ನವದೆಹಲಿ: Russia-Ukraine Standoff - ಉಕ್ರೇನ್ (Ukraine) ವಿಷಯದಲ್ಲಿ ಅಮೆರಿಕ (America) ಮತ್ತು ರಷ್ಯಾ (Russia) ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ. ಏತನ್ಮಧ್ಯೆ, UNSC ಅಂದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆದಿದೆ. ಇದರಲ್ಲಿ ಭಾರತದ ಕಡೆಯಿಂದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್, ರಷ್ಯಾದ ರಾಜತಾಂತ್ರಿಕ ಮತ್ತು ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಅವರನ್ನು ಹೊರತುಪಡಿಸಿ, UNSCಯ ಎಲ್ಲಾ ಸದಸ್ಯ ರಾಷ್ಟ್ರಗಳು ಭಾಗವಹಿಸಿದ್ದವು.


COMMERCIAL BREAK
SCROLL TO CONTINUE READING

ಅಮೆರಿಕ ಮತ್ತು ರಷ್ಯಾ ಪರಸ್ಪರ ಎದುರಾಗಿವೆ
ಸಭೆಯಲ್ಲಿನ ತನ್ನ ಭಾಷಣದಲ್ಲಿ, ಮಿಲಿಟರಿ ಉದ್ದೇಶಗಳ ಬಗ್ಗೆ ರಷ್ಯಾ ಗೊಂದಲವನ್ನು ಹರಡುತ್ತಿದೆ ಎಂದು ಬ್ಲಿಂಕನ್ ಆರೋಪಿಸಿದ್ದಾರೆ. ಅದೇ ಸಮಯದಲ್ಲಿ, ರಷ್ಯಾ ಕೂಡ ತಕ್ಕ ಪ್ರತ್ಯುತ್ತರ ನೀಡಿದ್ದು, ಅಮೆರಿಕದ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ. ಯುಎನ್‌ಎಸ್‌ಸಿಯಲ್ಲಿ ಉಕ್ರೇನ್ ವಿಷಯವನ್ನು ಚರ್ಚಿಸಿದಾಗ, ರಷ್ಯಾದ ಉಪ ವಿದೇಶಾಂಗ ಸಚಿವ ಸೆರ್ಗೆಯ್ ವರ್ಸಾನಿನ್, ರಷ್ಯಾ ದಾಳಿಯ ದಿನಾಂಕಗಳ ಬಗ್ಗೆ ವದಂತಿಗಳನ್ನು ಹರಡುವ ಮೂಲಕ ಯುಎಸ್ ಪ್ರಪಂಚದಾದ್ಯಂತ ತನ್ನ ಛಾಪು ಮೂಡಿಸುತ್ತಿದೆ ಎಂದು ಆರೋಪಿಸಿದ್ದಾರೆ.


ಇದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರಷ್ಯಾ ಶಾಂತಿ ಮತ್ತು ಭದ್ರತೆಗೆ ಅಪಾಯ ತಂದೊಡ್ಡಿದ್ದು, ನಮ್ಮ ಮಾಹಿತಿ ಪ್ರಕಾರ ಮುಂದಿನ ದಿನಗಳಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಬಹುದು ಎಂದು ಹೇಳಿದ್ದಾರೆ. ರಷ್ಯಾ ತನ್ನ ಮಿಲಿಟರಿ ನಿಯೋಜನೆಯನ್ನು ಕಡಿಮೆ ಮಾಡಿದೆ ಎಂದು ಹೇಳುತ್ತದೆ. ಆದರೆ ಅದು ಗ್ರೌಂಡ್ ರಿಯಾಲಿಟಿ ಅಲ್ಲ. ಮಾಹಿತಿ ಪ್ರಕಾರ ಮುಂದಿನ ದಿನಗಳಲ್ಲಿ ಉಕ್ರೇನ್ ಮೇಲೆ ದಾಳಿ ನಡೆಸಲು ರಷ್ಯಾ ಸೇನೆ ಸಿದ್ಧತೆ ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ. 


ರಷ್ಯಾ ನಡೆಸುತ್ತಿದೆ ರಾಸಾಯನಿಕ ಪಿತೂರಿ ಯೋಜನೆ?
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ರಾಜತಾಂತ್ರಿಕರಿಗೆ ದಾಳಿಯನ್ನು ಸಮರ್ಥಿಸಲು ರಷ್ಯಾ ಇದ್ದಕ್ಕಿದ್ದಂತೆ ಹಿಂಸಾತ್ಮಕ ಘಟನೆಯನ್ನು ನಡೆಸಬಹುದು ಎಂದು ಹೇಳಿದ್ದಾರೆ. ರಷ್ಯಾದೊಳಗೆ ಉಗ್ರ ದಾಳಿ, ಡ್ರೋನ್ ದಾಳಿ ಹಾಗೂ ರಾಸಾಯನಿಕ ದಾಳಿಗಳ (Chemical Attack) ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದು ಬ್ಲಿಂಕನ್ ಆರೋಪಿಸಿದ್ದಾರೆ.


ಉಕ್ರೇನ್‌ನಲ್ಲಿ ಕ್ಷಿಪಣಿ ಮತ್ತು ಬಾಂಬ್ ದಾಳಿಯೊಂದಿಗೆ ಸೈಬರ್ ದಾಳಿಗಳು ಆರಂಭಗೊಳ್ಳಲಿವೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ. ಉಕ್ರೇನ್‌ನಲ್ಲಿರುವ ಕೆಲವು ಗುಂಪುಗಳನ್ನು ರಷ್ಯಾ ಕೂಡ ಗುರಿಯಾಗಿಸುತ್ತದೆ ಎಂದು ಯುಎಸ್ ಗುಪ್ತಚರ ಸಂಸ್ಥೆಗಳು ಸೂಚಿಸಿವೆ ಎಂದು ಅವರು ಹೇಳಿದ್ದಾರೆ. ತಾವು ಸಭೆಗೆ ಬಂದಿರುವುದು ಯುದ್ಧವನ್ನು ಪ್ರಾರಂಭಿಸಲು ಅಲ್ಲ, ಅದನ್ನು ನಿಲ್ಲಿಸಲು ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಬ್ಲಿಂಕನ್ ಭದ್ರತಾ ಮಂಡಳಿಯ ಸದಸ್ಯರಿಗೆ ತಿಳಿಸಿದ್ದಾರೆ.


ತಕ್ಕ ಪ್ರತ್ಯುತ್ತರ ನೀಡಿದ ರಷ್ಯಾ
ಇನ್ನೊಂದೆಡೆ ರಷ್ಯಾ ಕೂಡ ಅಮೆರಿಕಕ್ಕೆ ಭಾರಿ ತಿರುಗೇಟು ನೀಡಿದೆ, ಅಮೆರಿಕ ಮತ್ತು ನ್ಯಾಟೋದ ಏಕೈಕ ಗುರಿಯು ಯುದ್ಧವನ್ನು ಪ್ರಚೋದಿಸುವುದಾಗಿದೆ, ಆದರೆ ರಷ್ಯಾವು ಯುದ್ಧವನ್ನು ಬಯಸುವುದಿಲ್ಲ ಎಂದು ಅದು ಹೇಳಿದೆ. ಯುಎನ್‌ಎಸ್‌ಸಿಯಲ್ಲಿ ತನ್ನ ಪಕ್ಷವನ್ನು ಮಂಡಿಸಿರುವ ಉಕ್ರೇನ್ ರಷ್ಯಾವನ್ನು ಗುರಿಯಾಗಿಸಿದೆ. ಒಪ್ಪಂದಕ್ಕೆ ಒಮ್ಮೆ ಸಹಿ ಹಾಕಿದ ಮೇಲೆ ರಷ್ಯಾ ಅದನ್ನು ಹೇಗೆ ಮುರಿಯುತ್ತದೆ ಎಂಬುದಕ್ಕೆ ಇದು ಕೇವಲ ಒಂದು ಉದಾಹರಣೆ ಎಂದು ಉಕ್ರೇನ್ ಹೇಳಿದೆ. ಒಪ್ಪಂದವನ್ನು ಗೌರವಿಸದಿರುವುದು ಯಾವಾಗಲೂ ರಷ್ಯಾದ ರಾಜತಾಂತ್ರಿಕತೆಯ ಭಾಗವಾಗಿದೆ ಎಂದು ಅದು ಆರೋಪಿಸಿದೆ.


ಚರ್ಚೆಯಲ್ಲಿ ಭಾಗವಹಿಸಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಅವರು, ಉದ್ವಿಗ್ನತೆಯನ್ನು ಹೆಚ್ಚಿಸುವ ಪ್ರಯತ್ನಗಳನ್ನು ಎರಡೂ ಕಡೆಯವರು ತಪ್ಪಿಸಬೇಕು. ಇದರಿಂದ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಸುನಿಶ್ಚಿತಗೊಳ್ಳಲಿದೆ ಎಂದಿದ್ದಾರೆ. 
ಕಳವಳ ವ್ಯಕ್ತಪಡಿಸಿದ ಭಾರತ



ಈ ವಿಚಾರವಾಗಿ ಮಾತನಾಡಿರುವ ಟಿ.ಎಸ್.ತಿರುಮೂರ್ತಿ, ಈ ವಿವಾದವನ್ನು ಮಾತುಕತೆಯಿಂದ ಮಾತ್ರ ಬಗೆಹರಿಸಿಕೊಳ್ಳಬಹುದು. ಈ ಉದ್ವಿಗ್ನ ಪರಿಸ್ಥಿತಿಯನ್ನು ತಕ್ಷಣವೇ ಅಂತ್ಯಗೊಳಿಸಬೇಕೆಂಬುದರ ಪರವಾಗಿ ಭಾರತವೂ ನಿಂತಿದೆ. ಇದರಿಂದ ಇಡೀ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮತ್ತೆ ನೆಲೆಗೊಳ್ಳಲು ಸಾಧ್ಯ. ಇಪ್ಪತ್ತು ಸಾವಿರಕ್ಕೂ ಹೆಚ್ಚು ಭಾರತೀಯರು ಉಕ್ರೇನ್‌ನಲ್ಲಿ ವಾಸಿಸುತ್ತಿದ್ದಾರೆ, ಅವರ ಸುರಕ್ಷತೆಯು ಭಾರತದ ಮೊದಲ ಆದ್ಯತೆಯಾಗಿದೆ. ಏತನ್ಮಧ್ಯೆ, ಏರ್ ಇಂಡಿಯಾ ಫೆಬ್ರವರಿ 22, 24 ಮತ್ತು 26 ರಂದು ಉಕ್ರೇನ್‌ಗೆ 3 ವಿಶೇಷ ವಿಮಾನಗಳನ್ನು ನಿರ್ವಹಿಸಲು ನಿರ್ಧರಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ-Russia-Ukraine Conflict: Russia ಬಳಿ ಇರುವ ಮಹಾವಿನಾಶಕಾರಿ 5 ಶಸ್ತ್ರಾಸ್ತ್ರಗಳಿವು, ಇವುಗಳಿಗೆ US-NATO ಕೂಡ ಭಯಪಡುತ್ತವೆ



ಉಕ್ರೇನ್ ಮತ್ತು ರಷ್ಯಾ ನಡುವಿನ ಉದ್ವಿಗ್ನತೆಯು ವಿಶ್ವ ಯುದ್ಧದ (World War) ಭೀತಿಯನ್ನು ಹೆಚ್ಚಿಸಿದೆ. ವಿಶ್ವದ ಎರಡು ಪ್ರಮುಖ ಮಹಾಶಕ್ತಿಗಳ ನಡುವಿನ ಸಂಘರ್ಷವನ್ನು ತಡೆಗಟ್ಟುವಲ್ಲಿ ವಿಶ್ವಸಂಸ್ಥೆಯ (United Nations) ಪಾತ್ರವು ಹೆಚ್ಚು ಮಹತ್ವದ್ದಾಗಿದೆ.


ಇದನ್ನೂ ಓದಿ-Russia-Ukraine Crisis: ರಷ್ಯಾ ದಾಳಿಯ ಭೀತಿ, ಉಕ್ರೇನ್ ನಲ್ಲಿ AK-47 ಹಿಡಿದ 79ರ ಇಳಿವಯಸ್ಸಿನ ಅಜ್ಜಿ


ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಕುರಿತು ವಿದೇಶಾಂಗ ಸಚಿವಾಲಯವು ನಾವು ಪರಿಸ್ಥಿತಿಗೆ ರಾಜತಾಂತ್ರಿಕ ಮತ್ತು ಶಾಂತಿಯುತ ಪರಿಹಾರವನ್ನು ನೋಡಲು ಬಯಸುತ್ತೇವೆ ಎಂದು ಹೇಳುತ್ತದೆ. ಭಾರತವು ಸಂಬಂಧಪಟ್ಟ ಎಲ್ಲರೊಂದಿಗೂ ಸಂಪರ್ಕದಲ್ಲಿದೆ ಮತ್ತು ರಾಜತಾಂತ್ರಿಕ ಮಾತುಕತೆಯ ಮೂಲಕ ಮಾತ್ರ ಈ ಸಮಸ್ಯೆಯನ್ನು ಪರಿಹರಿಸಬಹುದು ಎಂದು ನಾವು ಭಾವಿಸುತ್ತೇವೆ ಎಂದಿದೆ.


ಇದನ್ನೂ ಓದಿ-Russia-Ukraine Crisis: 'ನಾಳೆ ಬೆಳಗ್ಗೆ 5.30ಕ್ಕೆ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲಿದೆ'!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.