Russia-Ukraine Crisis: 'ನಾಳೆ ಬೆಳಗ್ಗೆ 5.30ಕ್ಕೆ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲಿದೆ'!

Russia-Ukraine Standoff - ನಾಳೆ ಬೆಳಗ್ಗೆ 5.30ಕ್ಕೆ ರಷ್ಯಾ (Russia) ತನ್ನ ಸೈನಿಕರೊಂದಿಗೆ ಉಕ್ರೇನ್ (Ukriane) ಮೇಲೆ ದಾಳಿ ನಡೆಸಲಿದೆ ಎಂದು ಯುಎಸ್ ರಕ್ಷಣಾ ಮೂಲಗಳು (US Defence Sources) ಹೇಳಿಕೊಂಡಿವೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ದಾಳಿಯ ಬಗ್ಗೆ 3 ಗಂಟೆಗೆ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಯುಎಸ್ ಹೇಳಿಕೊಂಡಿದೆ.

Written by - Nitin Tabib | Last Updated : Feb 15, 2022, 07:27 PM IST
  • ನಾಳೆ ಬೆಳಗ್ಗೆ 5.30ಕ್ಕೆ ಉಕ್ರೇನ್ ಮೇಲೆ ರಷ್ಯಾ ದಾಳಿ
  • ಭವಿಷ್ಯ ನುಡಿದ ಅಮೆರಿಕಾದ ರಕ್ಷಣಾ ಮೂಲಗಳು
  • ವ್ಲಾಡಿಮಿರ್ ಪುಟಿನ್ (Vladimir Putin) ಅವರು ದಾಳಿಯ ಬಗ್ಗೆ 3 ಗಂಟೆಗೆ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಯುಎಸ್ ಹೇಳಿಕೊಂಡಿದೆ.
Russia-Ukraine Crisis: 'ನಾಳೆ ಬೆಳಗ್ಗೆ 5.30ಕ್ಕೆ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲಿದೆ'! title=
Russia-Ukraine Standoff (File Photo)

Russia-Ukraine Standoff - ನಾಳೆ ಬೆಳಗ್ಗೆ 5.30ಕ್ಕೆ ರಷ್ಯಾ (Russia) ತನ್ನ ಸೈನಿಕರೊಂದಿಗೆ ಉಕ್ರೇನ್ (Ukriane) ಮೇಲೆ ದಾಳಿ ನಡೆಸಲಿದೆ ಎಂದು ಯುಎಸ್ ರಕ್ಷಣಾ ಮೂಲಗಳು (US Defence Sources) ಹೇಳಿಕೊಂಡಿವೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ದಾಳಿಯ ಬಗ್ಗೆ 3 ಗಂಟೆಗೆ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಯುಎಸ್ ಹೇಳಿಕೊಂಡಿದೆ.

ವರದಿಗಳ ಪ್ರಕಾರ, ರಶಿಯಾ (Russia) ಬುಧವಾರ ಸ್ಥಳೀಯ ಕಾಲಮಾನ ಪ್ರಕಾರ 3 ಗಂಟೆಗೆ ಉಕ್ರೇನ್ ಮೇಲೆ ಹಲವಾರು ರಂಗಗಳಲ್ಲಿ ದಾಳಿ (Russia-Ukraine War) ಮಾಡಲು ಆರಂಭಿಸಲಿದೆ. ದಿ ಮಿರರ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಯುದ್ಧ ಟ್ಯಾಂಕರ್ ಗಳ ಮೂಲಕ ರಷ್ಯಾ ಸೈನಿಕರು ಯುಕ್ರೇನ್ ಗಡಿ ದಾಟುವ ಮೊದಲು ರಷ್ಯಾ ಕೀವ್ (Kyiv) ನ ಸೈನ್ಯ ಹಾಗೂ ಸರ್ಕಾರಿ ಕಮಾಂಡ್ ಹಾಗೂ ನಿಯಂತ್ರಣ ಕೇಂದ್ರಗಳ ಮೇಲೆ ವಾಯುದಾಳಿ ನಡೆಸಲಿದೆ ಎನ್ನಲಾಗಿದೆ. ಅಮೇರಿಕಾದ ಮೂಲಗಳ ಪ್ರಕಾರ ಉಕ್ರೇನ್ ರಾಜಧಾನಿ ಕೀವ್ ಅನ್ನು ತನ್ನ ವಶಕ್ಕೆ ಪಡೆಯುವುದು ರಶಿಯಾದ ಮೊದಲ ಗುರಿಯಾಗಿರಲಿದೆ ಎನ್ನಲಾಗಿದೆ. 

ಉಕ್ರೇನ್‌ನ ದಕ್ಷಿಣ ಕರಾವಳಿಯ ಮೇಲೆ ಏಕಕಾಲದಲ್ಲಿ ದಾಳಿ ಮಾಡಲು ರಷ್ಯಾ ತನ್ನ ಮಿಲಿಟರಿ ಪಡೆಗಳನ್ನು ಬಳಸಿಕೊಳ್ಳಬಹುದು ಎಂದು ಹಿರಿಯ ಯುಎಸ್ ಮೂಲವು ದಿ ಮಿರರ್‌ಗೆ ತಿಳಿಸಿದೆ. ಒಂದೇ ವಾಕ್ಯದಲ್ಲಿ ಎಚ್ಚರಿಕೆ ನೀಡಿರುವ ಅವರು - ಬುಧವಾರ ಬೆಳಗ್ಗೆ ಮೂರು ಗಂಟೆಗೆ! ಎಂದು ಹೇಳಿದ್ದಾರೆ. ರಷ್ಯಾ ಉಕ್ರೇನ್‌ನ ಪೂರ್ವ ಗಡಿಯಲ್ಲಿ 126,000 ಕ್ಕೂ ಹೆಚ್ಚು ಸೈನಿಕರನ್ನು ಹೊಂದಿದೆ ಮತ್ತು ಉತ್ತರದಲ್ಲಿ ಬೆಲಾರಸ್‌ನಲ್ಲಿ 80,000 ಪಡೆಗಳನ್ನು ಹೊಂದಿದೆ.

ಸೈನಿಕರನ್ನು ಸ್ವದೇಶಕ್ಕೆ ಮರಳಲು ಘೋಷಣೆ
ಸಮರಾಭ್ಯಾಸದಲ್ಲಿ ಭಾಗವಹಿಸಳು ತೆರಳಿದ್ದ ಕೆಲವು ಪಡೆಗಳು ತಮ್ಮ ಸೇನಾ ನೆಲಗಳಿಗೆ ಮರಳಲು ಆರಂಭಿಸಲಿವೆ ಎಂದು ರಷ್ಯಾ ಮಂಗಳವಾರ ಹೇಳಿದೆ. ಈ ಸೈನ್ಯ ಹಿಂಪಡೆತಡ ಕುರಿತು ರಷ್ಯಾ ಹೆಚ್ಚಿನ ವಿವರಗಳನ್ನು ನೀಡದಿದ್ದರೂ ಕೂಡ, ಉಕ್ರೇನ್ ಮೇಲೆ ದಾಳಿ ನಡೆಸಲು ರಷ್ಯಾ ಯೋಜನೆ ಹೊಂದಿಲ್ಲ ಎಂಬ ಭರವಸೆಯನ್ನು ಅದು ಹುಟ್ಟುಹಾಕಿರುವುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-UKRAINE-RUSSIA CRISIS: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲಿದೆಯಾ! ಅಮೇರಿಕಾ-ಬ್ರಿಟನ್ ಗಳು ಹೇಳಿದ್ದೇನು, ಇಲ್ಲಿದೆ ಸದ್ಯದ ಸ್ಥಿತಿಯ ವಿವರ

ರಷ್ಯಾಗೆ ಎಚ್ಚರಿಕೆ ನೀಡಿದ ಅಮೇರಿಕಾ
ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತೊಮ್ಮೆ ರಷ್ಯಾಕ್ಕೆ ಎಚ್ಚರಿಕೆ ನೀಡಿದ್ದಾರೆ. ಉಕ್ರೇನ್‌ನ ಗಡಿಯ ಬಳಿ ರಷ್ಯಾ ಸುಮಾರು 100,000 ಸೈನಿಕರನ್ನು ನಿಯೋಜಿಸಿದೆ. ಉಕ್ರೇನ್ ಮೇಲೆ ದಾಳಿ ಮಾಡಲು ಉದ್ದೇಶಿಸಿದ್ದಾರೆ ಎಂದು ಅವರು  ಆರೋಪಿಸಿದ್ದಾರೆ. ಆದರೆ, ಉಕ್ರೇನ್ ಮೇಲೆ ದಾಳಿ ಮಾಡುವ ಯಾವುದೇ ಯೋಜನೆಯನ್ನು ತಾನು  ಹೊಂದಿಲ್ಲ ಎಂದು ರಷ್ಯಾ ಪದೇ ಪದೇ ಹೇಳುತ್ತಲೇ ಇದೆ.

ಇದನ್ನೂ ಓದಿ-Russia-Ukraine Crises: ಭಾರತೀಯ ವಿದ್ಯಾರ್ಥಿಗಳಿಗೆ ಸ್ವದೇಶಕ್ಕೆ ಮರಳುವಂತೆ ಸೂಚಿಸಿ ಅಡ್ವೈಸರಿ ಜಾರಿಗೊಳಿಸಿದ ಭಾರತೀಯ ದೂತಾವಾಸ

ಭಾರತೀಯ ನಾಗರಿಕರಿಗೆ ಸ್ವದೇಶಕ್ಕೆ ಮರಳಲು ಸೂಚನೆ
ಉಕ್ರೇನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯ ಅನಿಶ್ಚಿತತೆಯ ದೃಷ್ಟಿಯಿಂದ, ಭಾರತೀಯ ಪ್ರಜೆಗಳು, ವಿಶೇಷವಾಗಿ ಉಕ್ರೇನ್‌ನಲ್ಲಿ ಇರುವ ಅವಶ್ಯಕತೆ ಇಲ್ಲದ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಸ್ವದೇಶಕ್ಕೆ ಮರಳುವುದುಂನು ಪರಿಗಣಿಸಬಹುದು ಎಂದು ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಹೇಳಿಕೆ ಹೊರಡಿಸಿದೆ. ಉಕ್ರೇನ್‌ನಲ್ಲಿ ಮತ್ತು ಒಳಗೆ ಎಲ್ಲಾ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಲು ಭಾರತೀಯ ನಾಗರಿಕರಿಗೆ ಸಲಹೆ ನೀಡಲಾಗಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-Vladimir Putin India Visit: ಕುಟಿಲ ನೀತಿಯಲ್ಲಿ ಪರಿಣಿತ ವ್ಲಾಡಿಮೀರ್ ಪುಟಿನ್, ಭಾರತದ ಭೇಟಿ ಹಿಂದಿನ ಉದ್ದೇಶ ಏನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News