ಬ್ರಸೆಲ್ಸ್: ಇಂದು(ಫೆ.27) ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ 4ನೇ ದಿನ. ಏತನ್ಮಧ್ಯೆ ಯುರೋಪಿಯನ್ ಯೂನಿಯನ್ (European Union) ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಅವರಿಗೆ ದೊಡ್ಡ ಹೊಡೆತವನ್ನು ನೀಡಿದೆ. ಪುಟಿನ್ ಅವರ ಆಸ್ತಿಯನ್ನು ಫ್ರೀಜ್ ಮಾಡುವ ಪ್ರಸ್ತಾಪವನ್ನು ಯುರೋಪಿಯನ್ ಯೂನಿಯನ್ ಅನುಮೋದಿಸಿದೆ.


COMMERCIAL BREAK
SCROLL TO CONTINUE READING

ಯುರೋಪ್‌ನಲ್ಲಿರುವ ಪುಟಿನ್ ಆಸ್ತಿ ಮುಟ್ಟುಗೋಲು!  


ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್(Sergeĭ Viktorovich Lavrov) ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಇತರ ನಿರ್ಬಂಧಗಳನ್ನು ವಿಧಿಸಲು ಯುರೋಪಿಯನ್ ಯೂನಿಯನ್ ಒಪ್ಪಿಕೊಂಡಿದೆ. ಲಾಟ್ವಿಯಾದ ವಿದೇಶಾಂಗ ಸಚಿವ ಎಡ್ಗರ್ಸ್ ರಿಂಕೆವಿಕ್ಸ್ ಈ ಮಾಹಿತಿಯನ್ನು ನೀಡಿದ್ದಾರೆ.


ಇದನ್ನೂ ಓದಿ: Ukraine Russia War: ವಿಶ್ವಸಂಸ್ಥೆಯಲ್ಲಿ ಭಾರತದ ನಡೆಯನ್ನು ಶ್ಲಾಘಿಸಿದ ರಷ್ಯಾ


ಪುಟಿನ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದರ ಅರ್ಥವೇನು?


ವ್ಲಾಡಿಮಿರ್ ಪುಟಿನ್ ಮತ್ತು ಸೆರ್ಗೆಯ್ ಲಾವ್ರೊವ್ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರವು ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಮೇಲೆ ರಷ್ಯಾ ದಾಳಿ(Russia Ukraine War) ಮತ್ತು ಯುರೋಪ್ ನಲ್ಲಿ ಯುದ್ಧ ತಡೆಗಟ್ಟಲು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುವ ದಾರಿಯಲ್ಲಿವೆ ಎಂಬರ್ಥವನ್ನು ನೀಡುತ್ತದೆ.


ರಷ್ಯಾದ ವಿದೇಶಾಂಗ ಸಚಿವರ ವಿರುದ್ಧವೂ ಕ್ರಮ  


ಯುರೋಪಿಯನ್ ಯೂನಿಯನ್(European Union) ವಿದೇಶಾಂಗ ಮಂತ್ರಿಗಳು 2ನೇ ನಿರ್ಬಂಧಗಳ ಪ್ಯಾಕೇಜ್ ಅನ್ನು ಅನುಮೋದಿಸಿದ್ದಾರೆ ಮತ್ತು ಫ್ರೀಜ್ ಮಾಡಲಾದ ಸ್ವತ್ತುಗಳಲ್ಲಿ ರಷ್ಯಾದ ಅಧ್ಯಕ್ಷ ಪುಟೀನ್ ಮತ್ತು ವಿದೇಶಾಂಗ ಸಚಿವರ ಆಸ್ತಿಗಳನ್ನು ಒಳಗೊಂಡಿವೆ ಎಂದು ಲಾಟ್ವಿಯನ್ ವಿದೇಶಾಂಗ ಸಚಿವ ಎಡ್ಗರ್ಸ್ ರಿಂಕೆವಿಕ್ಸ್ ತಿಳಿಸಿದ್ದಾರೆ. ಯುರೋಪಿಯನ್ ಯೂನಿಯನ್ ಮತ್ತೊಂದು ನಿರ್ಬಂಧಗಳ ಪ್ಯಾಕೇಜ್‌ಗೆ ತಯಾರಿ ನಡೆಸುತ್ತಿದೆ ಅಂತಲೂ ಅವರು ತಿಳಿಸಿದ್ದಾರೆ.


ಇದನ್ನೂ ಓದಿ: Russia Ukraine War: ಎಲ್ಲಾ ದಿಕ್ಕುಗಳಿಂದಲೂ ಉಕ್ರೇನ್ ನ್ನು ಆಕ್ರಮಿಸಿದ ರಷ್ಯಾ ಸೈನ್ಯ...!


ರಷ್ಯಾದ ದಾಳಿ(Russia Ukraine War)ಯಿಂದ ನಲುಗಿ ಹೋಗಿರುವ ಉಕ್ರೇನ್‌ಗೆ ಅಮೆರಿಕ, ಬ್ರಿಟನ್ ಸೇರಿದಂತೆ 28 ದೇಶಗಳು ಸಹಾಯ ಮಾಡಲು ಮುಂದೆ ಬಂದಿವೆ. ಉಕ್ರೇನ್‌ಗೆ 1000 Anti-tank ಮತ್ತು 500 Stinger Surface-to-air ಕ್ಷಿಪಣಿಗಳನ್ನು ಪೂರೈಸಲು ಜರ್ಮನಿ ನಿರ್ಧರಿಸಿದೆ.


ಮಹತ್ವದ ಸಂಗತಿಯೆಂದರೆ ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಇಂದು (ಭಾನುವಾರ) ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್(Emmanuel Macron) ವಿಶೇಷ ಸಭೆಯನ್ನು ಕರೆದಿದ್ದಾರೆ. ಫ್ರಾನ್ಸ್‌ನ ಉನ್ನತ ಅಧಿಕಾರಿಗಳು ಮತ್ತು ಸಚಿವರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಕ್ಷಣಾ ಮಂಡಳಿಯ ಈ ಸಭೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆಯಲಿದೆ. ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿಯನ್ನು ಈಗಾಗಲೇ ಅನೇಕ ದೇಶಗಳು ಖಂಡಿಸಿವೆ.


ವಿಶ್ವಸಂಸ್ಥೆಯಲ್ಲಿ ತಮ್ಮ ದೇಶಕ್ಕೆ ಬೆಂಬಲ ನೀಡುವಂತೆ ಭಾರತಕ್ಕೆ ಉಕ್ರೇನ್ ಮನವಿ ಮಾಡಿಕೊಂಡಿದೆ. ಉಕ್ರೇನ್‌ ವಿರುದ್ಧ ರಷ್ಯಾ ನಡೆಸುತ್ತಿರುವ ಆಕ್ರಮಣ ಮತ್ತು ದಾಳಿಯನ್ನು ಖಂಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಿದ್ದ ನಿರ್ಣಯದಲ್ಲಿ ಮತದಾನದಿಂದ ಭಾರತ ದೂರ ಉಳಿದಿದೆ. ಭಾರತದ ಈ ನಡೆಯನ್ನು ರಷ್ಯಾ ಶ್ಲಾಘಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.