ಪರಮಾಣು ನಿರೋಧಕ ಪಡೆಗಳಿಗೆ ಹೈಅಲರ್ಟ್ ನಲ್ಲಿರಲು ಸೂಚಿಸಿದ ಪುಟಿನ್..!
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ರಕ್ಷಣಾ ಮುಖ್ಯಸ್ಥರಿಗೆ ಭಾನುವಾರ ದೇಶದ ಪರಮಾಣು ನಿರೋಧಕ ಪಡೆಗಳಿಗೆ ಹೆಚ್ಚಿನ ಎಚ್ಚರಿಕೆಯಿಂದ ಇರುವಂತೆ ಆದೇಶಿಸಿದ್ದಾರೆ. ಪಾಶ್ಚಾತ್ಯ ದೇಶಗಳು ತಮ್ಮ ದೇಶದ ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ರಕ್ಷಣಾ ಮುಖ್ಯಸ್ಥರಿಗೆ ಭಾನುವಾರ ದೇಶದ ಪರಮಾಣು ನಿರೋಧಕ ಪಡೆಗಳಿಗೆ ಹೆಚ್ಚಿನ ಎಚ್ಚರಿಕೆಯಿಂದ ಇರುವಂತೆ ಆದೇಶಿಸಿದ್ದಾರೆ. ಪಾಶ್ಚಾತ್ಯ ದೇಶಗಳು ತಮ್ಮ ದೇಶದ ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ (Russia Ukraine War) ಬಗ್ಗೆ ಈಗಾಗಲೇ ಅಂತರರಾಷ್ಟ್ರೀಯ ಉದ್ವಿಗ್ನತೆಗಳು ಹೆಚ್ಚಾಗುತ್ತಿದ್ದು, ಪುಟಿನ್ ಆದೇಶವು ಮತ್ತಷ್ಟು ಎಚ್ಚರಿಕೆಯನ್ನು ಉಂಟುಮಾಡುತ್ತದೆ.ರಷ್ಯಾ ದೇಶವು ವಿಶ್ವದ ಎರಡನೇ ಅತಿದೊಡ್ಡ ಪರಮಾಣು ಶಸ್ತ್ರಾಸ್ತ್ರಗಳನ್ನು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಂದಿರುವ ದೇಶವಾಗಿದೆ. ಇದು ದೇಶದ ಪ್ರತಿಬಂಧಕ ಪಡೆಗಳ ಬೆನ್ನೆಲುಬಾಗಿದೆ.
ಇದನ್ನೂ ಓದಿ: ತಮ್ಮ ಮೊಮ್ಮಕ್ಕಳಿಗಾಗಿ ಉಕ್ರೇನಿಯನ್ ಸೈನ್ಯ ಸೇರಲು ಮುಂದಾದ 80 ವರ್ಷದ ಅಜ್ಜ
'ರಷ್ಯಾದ ಸೈನ್ಯದ ಪ್ರತಿಬಂಧಕ ಪಡೆಗಳನ್ನು ವಿಶೇಷ ಯುದ್ಧ ಸೇವೆಗೆ ಒಳಪಡಿಸಲು ನಾನು ರಕ್ಷಣಾ ಮಂತ್ರಿ ಮತ್ತು ರಷ್ಯಾದ ಸಶಸ್ತ್ರ ಪಡೆಗಳ ಸಾಮಾನ್ಯ ಸಿಬ್ಬಂದಿಯ ಮುಖ್ಯಸ್ಥರಿಗೆ ಆದೇಶಿಸುತ್ತೇನೆ.ಪಾಶ್ಚಿಮಾತ್ಯ ದೇಶಗಳು ಆರ್ಥಿಕ ಕ್ಷೇತ್ರದಲ್ಲಿ ಕಾನೂನುಬಾಹಿರ ನಿರ್ಬಂಧಗಳು ನಮ್ಮ ದೇಶಕ್ಕೆ ಪೂರಕವಾಗಿಲ್ಲ ಎನ್ನುವುದನ್ನು ನೀವೆಲ್ಲಾ ನೋಡುತ್ತಿದ್ದಿರಿ" ಎಂದು ಅವರು ತಮ್ಮ ದೂರದರ್ಶನದ ಭಾಷಣದಲ್ಲಿ ಹೇಳಿದರು.
ಇದನ್ನೂ ಓದಿ: Ukraine-Russia War Updates: ರಷ್ಯಾಗೆ ತಿರುಗೇಟು ನೀಡಲು Ukraine ನೆರವಿಗೆ ಧಾವಿಸಿದ ಜರ್ಮನಿ
ರಷ್ಯಾ ದೇಶವು ಎಲ್ಲಾ ದಿಕ್ಕಿನಿಂದಲೂ ಉಕ್ರೇನ್ (Russia-Ukraine Conflict) ನ್ನು ಆವರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ, ಆದರೆ ಇದಕ್ಕೆ ಉಕ್ರೇನಿಯನ್ ಪಡೆಗಳು ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿವೆ ಎನ್ನಲಾಗಿದೆ. ಇದರಿಂದಾಗಿ ರಷ್ಯಾದ ಸೇನೆಯು ಹತಾಶಗೊಂಡಿದೆ ಮತ್ತು ಹಲವಾರು ಸೈನಿಕರು ಶರಣಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ