ಉಕ್ರೇನಿಯನ್ ನಾಲ್ಕು ಪ್ರದೇಶಗಳನ್ನು ಅಧಿಕೃತವಾಗಿ ಸ್ವಾಧೀನಪಡಿಸಿಕೊಂಡ ರಷ್ಯಾ
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ನಡೆದ ಸಮಾರಂಭದಲ್ಲಿ ನಾಲ್ಕು ಉಕ್ರೇನಿಯನ್ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದರು.
ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ನಡೆದ ಸಮಾರಂಭದಲ್ಲಿ ನಾಲ್ಕು ಉಕ್ರೇನಿಯನ್ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದರು.
ನೂರಾರು ಗಣ್ಯರೊಂದಿಗೆ ಕ್ರೆಮ್ಲಿನ್‌ನ ಸೇಂಟ್ ಜಾರ್ಜ್ ಹಾಲ್‌ನಲ್ಲಿ ಮಾತನಾಡಿದ ಪುಟಿನ್, ಇದು ಲಕ್ಷಾಂತರ ಜನರ ಇಚ್ಛೆ ಎಂದು ಹೇಳಿದ್ದಾರೆ. ಇದೇವೇ ಳೆ ಪುಟಿನ್ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಉಕ್ರೇನ್ 'ರಷ್ಯಾ ಯುದ್ಧದ ಅತ್ಯಂತ ಹಾನಿಕಾರಕ ಪರಿಣಾಮಗಳನ್ನು ತಪ್ಪಿಸಲು ಪುಟಿನ್ ಅವರನ್ನು ನಿಲ್ಲಿಸಬೇಕು ಹೇಳಿದೆ.
ಇದನ್ನು ಓದಿ: ನಾಳೆ ನಾಲ್ಕು ಉಕ್ರೇನ್ ಪ್ರದೇಶಗಳನ್ನು ಔಪಚಾರಿಕವಾಗಿ ವಶಪಡಿಸಿಕೊಳ್ಳಲಿದೆ ರಷ್ಯಾ
ಇನ್ನೊಂದೆಡೆಗೆ ಡೊನೆಟ್ಸ್ಕ್, ಲುಹಾನ್ಸ್ಕ್, ಖೆರ್ಸನ್ ಮತ್ತು ಝಪೊರಿಝಿಯಾಗಳ ರಷ್ಯಾದ ಆಕ್ರಮಿತ ಪ್ರದೇಶಗಳನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿರುವುದನ್ನು ಪಶ್ಚಿಮದಲ್ಲಿ ವ್ಯಾಪಕವಾಗಿ ಖಂಡಿಸಲಾಗಿದೆ.ರಷ್ಯಾದ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಲು ಮುಂದಾದ ಯುಎಸ್
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ನಡೆಗೆ ತಿರುಗೇಟು ನೀಡುವ ಭರವಸೆ ನೀಡಿದ್ದಾರೆ.ಇನ್ನೊಂದೆಡೆಗೆ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರು ಪುಟಿನ್ ಅವರ ನಡೆಯ ವಿರುದ್ಧ ಎಚ್ಚರಿಕೆ ನೀಡಿದರು. ಈ ಯೋಜಿತ ಸೇರ್ಪಡೆಗಳು ಅಪಾಯಕಾರಿ ಉಲ್ಬಣ ಮತ್ತು ಭವಿಷ್ಯವನ್ನು ಅಪಾಯಕ್ಕೆ ತಳ್ಳುತ್ತವೆ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.