Russia-Ukraine Conflict - ರಷ್ಯಾ ಮತ್ತು ಉಕ್ರೇನ್ ನಡುವೆ ಮಹಾಯುದ್ಧ ಪ್ರಾರಂಭವಾಗಿದೆಯೇ? ಏಕೆಂದರೆ,  ಉಕ್ರೇನ್ ಬಾಂಬ್ ದಾಳಿಯಲ್ಲಿ (Russia Ukraine Tension) ತನ್ನ ಗಡಿಭಾಗದ ಪೋಸ್ಟ್ ವೊಂದು ಸ್ಫೋಟಗೊಂಡಿದೆ (Ukraine Attacks Russia) ಎಂದು ರಷ್ಯಾ (Russia) ಸೋಮವಾರ ಹೇಳಿಕೊಂಡಿದೆ. ಇನ್ನೊಂದೆಡೆ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಗಡಿಭಾಗದಲ್ಲಿ ತಮ್ಮ ಜನರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಉಕ್ರೇನ್ (Ukraine) ಹಲವಾರು ಬಾರಿ ಹೇಳಿಕೊಂಡಿದೆ. ಆದರೆ, ಮೊದಲ ಬಾರಿಗೆ, ಉಕ್ರೇನ್‌ನಲ್ಲಿ ಬಾಂಬ್ ದಾಳಿಯಲ್ಲಿ ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (FSB) ಬಳಸಿದ ಗಡಿ ಪೋಸ್ಟ್ ಅನ್ನು ನಾಶಪಡಿಸಲಾಗಿದೆ ಎಂದು ರಷ್ಯಾ ಹೇಳಿಕೊಂಡಿರುವುದು ಇಲ್ಲಿ ಗಮನಾರ್ಹ.

COMMERCIAL BREAK
SCROLL TO CONTINUE READING

ಇತ್ತೀಚಿನ ವಾರಗಳಲ್ಲಿ ಉಕ್ರೇನ್ ನ ಗಡಿಭಾಗದಲ್ಲಿ ರಷ್ಯಾ ಪಡೆಗಳ ನಿಯೋಜನೆ ಒಂದು ಆಕ್ರಮಣದ ಸಂಕೇತವಾಗಿದೆ ಎಂದು ಪಾಶ್ಚಿಮಾತ್ಯ ದೇಶಗಳು ಭಯಪಡುತ್ತಿವೆ. ಇದು ಒಂದು ವೇಳೆ ಸಂಭವಿಸಿದಲ್ಲಿ ಮಾಸ್ಕೋ (Moscow) ವಿರುದ್ಧ ಅವು ದೊಡ್ಡ ನಿರ್ಬಂಧವನ್ನು ವಿಧಿಸಲಿವೆ ಎನಲಾಗುತ್ತಿದೆ. ದಾಳಿ ನಡೆಸುವ ಯಾವುದೇ ಯೋಜನೆಗಳನ್ನು ಪ್ರಸ್ತುತ ರಷ್ಯಾ ನಿರಾಕರಿಸುತ್ತಿದ್ದರೂ ಕೂಡ ಪಾಶ್ಚಿಮಾತ್ಯ ದೇಶಗಳು ಸಮಗ್ರ ಭದ್ರತೆಯನ್ನು ಖಾತರಿಪಡಿಸಲು ಬಯಸುತ್ತಿವೆ. 

"ಫೆಬ್ರವರಿ 21 ರಂದು, ಬೆಳಗ್ಗೆ 9:50 a.m. (0650 GMT) ಸುಮಾರಿಗೆ, ಉಕ್ರೇನ್‌ನಿಂದ ಉಡಾವಣೆಯಾದ ಪ್ರಾಜೆಕ್ಟೈಲ್ ರಷ್ಯಾ-ಉಕ್ರೇನಿಯನ್ ಗಡಿಯಿಂದ ಸುಮಾರು 150 ಮೀಟರ್ ದೂರದಲ್ಲಿರುವ ರೋಸ್ಟೋವ್‌ಗೆ ಅಪ್ಪಳಿಸಿದೆ  ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ" ಎಂದು ಸೆಕ್ಯೂರಿಟಿ ಸರ್ವಿಸಿಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. "ಪ್ರದೇಶದಲ್ಲಿದ್ದ ಮತ್ತು FSB ಗಡಿ ಕಾವಲು ಸೇವೆಯಿಂದ ಬಳಸಲಾದ ಗಡಿ ಪೋಸ್ಟ್ ಅನ್ನು ನಾಶಪಡಿಸಲಾಗಿದೆ" ಎಂದು ಅವು ಹೇಳಿವೆ.

ಪಾಶ್ಚಿಮಾತ್ಯ ದೇಶಗಳ ಹೇಳಿಕೆ - 1.6 ಲಕ್ಷ ರಷ್ಯಾ ಸೈನಿಕರು ಉಕ್ರೇನ್ ಗಡಿಭಾಗದಲ್ಲಿ ಹಲ್ಲೆ ನಡೆಸಲು ಸನ್ನದ್ಧರಾಗಿದ್ದಾರೆ
ಯುದ್ಧವನ್ನು ತಡೆಗಟ್ಟುವಲ್ಲಿ ತಾನು ಗಂಭೀರವಾಗಿರುವುದಾಗಿ ತೋರ್ಪಡಿಸಲು ಎಂದು ತೋರಿಸಲು  ಉಕ್ರೇನ್ ಯುರೋಪಿಯನ್ ಒಕ್ಕೂಟದಿಂದ ರಷ್ಯಾ ವಿರುದ್ಧ ನಿರ್ಬಂಧನೆಯನ್ನು ಕೋರಿದೆ. ಇನ್ನೊಂದೆಡೆ ಈ ಕುರಿತು ಹೇಳಿಕೆ ನೀಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ರಷ್ಯಾ "1945ರ ಬಳಿಕ ಯುರೋಪ್ ನಲ್ಲಿ ಅತಿ ದೊಡ್ಡ ಯುದ್ಧದ ಯೋಜನೆ ರೂಪಿಸುತ್ತಿದೆ" ಎಂದು ಹೇಳಿದ್ದಾರೆ. 

ಭಾನುವಾರ, ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಮತ್ತು ಪುಟಿನ್ ನಡುವೆ ಸುಮಾರು ಎರಡು ಗಂಟೆಗಳ ದೂರವಾಣಿ ಸಂಭಾಷಣೆ ನಡೆದಿದೆ. ನಂತರ ಉಕ್ರೇನ್ ಬಿಕ್ಕಟ್ಟಿಗೆ ಪರಿಹಾರದ ಹುಡುಕಾಟವನ್ನು ತ್ವರಿತಗೊಳಿಸಲು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯ ನಂತರ, ಉಕ್ರೇನ್ ಬಿಕ್ಕಟ್ಟಿನ ಕುರಿತು ಶೃಂಗಸಭೆಯ ಅಧ್ಯಕ್ಷ ಮ್ಯಾಕ್ರನ್ ಅವರ ಪ್ರಸ್ತಾಪವನ್ನು ಯುಎಸ್ ಮತ್ತು ರಷ್ಯಾದ ಅಧ್ಯಕ್ಷರು ಒಪ್ಪಿಕೊಂಡಿದ್ದಾರೆ ಎಂದು ಫ್ರಾನ್ಸ್ ಹೇಳಿದೆ. ಉಕ್ರೇನ್‌ನಲ್ಲಿ ನಡೆದ ಯುಎಸ್-ರಷ್ಯಾ ಶೃಂಗಸಭೆಯಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಪ್ರಸ್ತಾಪಕ್ಕೆ ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಅವರ ರಷ್ಯಾದ ಸಹವರ್ತಿ ವ್ಲಾಡಿಮಿರ್ ಪುಟಿನ್ ಒಪ್ಪಿಕೊಂಡಿದ್ದಾರೆ ಎಂದು ಫ್ರೆಂಚ್ ರಾಷ್ಟ್ರಪತಿ ಭವನ ಮತ್ತು ಶ್ವೇತಭವನದ ಹೇಳಿಕೆ ತಿಳಿಸಿದೆ.


ಇದನ್ನೂ ಓದಿ-Russia-Ukraine Conflict: Nuclear Drill ನಡೆಸಿ ಶಕ್ತಿ ಪ್ರದರ್ಶಿಸಿದ Vladimir Putin, ಕಪ್ಪು ಸಮುದ್ರದಲ್ಲಿನ ಹಲ್-ಚಲ್ ನಿಂದ ಮತ್ತಷ್ಟು ಆಳವಾದ ಉಕ್ರೇನ್ ಬಿಕ್ಕಟ್ಟು

ಆದರೆ ಈ ಪ್ರಯತ್ನಕ್ಕೆ ಭಾರಿ ಹಿನ್ನಡೆ ಎಂಬಂತೆ,  "ರಷ್ಯಾ ಮತ್ತು ಯುಎಸ್ ಅಧ್ಯಕ್ಷರ ನಡುವೆ ಶೃಂಗಸಭೆ ನಡೆಸುವ ಬಗ್ಗೆ ಚರ್ಚಿಸಲು ಇದು ಸಕಾಲವಲ್ಲ: ಎಂದು ರಷ್ಯಾ ಸೋಮವಾರ ಹೇಳಿದೆ. "ಯಾವುದೇ ರೀತಿಯ ಶೃಂಗಸಭೆಯನ್ನು ನಡೆಸುವ ಯಾವುದೇ ನಿರ್ದಿಷ್ಟ ಯೋಜನೆಗಳ ಬಗ್ಗೆ ಮಾತನಾಡಲು ಇದು ತುಂಬಾ ಮುಂಚೆಯೇ" ಎಂದು ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸುದ್ದಿಗಾರರಿಗೆ ತಿಳಿಸಿದ್ದಾರೆ .


ಇದನ್ನೂ ಓದಿ-Universal Vaccine: ಶೀಘ್ರದಲ್ಲಿಯೇ ಬರಲಿದೆ ಕೊರೊನಾ ವಿರುದ್ಧ ಹೋರಾಡುವ ಸೂಪರ್ ವ್ಯಾಕ್ಸಿನ್, ಯಾವುದೇ ರೂಪಾಂತರಿ ಬಂದ್ರು ಖತಂ!

"ವಿದೇಶಾಂಗ ಮಂತ್ರಿಗಳ ಮಟ್ಟದಲ್ಲಿ ಮಾತುಕತೆಗಳನ್ನು ಮುಂದುವರೆಸಬೇಕು ಎಂಬುದು ಅರ್ಥವಾಗುವಂತಹದ್ದಾಗಿದೆ" ಎಂದು ಪೆಸ್ಕೋವ್ ಹೇಳಿದ್ದಾರೆ. ಅಧ್ಯಕ್ಷೀಯ ಶೃಂಗಸಭೆಗೆ "ಯಾವುದೇ ಕಾಂಕ್ರೀಟ್ ಯೋಜನೆಗಳಿಲ್ಲ" ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Ukraine Russia Crisis: ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿ: ದೇಶಕ್ಕೆ ಮರಳುವಂತೆ ಭಾರತೀಯ ರಾಜತಾಂತ್ರಿಕರ ಕುಟುಂಬಗಳಿಗೆ ಸೂಚನೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ