ಮಾಸ್ಕೋ:  ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶುಕ್ರವಾರದಂದು ಭಾರತೀಯರನ್ನು ಪ್ರತಿಭಾನ್ವಿತರು ಇದರಿಂದಾಗಿ ಅದು ಮುಂಬರುವ ದಿನಗಳಲ್ಲಿ ಅಭಿವೃದ್ಧಿಯ ವಿಷಯದಲ್ಲಿ ಅದು ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.


COMMERCIAL BREAK
SCROLL TO CONTINUE READING

ನವೆಂಬರ್ 4 ರಂದು ರಷ್ಯಾದ ಏಕತಾ ದಿನದ ಸಂದರ್ಭದಲ್ಲಿ ಮಾತನಾಡಿದ ಪುಟಿನ್ ಭಾರತವು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ ಎಂದು ಶ್ಲಾಘಿಸಿದರು.ಭಾರತವು ತನ್ನ ಅಭಿವೃದ್ಧಿಯ ವಿಷಯದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹಗಳಿಲ್ಲ ಮತ್ತು ಸುಮಾರು ಒಂದೂವರೆ ಶತಕೋಟಿ ಜನಸಂಖ್ಯೆ ಅದರ ಸಾಮರ್ಥ್ಯವಾಗಿದೆ ಎಂದು ಹೇಳಿದರು.


'ನಾವು ಭಾರತದತ್ತ ನೋಡಿದರೆ ಆಂತರಿಕ ಅಭಿವೃದ್ದಿಗಾಗಿ ಅದು ಪ್ರತಿಭಾವಂತ ಜನರನ್ನು ಹೊಂದಿದೆ, ಇದು ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಅತ್ತ್ಯುತ್ತಮ ಫಲಿತಾಂಶವನ್ನು ಸಾಧಿಸುತ್ತದೆ ಎಂದು ಪುಟಿನ್ ಹೇಳಿದರು.


ಇದನ್ನೂ ಓದಿ: Viral Video: ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ ಚಿರತೆ! ಭಯಾನಕ ವಿಡಿಯೋ ಹೇಗಿದೆ ನೋಡಿ


ಆಫ್ರಿಕಾದಲ್ಲಿ ವಸಾಹತುಶಾಹಿ, ಭಾರತದ ಸಾಮರ್ಥ್ಯ ಮತ್ತು ರಷ್ಯಾ ಹೇಗೆ 'ವಿಶಿಷ್ಟ ನಾಗರಿಕತೆ ಮತ್ತು ಸಂಸ್ಕೃತಿಯನ್ನು' ಹೊಂದಿದೆ ಎನ್ನುವುದನ್ನು ವಿವರಿಸಿದ ಪುಟಿನ್ ರಷ್ಯಾದ ಮತ್ತು ಜಾಗತಿಕ ಇತಿಹಾಸದ ಬಗ್ಗೆ ಭಾಷಣ ಮಾಡುವಾಗ ಪಾಶ್ಚಿಮಾತ್ಯ ಸಾಮ್ರಾಜ್ಯಗಳು ಆಫ್ರಿಕಾವನ್ನು ದೋಚಿದವು ಎನ್ನುವುದನ್ನು ಅವರು ಈ ಸಂದರ್ಭದಲ್ಲಿ ಹೇಳಿದರು.


ರಷ್ಯಾವು ಬಹುರಾಷ್ಟ್ರೀಯ ರಾಜ್ಯವಾಗಿದೆ ಮತ್ತು ಅನನ್ಯ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ರಾಜ್ಯ ಎಂದು ಪುಟಿನ್ ಹೇಳಿದರು.ಆದಾಗ್ಯೂ, ರಾಯಿಟರ್ಸ್ ಅನುವಾದದ ಪ್ರಕಾರ ದೇಶವು ಗಮನಾರ್ಹ ರೀತಿಯಲ್ಲಿ ಯುರೋಪಿಯನ್ ಸಂಸ್ಕೃತಿಯ ಭಾಗವಾಗಿದೆ ಮತ್ತು ಧರ್ಮದ ಮೂಲಕ ಖಂಡದೊಂದಿಗೆ ಸಂಪರ್ಕ ಹೊಂದಿದೆ ಎಂದು ಅವರು ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.