ನವದೆಹಲಿ: ಉಕ್ರೇನ್ ಮೇಲಿನ ದಾಳಿ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ರಷ್ಯಾದ ವಿರುದ್ಧ ಅಮೇರಿಕಾ ಮಂಡಿಸಿದ್ದ ನಿರ್ಣಯದಿಂದ ದೂರ ಉಳಿದಿರುವ ಭಾರತದ ನಡೆಯನ್ನು ರಷ್ಯಾ ದೇಶವು ಶ್ಲಾಘಿಸಿದೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಭಾರತದಲ್ಲಿನ ರಷ್ಯಾದ ಮಿಶನ್ "ಫೆಬ್ರವರಿ 25, 2022 ರಂದುಭದ್ರತಾ ಮಂಡಳಿಯ ಮತದಾನದಲ್ಲಿ ಭಾರತದ ಸ್ವತಂತ್ರ ಮತ್ತು ಸಮತೋಲಿತ ಸ್ಥಾನವನ್ನು ಹೆಚ್ಚು ಪ್ರಶಂಸಿಸುತ್ತೇವೆ.ವಿಶೇಷವಾದ ಕಾರ್ಯತಂತ್ರದ ಪಾಲುದಾರಿಕೆಯ ಉತ್ಸಾಹದಲ್ಲಿ ಉಕ್ರೇನ್ ಸುತ್ತಲಿನ ಪರಿಸ್ಥಿತಿಯ ಬಗ್ಗೆ ಭಾರತದೊಂದಿಗೆ ನಿಕಟ ಮಾತುಕತೆ ನಡೆಸಲು ರಷ್ಯಾ ಬದ್ಧವಾಗಿದೆ" ಎಂದು ಹೇಳಿದೆ.
Highly appreciate India’s independent and balanced position at the voting in the UNSC on February 25, 2022.
In the spirit of the special and privileged strategic partnership Russia is committed to maintain close dialogue with India on the situation around Ukraine https://t.co/oKtElMLLRf
— Russia in India 🇷🇺 (@RusEmbIndia) February 26, 2022
ಇನ್ನೊಂದೆಡೆಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ನೆರವನ್ನು ಕೋರುತ್ತಾ ಪ್ರಧಾನಿ ಮೋದಿ (PM Narendra Modi) ಜೊತೆ ಮಾತುಕತೆ ನಡೆಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು "ಇಂದು ಪ್ರಧಾನಿ ಮೋದಿ (PM Narendra Modi) ಅವರೊಂದಿಗೆ ಮಾತನಾಡಿದೆ.ಅವರಿಗೆ ದಾಳಿಯನ್ನು ಹಿಮ್ಮೆಟ್ಟಿಸುವ ಮಾರ್ಗದ ಬಗ್ಗೆ ತಿಳಿಸಲಾಗಿದೆ.ಈಗಾಗಲೇ 100,000 ಕ್ಕೂ ಹೆಚ್ಚು ಆಕ್ರಮಣಕಾರರು ನಮ್ಮ ದೇಶದುದ್ದಕ್ಕೂ ಆವರಿಸಿದ್ದಾರೆ, ಅಷ್ಟೇ ಅಲ್ಲದೆ ಅವರು ವಸತಿ ಕಟ್ಟಡಗಳ ಮೇಲೆ ಗುಂಡನ್ನು ಹಾರಿಸುತ್ತಿದ್ದಾರೆ.ಈ ಹಿನ್ನಲೆಯಲ್ಲಿ ಭದ್ರತಾ ಮಂಡಳಿಯಲ್ಲಿ ನಮಗೆ ರಾಜಕೀಯ ಬೆಂಬಲ ನೀಡುವಂತೆ ಕೋರಲಾಗಿದೆ.ಆ ಮೂಲಕ ಒಗ್ಗಟ್ಟಾಗಿ ದಾಳಿಕೋರರ ವಿರುದ್ಧ ನಿಲ್ಲಬೇಕು' ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Worlds Most Powerful Militaries : ಜಗತ್ತಿನ ಅತೀ ಬಲಿಷ್ಠ ಮಿಲಿಟರಿ ಯಾವುದು? ಭಾರತ ಯಾವ ಸ್ಥಾನದಲ್ಲಿದೆ? ಇಲ್ಲಿದೆ ನೋಡಿ
ಇದಕ್ಕೂ ಮೊದಲು ಭದ್ರತಾ ಮಂಡಳಿಯಲ್ಲಿ ಅಮೇರಿಕಾ ದೇಶವು ರಷ್ಯಾದ ವಿರುದ್ಧದ ನಿರ್ಣಯವನ್ನು ಮಂಡಿಸಿತು, ಆದರೆ ಭಾರತ ಮತ್ತು ಚೀನಾ ದೇಶಗಳು ಈ ನಿರ್ಣಯದ ಪರವಾಗಿ ಮತ ಚಲಾಯಿಸದೇ ಮತದಾನದಿಂದ ದೂರ ಉಳಿದಿದ್ದವು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.