Ukraine-Russia War Updates: ರಷ್ಯಾಗೆ ತಿರುಗೇಟು ನೀಡಲು Ukraine ನೆರವಿಗೆ ಧಾವಿಸಿದ ಜರ್ಮನಿ

Ukraine-Russia War Updates: ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ನಡುವೆಯೇ ಜರ್ಮನಿ (Germany) ಉಕ್ರೇನ್‌ಗೆ (Ukraine) 1 ಸಾವಿರ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳು ಮತ್ತು 500 ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿಗಳನ್ನು ನೀಡಲಿದೆ.  ಅಷ್ಟೇ ಅಲ್ಲ ಜರ್ಮನಿ ರಷ್ಯಾದ ವಿಮಾನಗಳಿಗಾಗಿ ತನ್ನ  ವಾಯುಪ್ರದೇಶವನ್ನು ಸಹ ಮುಚ್ಚಲಿದೆ.  

Written by - Nitin Tabib | Last Updated : Feb 27, 2022, 02:34 PM IST
  • ಪುಟಿನ್ (Vladimir Putin) ಸೈನ್ಯವನ್ನು ಹಿಮ್ಮೆಟ್ಟಿಸಲು ಉಕ್ರೇನ್ ಸಹಾಯಕ್ಕೆ ಧಾವಿಸಿದ ಜರ್ಮನಿ.
  • ರಷ್ಯಾ-ಉಕ್ರೇನ್ ಯುದ್ಧದ ನಡುವೆಯೇ ಜರ್ಮನಿ ತನ್ನ ನೀತಿಯನ್ನು ಬದಲಾಯಿಸಿದೆ.
  • ನೆದರ್ಲ್ಯಾಂಡ್ಸ್ನಿಂದ ಉಕ್ರೇನ್ಗೆ 400 ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಕಳುಹಿಸಲು ಸಿದ್ಧತೆಗಳು
Ukraine-Russia War Updates: ರಷ್ಯಾಗೆ ತಿರುಗೇಟು ನೀಡಲು Ukraine ನೆರವಿಗೆ ಧಾವಿಸಿದ ಜರ್ಮನಿ  title=
Ukraine-Russia War Updates (File Photo)

ವಿಯೆನ್ನಾ: Russia-Ukraine Crisis - ನಿಜಕ್ಕೂ ಅಸಾಧಾರಣ ಹೆಜ್ಜೆಯನ್ನಿಟ್ಟಿರುವ ಜರ್ಮನ್ ಸರ್ಕಾರ ಶಸ್ತ್ರಾಸ್ತ್ರ ಮತ್ತು ಇತರ ವಸ್ತುಗಳನ್ನು ನೇರವಾಗಿ ಉಕ್ರೇನ್‌ಗೆ (Russia-Ukraine Crisis Updates) ಕಳುಹಿಸುವುದಾಗಿ ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಜರ್ಮನಿಯ ಅಧಿಕಾರಿಗಳು, ರಷ್ಯಾಕ್ಕೆ (Russia) 'ಸ್ವಿಫ್ಟ್' ಜಾಗತಿಕ ಬ್ಯಾಂಕಿಂಗ್ ಸಿಸ್ಟಮ್ ನಿರ್ಬಂಧಗಳನ್ನು ಸಹ ಬೆಂಬಲಿಸಲು ಜರ್ಮನಿ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಉಕ್ರೇನ್‌ಗೆ ಸಹಾಯ ಮಾಡಲು ಜರ್ಮನಿ ಸಿದ್ಧ (Ukraine Russia War Latest Updates)
ಏತನ್ಮಧ್ಯೆ, ತಮ್ಮ ದೇಶವು ರಷ್ಯಾದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಲು ಸಿದ್ಧತೆ ನಡೆಸುತ್ತಿದೆ ಎಂದು ಜರ್ಮನ್ ಅಧಿಕಾರಿಗಳು ತಿಳಿಸಿದ್ದಾರೆ. ಜರ್ಮನಿ ಸಾರಿಗೆ ಸಚಿವರಾಗಿರುವ ವೋಲ್ಕರ್ ವಿಸ್ಸಿಂಗ್ ಇಂತಹ ಒಂದು ಪ್ರಸ್ತಾವನೆಗೆ ಬೆಂಬಲ ನೀಡಿದ್ದು, ಅದಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡುವಂತೆ ಆದೇಶಿಸಿದ್ದಾರೆ.

ಉಕ್ರೇನ್ ಸಹಾಯಕ್ಕೆ ಧಾವಿಸಿದ ಜರ್ಮನಿ 
ಜರ್ಮನಿಯ ಚಾನ್ಸೆಲರ್ ಕಚೇರಿಯು 1,000 ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಮತ್ತು 500 ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿಗಳನ್ನು ಉಕ್ರೇನ್‌ಗೆ "ಸಾಧ್ಯವಾದಷ್ಟು ಬೇಗ" ಕಳುಹಿಸುವುದಾಗಿ ಘೋಷಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ 'ಉಕ್ರೇನ್ ಮೇಲೆ ರಷ್ಯಾದ ದಾಳಿ ಒಂದು ಮಹತ್ವದ ತಿರುವು, ಯುದ್ಧದ ನಂತರ ವ್ಯವಸ್ಥೆಯು ಸಾಕಷ್ಟು ಅಪಾಯದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ವ್ಲಾಡಿಮಿರ್ ಪುಟಿನ್ ಸೈನ್ಯದ ವಿರುದ್ಧ ತನ್ನ ಎಲ್ಲಾ ಶಕ್ತಿಯಿಂದ ಹೋರಾಡುತ್ತಿರುವ ಉಕ್ರೇನ್‌ ಅನ್ನು ರಕ್ಷಿಸುವುದು ಮತ್ತು ಅದಕ್ಕೆ ಸಹಾಯ ಮಾಡುವುದು ನಮ್ಮ ಕರ್ತವ್ಯ' ಎಂದಿದ್ದಾರೆ.

ಇದನ್ನೂ ಓದಿ-Russia Ukraine War: ಎಲ್ಲಾ ದಿಕ್ಕುಗಳಿಂದಲೂ ಉಕ್ರೇನ್ ನ್ನು ಆಕ್ರಮಿಸಿದ ರಷ್ಯಾ ಸೈನ್ಯ...!

ಮದ್ದುಗುಂಡುಗಳನ್ನು ರವಾನಿಸಲು ಅನುಮೋದನೆ 
ಕೆಲ ಸಮಯದ ಹಿಂದೆ ಜರ್ಮನಿಯ ಆರ್ಥಿಕ ಮತ್ತು ಹವಾಮಾನ ಸಚಿವಾಲಯವು ಜರ್ಮನಿಯ 400 ಜರ್ಮನ್ ನಿರ್ಮಿತ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ಕಳುಹಿಸಲು ನೆದರ್‌ಲ್ಯಾಂಡ್‌ಗೆ ಅನುಮತಿ ನೀಡುತ್ತಿದೆ ಎಂದು ಹೇಳಿತ್ತು. ಇಂತಹ ಸಂದರ್ಭದಲ್ಲಿ ಅನುಮೋದನೆ ದೊರೆತಿರುವುದು ಭಾರಿ ಮಹತ್ವ ಪಡೆದುಕೊಂಡಿದೆ. ಎಸ್ಟೋನಿಯಾದಿಂದ ಒಂಬತ್ತು ಡಿ-30 ಹೊವಿಟ್ಜರ್‌ಗಳು ಮತ್ತು ಮದ್ದುಗುಂಡುಗಳನ್ನು ಕಳುಹಿಸಲು ಸರ್ಕಾರವು ಅನುಮೋದನೆ ನೀಡಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-Ukraine Russia War: ವಿಶ್ವಸಂಸ್ಥೆಯಲ್ಲಿ ಭಾರತದ ನಡೆಯನ್ನು ಶ್ಲಾಘಿಸಿದ ರಷ್ಯಾ

ಜರ್ಮನಿಯ ಈ ನಡೆ ಅಸಾಮಾನ್ಯವಾದುದು ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಯುದ್ಧ ವಲಯಗಳಲ್ಲಿ ಮಾರಕ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡದಿರುವ ನೀತಿಯನ್ನು ಜರ್ಮನಿ ಹೊಂದಿದೆ. ಇತ್ತೀಚೆಗಷ್ಟೇ ಶುಕ್ರವಾರ ಜರ್ಮನ ಸರ್ಕಾರದ ಅಧಿಕಾರಿಗಳು ತಾವು ಈ ನೀತಿ ಪಾಲಿಸುವುದಾಗಿ ಹೇಳಿದ್ದರು. ಆದರೆ ಯುರೋಪಿಯನ್ ಒಕ್ಕೂಟದ (Europian Union) 27 ಸದಸ್ಯ ರಾಷ್ಟ್ರಗಳ ಭಾಗವಾಗಿರುವ ಜರ್ಮನಿಯು ಉಕ್ರೇನ್ ಗೆ ಸಹಾಯ ಮಾಡದೆ ಇರುವುದಕ್ಕಾಗಿ ಉಕ್ರೇನಿಯನ್ ಅಧಿಕಾರಿಗಳಿಂದ ಹಾಗೂ ಮಿತ್ರ ರಾಷ್ಟ್ರಗಳಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. 

ಇದನ್ನೂ ಓದಿ-Russia-Ukraine Crisis: ಉಕ್ರೇನ್ ಗೆ 350 ಮಿಲಿಯನ್ ಡಾಲರ್ ನೆರವು ನೀಡಲು ಮುಂದಾದ ಅಮೇರಿಕಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News