ಇನ್ಶೂರೆನ್ಸ್ ಇಲ್ಲದೇ ಕೋಟ್ಯಂತರ ರೂ. ಮೌಲ್ಯದ ಕಾರ್ ಡ್ರೈವ್: ಟ್ರಾಫಿಕ್ ಪೊಲೀಸರು ತಡೆದಾಗ ಏನಾಯ್ತು..?

ಇರಾನ್ ನಿವಾಸಿ ಪೂಯನ್ ಮೊಖ್ತಾರಿ ಬಳಿ ಇರುವ ಗೊಲ್ಡನ್ ಮೆಕ್ಲಾರೆನ್ ಕಾರಿನ ಬೆಲೆ ಕೇಳಿ ಟ್ರಾಫಿಕ್ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

Written by - Puttaraj K Alur | Last Updated : Mar 14, 2022, 04:02 PM IST
  • ಕಾರ್ ಡ್ರೈವ್ ಮಾಡಿ ಸುದ್ದಿಯಾದ ಸೋಷಿಯಲ್ ಮೀಡಿಯಾ ಸ್ಟಾರ್ ಪೂಯನ್ ಮೊಖ್ತಾರಿ
  • ಇನ್ಶೂರೆನ್ಸ್ ಇಲ್ಲದೆ ಕೋಟ್ಯಂತರ ರೂ. ಬೆಲೆಯ ಕಾರು ಚಲಾವಣೆ
  • ದುಬಾರಿ ಗೊಲ್ಡನ್ ಮೆಕ್ಲಾರೆನ್ ಕಾರಿನ ಬೆಲೆ ಕೇಳಿ ಬೆಚ್ಚಿಬಿದ್ದ ಪೊಲೀಸರು
ಇನ್ಶೂರೆನ್ಸ್ ಇಲ್ಲದೇ ಕೋಟ್ಯಂತರ ರೂ. ಮೌಲ್ಯದ ಕಾರ್ ಡ್ರೈವ್: ಟ್ರಾಫಿಕ್ ಪೊಲೀಸರು ತಡೆದಾಗ ಏನಾಯ್ತು..?   title=
ಕೋಟ್ಯಂತರ ರೂ. ಮೌಲ್ಯದ ಕಾರು ಜಪ್ತಿ!

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ(Social Media) ವೇದಿಕೆಗಳು ಕೆಲವೇ ಕ್ಷಣಗಳಲ್ಲಿ ಜನರನ್ನು ಸ್ಟಾರ್‌ಗಳನ್ನಾಗಿ ಮಾಡುತ್ತಿವೆ. ಇವುಗಳನ್ನೇ ಬಳಸಿಕೊಂಡು ಅನೇಕ ಜನರು ಮಿಲಿಯನೇರ್‌ಗಳಾಗಿದ್ದಾರೆ. ಈ ಪೈಕಿ ಪೂಯನ್ ಮೊಖ್ತಾರಿ(Pooyan Mokhtari) ಕೂಡ ಒಬ್ಬರು. ಸದ್ಯ ಅವರು ಇನ್ಶೂರೆನ್ಸ್ ಇಲ್ಲದೆ ಕಾರ್ ಡ್ರೈವ್ ಮಾಡಿ ಸುದ್ದಿಯಾಗಿದ್ದಾರೆ.

ವಾಸ್ತವವಾಗಿ ಪೂಯನ್ ಬಳಿ ಗೊಲ್ಡನ್ ಮೆಕ್ಲಾರೆನ್(Golden McLaren) ಇದೆ. ಆದರೆ ಇದನ್ನು ಸಂಚಾರ ಪೊಲೀಸರು ಜಪ್ತಿ ಮಾಡಿದ್ದಾರೆ. ಏಕೆಂದರೆ ಈ ಕಾರನ್ನು ಇನ್ಶೂರೆನ್ಸ್ ಇಲ್ಲದೆ ಓಡಿಸಲಾಗುತ್ತಿತ್ತು. ಈ ಸಾಮಾಜಿಕ ಮಾಧ್ಯಮ ತಾರೆ Instagramನಲ್ಲಿ ಬರೋಬ್ಬರಿ 60 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಪೂಯನ್ 7.5 ಕೋಟಿ ರೂ. ಬೆಲೆಯ ಮೆಕ್ಲಾರೆನ್ ಸೆನ್ನಾ(McLaren Senna) ಕಾರನ್ನು ಹೊಂದಿದ್ದಾರೆ. ಫೆಬ್ರವರಿ 25ರಂದು ಡೋವರ್‌ನಲ್ಲಿ ಅವರ ಕಾರನ್ನು ಸಂಚಾರ ಪೊಲೀಸರು ಜಪ್ತಿ ಮಾಡಿದ್ದರು.

ಇದನ್ನೂ ಓದಿ: ಈ ವಾಹನಗಳ ನೋಂದಣಿ ಈಗ 8 ಪಟ್ಟು ಹೆಚ್ಚು ದುಬಾರಿ.! ಹೊಸ ನಿಯಮದಿಂದ ಆಗಲಿದೆ ಭಾರೀ ನಷ್ಟ

ಕೋಟ್ಯಂತರ ರೂ. ಆಸ್ತಿ ಇದ್ದರೂ ವಿಮೆ ಇಲ್ಲ

ವರದಿಗಳ ಪ್ರಕಾರ ಪೂಯನ್ ಮೊಖ್ತಾರಿ(Pooyan Mokhtari) ಇರಾನ್ ನಿವಾಸಿಯಾಗಿದ್ದು, ಅವರ ವಯಸ್ಸು ಕೇವಲ 31 ವರ್ಷಗಳು. ಇವರ ಒಟ್ಟು ಆಸ್ತಿ ಮೌಲ್ಯ 1.88 ಶತಕೋಟಿ ರೂ.ಗಿಂತ ಹೆಚ್ಚು ಎಂದು ಹೇಳಲಾಗಿದೆ. ಇಷ್ಟು ಹಣವಿದ್ದರೂ ಅವರು ಕಾರಿಗೆ ವಿಮೆ ಮಾಡಿಸದೆ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೋಟ್ಯಂತರ ರೂ. ಆಸ್ತಿ ಇದ್ದರೂ ಇನ್ಶೂರೆನ್ಸ್ ಹೊಂದದಿರುವುದು ಹಾಸ್ಯಾಸ್ಪದವಾಗಿದೆ.

ಬಿರುಗಾಳಿಯ ವೇಗದಲ್ಲಿ ಚಲಿಸುವ ಕಾರು

ವರದಿಯ ಪ್ರಕಾರ, ಮೆಕ್‌ಲಾರೆನ್ ಸೆನ್ನಾ(McLaren Senna) ಕಾರಿನ ಗರಿಷ್ಠ ವೇಗ ಗಂಟೆಗೆ 334 ಕಿಮೀ. ಈ ಕಾರು ಕಂಪನಿಯು ಪ್ರಪಂಚದಾದ್ಯಂತ ತನ್ನ ವೇಗದ ಕಾರುಗಳಿಗೆ ಹೆಸರುವಾಸಿಯಾಗಿದೆ. ಇದು ತಯಾರಿಸುವ ಕಾರುಗಳನ್ನು ರೇಸ್ ಟ್ರ್ಯಾಕ್‌ನಲ್ಲಿ ಬಿರುಗಾಳಿಯ ವೇಗದಲ್ಲಿ ಸುಲಭವಾಗಿ ಓಡಿಸಬಹುದು. ಬ್ರಿಟನ್ ನಲ್ಲಿ ಈ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Bank Holiday March 2022: ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಮಾಹಿತಿ

ಕಾರಿನ ಬೆಲೆ ಕೇಳಿ ಬೆಚ್ಚಿಬಿದ್ದ ಪೊಲೀಸರು!

ಮೂಲಗಳ ಪ್ರಕಾರ ಈ ಕಾರಿನ ಬೆಲೆ ಕೇಳಿ ಪೊಲೀಸರೇ(Iran Traffic Police) ಬೆಚ್ಚಿಬಿದ್ದಿದ್ದಾರಂತೆ. ಸಂಚಾರ ಪೊಲೀಸರಿಗೆ ಈ ಕಾರಿನ ಬೆಲೆ ತಿಳಿದಾಗ ಮೊದಲು ನಂಬಲಿಲ್ಲವಂತೆ. ಈ ಕಾರು ಸುಮಾರು 1 ವಾರದವರೆಗೆ ಅಂಗಳದಲ್ಲಿಯೇ ನಿಂತಿತ್ತು. ನಂತರ ಟ್ರಕ್ ವೊಂದರಲ್ಲಿ ಈ ಕಾರನ್ನು ಪ್ಯಾರಿಸ್‍ ಗೆ ರವಾನಿಸಲಾಗಿದೆ. ಇದನ್ನು ಪೊಲೀಸರು ವಶಪಡಿಸಿಕೊಂಡಾಗ ಚಾಲಕನ ಬಳಿ ಕಾರಿನ ವಿಮೆ ಇರಲಿಲ್ಲವಂತೆ. ಫೆಬ್ರವರಿ 25ರಂದು ಸಂಜೆ 6 ಗಂಟೆಗೆ ದುಬಾರಿ ಬೆಲೆಯ ಕಾರನ್ನು ಖಾಕಿಪಡೆ ವಶಕ್ಕೆ ತೆಗೆದುಕೊಂಡಿತ್ತು. ದೊಡ್ಡ ಮೊತ್ತದ ಕಾರಿಗೆ ಇನ್ಶೂರೆನ್ಸ್ ಮಾಡಿಸದಿರುವುದಕ್ಕೆ ಪೂಯನ್ ಅನೇಕರ ಟೀಕೆಗೆ ಗುರಿಯಾಗಿದ್ದಾರೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News