ ಇದನ್ನು ಪತ್ತೆ ಅಸಾಧ್ಯ
ಇತ್ತೀಚೆಗಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (President Putin) ಅವರು ಈ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿ ಎಂದು ಘೋಷಿಸಿದ್ದರು ಮತ್ತು  ಅದನ್ನು ಇದೇ ವರ್ಷ ಸೇನೆಗೆ ಸೇರ್ಪಡೆ ಮಾಡಲಾಗಿದೆ. ಪಾಶ್ಚಿಮಾತ್ಯ ದೇಶಗಳ ಬಳಿ ಈ ಕ್ಷಿಪಣಿಗಳಿಗೆ ಯಾವುದೇ ಉತ್ತರವಿಲ್ಲ ಎಂದು ರಷ್ಯಾ ತಜ್ಞರು ಹೇಳುತ್ತಾರೆ. ರಷ್ಯಾದ ಜಿರ್ಕಾನ್ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆಯ ನಂತರ ಅದರ ರಹಸ್ಯ ವೈಶಿಷ್ಟ್ಯಗಳು ಬಹಿರಂಗಗೊಂಡಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ಮುಖವಾಣಿ ಎಂದೇ ಬಿಂಬಿತವಾಗಿರುವ ಚಾನೆಲ್ 'ಟಿವಿ ಜ್ವೆಜ್ಡಾ' ಹೇಳಿದೆ. ಜಿರ್ಕಾನ್ ಹೈಪರ್ಸಾನಿಕ್ ಕ್ಷಿಪಣಿಯ ವೇಗವು ಎಷ್ಟೊಂದು ಹೆಚ್ಚಾಗಿದೆ ಎಂದರೆ, ಯಾವುದೇ ದೇಶದ ವಾಯು ರಕ್ಷಣಾ ವ್ಯವಸ್ಥೆ ಅದನ್ನು ಸರಿಯಾದ ಸಮಯಕ್ಕೆ ಪತ್ತೆಹಚ್ಚುವುದು ಕಷ್ಟ. ಈ ಕ್ಷಿಪಣಿ ಅದರ ನಿರ್ಧಿಷ್ಟ ಗುರಿ ಹೊಡೆದುರುಳಿಸಿದ ನಂತರವೇ ಕ್ಷಿಪಣಿಯ ಕುರಿತು ಮಾಹಿತಿ ಸಿಗಲು ಸಾಧ್ಯ ಎಂದು ತಜ್ಞರು ಹೇಳುತ್ತಾರೆ.

ಗುರಿಯನ್ನು ಹೊಡೆದುರುಳಿಸಿದ ಬಳಿಕವೇ ಈ ಕ್ಷಿಪಣಿಯ (Russia Nuclear Missile) ಉಡಾವಣೆ ಕುರಿತು ಮಾಹಿತಿ ಲಭಿಸುತ್ತದೆ ಎಂದು ರಷ್ಯಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕ್ಷಿಪಣಿಯಲ್ಲಿ 'ವೇರಿಯೇಬಲ್ ಟ್ರಾಜೆಕ್ಟರಿ' ಅಳವಡಿಸಲಾಗಿದ್ದು, ಪತ್ತೆ ಮಾಡುವುದು ಕಷ್ಟ ಸಾಧ್ಯ ಎಂದು ಅವರು ಹೇಳುತ್ತಾರೆ. ಕ್ಷಿಪಣಿಯ ಉಡಾವಣೆ ಮತ್ತು ಹಾರಾಟವನ್ನು ಯಾರಿಂದಲೂ ನೋಡಲು ಸಾಧ್ಯವಾಗುವುದಿಲ್ಲ ಎಂದು ಯುದ್ಧನೌಕೆಯ ಕಮಾಂಡರ್ ಇಗೊರ್ ಕ್ರೋಖ್ಮಲ್ ಹೇಳುತ್ತಾರೆ. ಕ್ಷಿಪಣಿಯು ತನ್ನ ನಿರ್ಧಿಷ್ಟ ಗುರಿಯನ್ನು ತಲುಪಿದ ಬಳಿಕವಷ್ಟೇ ಅದರ ಅಂದಾಜು ಸಿಗುವ ಸಾಧ್ಯತೆ ಇದೆ. ಅದನ್ನು ಎದುರಿಸಲು ಮುಂದಿನ ಹಲವು ವರ್ಷಗಳಲ್ಲಿ ಕೂಡ ಯಾವುದೇ ದೇಶದ ಬಳಿ ಯಾವುದೇ ಒಂದು ನಿಶ್ಚಿತ ಉತ್ತರವಿದೆ ಎಂದು ತಾವು ಭಾವಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸಮುದ್ರ ಮತ್ತು ಭೂಮಿ ಎರಡರಲ್ಲೂ ಕೂಡ ಮಾರಕ ಕ್ಷಮತೆ ಹೊಂದಿದೆ ಜಿರ್ಕಾನ್ ನಮ್ಮ ಹೊಸ ಕ್ಷಿಪಣಿಯಾಗಿದ್ದು, ಇದು ಸಮುದ್ರದಿಂದ ಸಮುದ್ರ ಮತ್ತು ಭೂ ಗುರಿಗಳನ್ನು ಗುರಿಯಾಗಿಸಬಲ್ಲದು ಎಂದು ಪುಟಿನ್ (Vladimir Putin) ಕಳೆದ ವರ್ಷ ಡಿಸೆಂಬರ್‌ನಲ್ಲಿ ಹೇಳಿದ್ದರು. ಇದರ ಪ್ರಯೋಗಗಳು ಸಂಪೂರ್ಣ ಯಶಸ್ವಿಯಾಗಿದ್ದು, ಇದು ನಮ್ಮ ದೇಶದ ದೊಡ್ಡ ಸಾಧನೆಯಾಗಿದೆ ಮತ್ತು ರಷ್ಯಾದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ ಎಂದು ಪುಟಿನ್ ಹೇಳಿದ್ದರು.


ಇದನ್ನೂ ಓದಿ-ಇನ್ಶೂರೆನ್ಸ್ ಇಲ್ಲದೇ ಕೋಟ್ಯಂತರ ರೂ. ಮೌಲ್ಯದ ಕಾರ್ ಡ್ರೈವ್: ಟ್ರಾಫಿಕ್ ಪೊಲೀಸರು ತಡೆದಾಗ ಏನಾಯ್ತು..?

ಪುಟಿನ್ ಅವರ ನೆಚ್ಚಿನ ಆಯುಧ
ಇನ್ನೊಂದೆಡೆ ಪರಮಾಣು ದಾಳಿಯ ಸಂದರ್ಭದಲ್ಲಿ ಅಮೆರಿಕದ ನಗರಗಳನ್ನು ನಾಶಮಾಡಲು ಪುಟಿನ್ ಅವರ ಬಳಿ ಇರುವ ಅವರ ನೆಚ್ಚಿನ ಅಸ್ತ್ರ ಜಿರ್ಕಾನ್ ಎಂದು ರಷ್ಯಾದ ರಾಜ್ಯ ಚಾನೆಲ್ ವರದಿ ಮಾಡಿತ್ತು. ಪ್ರಸ್ತುತ ಜಿರ್ಕಾನ್ ವ್ಯಾಪ್ತಿಯನ್ನು ಸುಮಾರು 650 ಮೈಲುಗಳಷ್ಟು ಇರಿಸಲಾಗಿದ್ದರೂ ಕೂಡ, ಇದು 930 ಮೈಲುಗಳಷ್ಟು ದೂರದ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ ಎಂದು  ಕ್ರೋಖ್ಮಾಲ್ ಹೇಳಿದ್ದಾರೆ. ಇದರೊಂದಿಗೆ, ಈ ಕ್ಷಿಪಣಿಯು ಗಂಟೆಗೆ 7 ಸಾವಿರ ಮೈಲುಗಳ (11 ಸಾವಿರ ಕಿಲೋಮೀಟರ್‌ಗಿಂತ ಹೆಚ್ಚು) ವೇಗದಲ್ಲಿ ಗುರಿಯನ್ನು ತಲುಪಬಲ್ಲದು ಎನ್ನಲಾಗುತ್ತಿದೆ.


ಇದನ್ನೂ ಓದಿ-ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳಿಂದ ಯುಎಸ್ ಪತ್ರಕರ್ತ ಬ್ರೆಂಟ್ ರೆನಾಡ್ ಹತ್ಯೆ

ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳಲ್ಲಿ ನಿಯೋಜನೆ 
ಇದನ್ನು ಆರಂಭದಲ್ಲಿ ರಷ್ಯಾದ ಯುದ್ಧ ನೌಕೆಗಳಲ್ಲಿ ಮತ್ತು ನಂತರ ಜಲಾಂತರ್ಗಾಮಿ ನೌಕೆಗಳಲ್ಲಿ ನಿಯೋಜಿಸಲು ನಿರ್ಧರಿಸಲಾಗಿದೆ. ಹೈಪರ್ಸಾನಿಕ್ ಶಸ್ತ್ರಾಸ್ತ್ರಗಳಲ್ಲಿ ರಷ್ಯಾ ಪಾಶ್ಚಿಮಾತ್ಯ ದೇಶಗಳನ್ನು ಮೀರಿಸಿದೆ ಎಂದು ಕ್ರೆಮ್ಲಿನ್ ಡೆಪ್ಯೂಟಿ ಪ್ರೀಮಿಯರ್ ಯೂರಿ ಬೊರಿಸೊವ್ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು, 'ನಾವು ಹೊಸ ಭೌತಿಕ ತತ್ವಗಳನ್ನು ಆಧರಿಸಿ ಮುಂದೆ ಸಾಗುತ್ತಿದ್ದೇವೆ ಮತ್ತು ಅದರಲ್ಲೂ ವಿಶೇಷವಾಗಿ ಹೈಪರ್ಸಾನಿಕ್ ಶಸ್ತ್ರಾಸ್ತ್ರಗಳ ಕ್ಷೇತ್ರದಲ್ಲಿ' ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ-Ukraine Vs Russia Conflict: ಉಕ್ರೇನ್ ನಿಂದ ತನ್ನ ರಾಯಭಾರ ಕಚೇರಿಯನ್ನು ತೆಗೆದುಹಾಕಲು ನಿರ್ಧರಿಸಿದ ಭಾರತದ ವಿದೇಶಾಂಗ ಸಚಿವಾಲಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.