Russia Ukraine War: ಪುಟ್ಟ ಮಗಳಿಂದ ಬೇರ್ಪಡುವ ವೇಳೆ ಬಿಕ್ಕಿ ಬಿಕ್ಕಿ ಅಳುತ್ತಿರುವ ತಂದೆ, ಮನಕಲಕುವ ವಿಡಿಯೋ

ಯುದ್ಧವು ವಿನಾಶಕಾರಿ ಪ್ರಕ್ರಿಯೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅಲ್ಲಿ ಸಾವು ಬಿಟ್ಟರೆ ಬೇರೆ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಯುದ್ದ ಎಂದರೆ ಬರೀ ಸರ್ವ ನಾಶವಷ್ಟೇ. 

Written by - Ranjitha R K | Last Updated : Feb 25, 2022, 04:55 PM IST
  • ಮಗಳಿಂದ ಬೇರ್ಪಡುವ ನೋವು ಈ ತಂದೆಯದ್ದು
  • ಕಣ್ಣಂಚು ಒದ್ದೆ ಮಾಡುತ್ತದೆ ಈ ವಿಡಿಯೋ
  • ಯುದ್ದ ಬರೀ ಸರ್ವ ನಾಶ ಮಾಡುತ್ತದೆಯಷ್ಟೇ
Russia Ukraine War: ಪುಟ್ಟ ಮಗಳಿಂದ ಬೇರ್ಪಡುವ ವೇಳೆ ಬಿಕ್ಕಿ ಬಿಕ್ಕಿ ಅಳುತ್ತಿರುವ ತಂದೆ, ಮನಕಲಕುವ ವಿಡಿಯೋ   title=
ಮಗಳಿಂದ ಬೇರ್ಪಡುವ ನೋವು ಈ ತಂದೆಯದ್ದು (photo twitter)

ನವದೆಹಲಿ  : Russia Ukraine War: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್  Vladimir Putin) ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ನಂತರ ರಷ್ಯಾದ ಸೇನೆಯ ದಾಳಿ ತೀವ್ರಗೊಂಡಿದೆ (Russia Ukraine War). ರಷ್ಯಾದ ಸೇನೆಯು ಉಕ್ರೇನಿಯನ್ ನಗರಗಳಲ್ಲಿನ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ಉಕ್ರೇನ್‌ನ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು  ನಾಶಪಡಿಸುವುದಾಗಿ ರಷ್ಯಾ ಹೇಳಿಕೊಂಡಿದೆ. ಫೆಬ್ರವರಿ 24 ರ ಗುರುವಾರ ಬೆಳಿಗ್ಗೆ ಮೊದಲ ದಾಳಿಯ ನಂತರ, ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮಮಾಧ್ಯಮಗಳಲ್ಲಿ ವೈರಲ್ ಆಗಿವೆ. ಇದೀಗ  ಈ ಭಾವನಾತ್ಮಕ ವಿಡಿಯೋವೊಂದು (Emotional video)ಎಲ್ಲೆಡೆ ಹರಿದಾಡುತ್ತಿದೆ. 

ಮಗಳಿಂದ ಬೇರ್ಪಡುವ ವೇಳೆ ಬಿಕ್ಕಿ ಬಿಕ್ಕಿ ಅಳುತ್ತಿರುವ ತಂದೆ : 
ಯುದ್ಧವು ವಿನಾಶಕಾರಿ ಪ್ರಕ್ರಿಯೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅಲ್ಲಿ ಸಾವು ಬಿಟ್ಟರೆ ಬೇರೆ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಯುದ್ದ ಎಂದರೆ ಬರೀ ಸರ್ವ ನಾಶವಷ್ಟೇ.  ಈಗ ಉಕ್ರೇನ್ ನಲ್ಲಿ ನೆಲೆಸಿರುವವರಿಗೆ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳುವುದು ಅತ್ಯಂತ ಕಷ್ಟದ ಕೆಲಸವಾಗಿದೆ (Russia Ukraine War).  ರಷ್ಯಾ ಉಕ್ರೇನ್ ಯುದ್ದ ಪರಿಣಾಮದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿವೆ (Viral video).  ಇದೀಗ ತನ್ನ ಮಗಳನ್ನು ಬಸ್ಸಿನಲ್ಲಿ ಕೂರಿಸಿ ಬೇರೆಡೆಗೆ ಕಳುಹಿಸುತ್ತಿರುವ ತಂದೆಯ ವಿಡಿಯೋ ವೈರಲ್ ಆಗುತ್ತಿದೆ.  ಈ ವೇಳೆ ಮಗಳನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿರುವ ತಂದೆಯನ್ನು ನೋಡಿದರೆ ಕರುಳು ಚುರುಕೆನ್ನದೇ  ಇರದು. 

 

ಇದನ್ನೂ ಓದಿ : Russia Ukraine Crisis: ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಚರ್ಚೆ

ಈ ಭಾವನಾತ್ಮಕ ವೀಡಿಯೊ ಕಟು ಹೃದಯಿಗಳ  ಕಣ್ಣಾಲಿ ಕೂಡಾ ಒದ್ದೆ ಮಾಡುವಂತಿದೆ (Emnotional video).  ರಷ್ಯನ್ನರ ವಿರುದ್ಧ ಹೋರಾಡಲು ನಿಲ್ಲುವ ತಂದೆ ಇಲ್ಲಿ ತನ್ನ ಕುಟುಂಬವನ್ನು ಬೇರೆಡೆಗೆ ಕಳುಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಗಳನ್ನು ತಂದೆ ಅಪ್ಪಿ ಮುದ್ದಾಡುವ ದೃಶ್ಯ ಮನ ಕಲಕುವಂತಿದೆ. ಈ ವೀಡಿಯೋ ನೋಡಿದ ಅನೇಕ ಮಂದಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ (Father daughter video).  ಈ ಕುಟುಂಬವನ್ನು ದೇವರು ಆದಷ್ಟು ಬೇಗ ಒಂದು ಮಾಡಲಿ ಎಂದು ವೀಕ್ಷಕರು ಹಾರೈಸಿದ್ದಾರೆ. 

ಇದನ್ನೂ ಓದಿ : Russia-Ukraine conflict: ಉಕ್ರೇನ್ ಮೇಲೆ ರಷ್ಯಾ ದಾಳಿ, ತುರ್ತು ಸಭೆ ಕರೆದ ನ್ಯಾಟೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News