Russia-Ukraine War: ಉಕ್ರೇನ್ ಮೇಲೆ ರಷ್ಯಾ ದಾಳಿಯ ನಡುವೆ `ಉಕ್ರೇನ್ ಅನ್ನು ಆಕ್ರಮಿಸುವುದಿಲ್ಲ` ಎಂದ Vladimir Putin
Russia-Ukraine Tension - ರಷ್ಯಾದ ಪಡೆಗಳು ನಿರಂತರವಾಗಿ ಉಕ್ರೇನಿಯನ್ ನೆಲದಲ್ಲಿ ಮುನ್ನುಗ್ಗುತ್ತಲೇ ಇವೆ. ಎರಡು ದಿನಗಳ ಕಾಲ, ಕ್ಷಿಪಣಿಗಳು, ರಾಕೆಟ್ ಲಾಂಚರ್‌ಗಳು ಮತ್ತು ಸೈನ್ಯದೊಂದಿಗೆ ಎಲ್ಲಾ ರಂಗಗಳಲ್ಲಿ ರಷ್ಯಾದ (Russia) ಸೈನಿಕರು ಮತ್ತು ಉಕ್ರೇನಿಯನ್ ಸೈನಿಕರ ನಡುವೆ ಯುದ್ಧ ನಡೆಯುತ್ತಿದೆ.
Russia-Ukraine Tension - ರಷ್ಯಾದ ಪಡೆಗಳು ನಿರಂತರವಾಗಿ ಉಕ್ರೇನಿಯನ್ ನೆಲದಲ್ಲಿ ಮುನ್ನುಗ್ಗುತ್ತಲೇ ಇವೆ. ಎರಡು ದಿನಗಳ ಕಾಲ, ಕ್ಷಿಪಣಿಗಳು, ರಾಕೆಟ್ ಲಾಂಚರ್‌ಗಳು ಮತ್ತು ಸೈನ್ಯದೊಂದಿಗೆ ಎಲ್ಲಾ ರಂಗಗಳಲ್ಲಿ ರಷ್ಯಾದ (Russia) ಸೈನಿಕರು ಮತ್ತು ಉಕ್ರೇನಿಯನ್ ಸೈನಿಕರ ನಡುವೆ ಯುದ್ಧ ನಡೆಯುತ್ತಿದೆ. ಇದೇ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Russian President Vladimir Putin) ಹೇಳಿಕೆ ಬಹಿರಂಗಗೊಂಡಿದೆ. ತಮ್ಮ ಭಾಷಣದಲ್ಲಿ ಯುದ್ಧದ ಕುರಿತು ಉಲ್ಲೇಖಿಸುರುವ ಅವರು ಉಕ್ರೇನ್ ಸರ್ಕಾರದ (Ukraine Government) ಮೇಲೆ ವಾಗ್ದಾಳಿ ನಡೆಸಿದ್ದಾರೆ. ನಾವು ಉಕ್ರೇನ್ (Ukraine) ಅನ್ನು ವಶಪಡಿಸಿಕೊಳ್ಳುವುದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ, ಆದರೆ ಅಲ್ಲಿನ ಆಡಳಿತಗಾರರು ನಾಜಿ ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ. ಅಷ್ಟೇ ಅಲ್ಲ ಅವರು ನಾಗರಿಕರನ್ನು ಕವಚವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ-Russia-Ukraine Crisis: 'ಉಕ್ರೇನ್‌ನ ಮಿಲಿಟರಿ ಶರಣಾದರೆ ಮಾಸ್ಕೋ ಮಾತುಕತೆಗೆ ಸಿದ್ಧ'
ಶುಕ್ರವಾರ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ರಷ್ಯಾದ ಪಡೆಗಳ ತೀವ್ರತರವಾದ ದಾಳಿಯ ನಡುವೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಉಕ್ರೇನ್ ಸರ್ಕಾರ ನಾಜಿ ಭಯೋತ್ಪಾದಕರಂತೆ ವರ್ತಿಸುತ್ತಿದೆ ಎಂದು ಪುಟಿನ್ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ. ಆದರೆ ನಾವು ಅದಕ್ಕಾಗಿ ಉಕ್ರೇನ್ ಅನ್ನು ಆಕ್ರಮಿಸುವುದಿಲ್ಲ ಎಂಬ ಭರವಸೆಯನ್ನು ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಬೆಲಾರಸ್‌ನಲ್ಲಿ ಮಾತುಕತೆಗೆ ರಷ್ಯಾ ಅಥವಾ ಉಕ್ರೇನ್ ಸಿದ್ಧರಾಗುತ್ತಿಲ್ಲ
ನಾವು ಉಕ್ರೇನ್‌ನೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ ಆದರೆ ಮಿನ್ಸ್ಕ್‌ನಲ್ಲಿ ಮಾತುಕತೆ ನಡೆಸುತ್ತೇವೆ ಎಂದು ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಉಕ್ರೇನ್ ಜೊತೆ ಮಾತುಕತೆ ನಡೆಸಲು ನಮ್ಮ ನಿಯೋಗ ಬೆಲಾರಸ್ ರಾಜಧಾನಿ ಮಿನ್ಸ್ಕ್ ತಲುಪಲಿದೆ. ಪಾಶ್ಚಿಮಾತ್ಯ ದೇಶಗಳು ನಮ್ಮ ಕೆಲಸದಲ್ಲಿ ಮಧ್ಯಪ್ರವೇಶಿಸಬಾರದು, ಇಲ್ಲದಿದ್ದರೆ ಫಲಿತಾಂಶವು ಭಾರಿ ವಿನಾಶಕಾರಿಯಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ-Russia Ukraine War: ಪುಟ್ಟ ಮಗಳಿಂದ ಬೇರ್ಪಡುವ ವೇಳೆ ಬಿಕ್ಕಿ ಬಿಕ್ಕಿ ಅಳುತ್ತಿರುವ ತಂದೆ, ಮನಕಲಕುವ ವಿಡಿಯೋ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ