President Putin To Become Father To Another Child: ಉಕ್ರೇನ್ ವಿರುದ್ಧದ ಯುದ್ಧದ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತೆ ತಂದೆಯಾಗಲಿದ್ದಾರೆ ಎಂದು ವರದ್ಯಾಗಿದೆ. ಅವರು ತಮ್ಮ ಜಿಮ್ನಾಸ್ಟ್ ಪ್ರೇಮಿಯೊಂದಿಗೆ ಮತ್ತೊಂದು ಮಗುವಿಗೆ ತಂದೆಯಾಗಲು ಸಿದ್ಧರಾಗಿದ್ದಾರೆ ಎಂದು ಮಾಧ್ಯಮ ವರದಿ ಮಾಡಿವೆ. ಈ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ ಎನ್ನಲಾಗಿದೆ. ಇದೀಗ 69 ವರ್ಷದ ಪುಟಿನ್ ಅವರ ಗೆಳತಿ ಇದೀಗ ಹೆಣ್ಣು ಜನ್ಮ ನೀಡಲಿದ್ದಾರೆ ಎಂಬ ವದಂತಿ ಹಬ್ಬಿದೆ.


COMMERCIAL BREAK
SCROLL TO CONTINUE READING

ಕಬೇವಾ ಮೂರನೇ ಬಾರಿಗೆ ಗರ್ಭಿಣಿಯಾಗಿದ್ದಾಳೆ
'ಡೈಲಿ ಸ್ಟಾರ್' ವರದಿ ಪ್ರಕಾರ, ಅಧ್ಯಕ್ಷ ಪುಟಿನ್ ಅವರ ಗೆಳತಿ ಅಲೀನಾ ಕಬೇವಾ ಮೂರನೇ ಬಾರಿಗೆ ಗರ್ಭಿಣಿಯಾಗಿದ್ದಾರೆ. ಈ ಜೋಡಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ ಎಂಬ ವದಂತಿ ಇದ್ದು, ಇದೀಗ ಉಭಾಯರು ತಮ್ಮ ಕುಟುಂಬಕ್ಕೆ ಹೆಣ್ಣು ಮಗುವನ್ನು ಸೇರಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.


ಮಗಳಿಗೆ ಜನ್ಮ ನೀಡಲಿರುವ ಅಲೀನಾ
ತನ್ನ ಗೆಳತಿ ಮತ್ತೊಮ್ಮೆ ಗರ್ಭಿಣಿಯಾಗಿದ್ದಾಳೆ ಮತ್ತು ತಾವು ಹೆಣ್ಣು ಮಗುವಿಗೆ ತಂದೆಯಾಗುತ್ತಿರುವ ಮಾಹಿತಿ ಪುಟಿನ್ ಅವರಿಗೆ ಸಂತಸ ನೀಡಿಲ್ಲ ಎಂದು ಹೇಳಲಾಗುತ್ತಿದೆ. ತಾವು ಈಗಾಗಲೇ ಹಲವು ಮಕ್ಕಳು ಮತ್ತು ಹೆಣ್ಣು ಮಕ್ಕಳಿಗೆ ತಂದೆಯಾಗಿರುವುದಾಗಿ ಪುಟಿನ್ ಹೇಳುತ್ತಾರೆ. ಅಲೀನಾ ಕಬೇವಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಜಿಮ್ನಾಸ್ಟ್ ಆಗಿದ್ದಾಳೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ಓದಿ-Viral Video: ಏಕಾಏಕಿ ನಡುರಸ್ತೆಯಲ್ಲಿಯೇ ಇಳಿಯಲು ಆರಂಭಿಸಿದ ವಿಮಾನ, ಗಾಬರಿಗೊಂಡ ಜನ!


ಈಗಾಗಲೇ ಇಬ್ಬರಿಗೂ ಮಕ್ಕಳಿದ್ದಾರೆ
ಕಬೇವಾ ರಷ್ಯಾದ ಅಧ್ಯಕ್ಷರ ಕುಟುಂಬದ ಸದಸ್ಯೆ ಎಂದು ಹೇಳಲಾಗುತಿದೆ, ಆದರೆ ಇಬ್ಬರೂ ತಮ್ಮ ಸಂಬಂಧವನ್ನು ಇದುವರೆಗೆ ರಹಸ್ಯವಾಗಿಟ್ಟಿದ್ದಾರೆ ಎನ್ನಲಾಗಿದೆ. ಮಾಸ್ಕೋದಲ್ಲಿ ಇಬ್ಬರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ನಂತರ ಕಬೇವಾ 2015 ರಲ್ಲಿ ಸ್ವಿಟ್ಜರ್ಲೆಂಡ್‌ನ ವಿಐಪಿ ಕ್ಲಿನಿಕ್‌ನಲ್ಲಿ ಮಗನಿಗೆ ಜನ್ಮ ನೀಡಿದ್ದಳು ಎಂಬ ವರದಿಗಳಿವೆ.


ಇದನ್ನೂ ಓದಿ-ಭಾರತ ಸೇರಿ 4 ರಾಷ್ಟ್ರಗಳ ರಾಯಭಾರಿಗಳನ್ನು ವಜಾಗೊಳಿಸಿದ ಉಕ್ರೇನ್ ಅಧ್ಯಕ್ಷ


ತನಗೆ ಎಷ್ಟು ಮಕ್ಕಳಿದ್ದಾರೆ ಎಂಬುದು ಪುಟಿನ್ ಇದುವರೆಗೆ ಹೇಳಿಲ್ಲ
ಪುಟಿನ್ ಅವರು ಎಷ್ಟು ಮಕ್ಕಳನ್ನು ಹೊಂದಿದ್ದಾರೆಂದು ಸಾರ್ವಜನಿಕವಾಗಿ ದೃಢಪಡಿಸದಿದ್ದರೂ, ಮಾಜಿ ಪತ್ನಿ ಲ್ಯುಡ್ಮಿಲಾ ಒಚೆರೆಟ್ನಾಯಾ ಅವರ ಹೆಣ್ಣುಮಕ್ಕಳು ಸಾಕಷ್ಟು ಉನ್ನತ ಪ್ರೊಫೈಲ್ ಹೊಂದಿದ್ದಾರೆ. 37 ವರ್ಷದ ಬಿಸಿನೆಸ್ ವೊಮೆನ್ ಮಾರಿಯಾ ವೊರೊಂಟ್ಸೊವಾ ಮತ್ತು 35 ವರ್ಷದ ನರ್ತಕಿ ಕಟೆರಿನಾ ಟಿಖೋನೊವಾ ಇವರಲ್ಲಿ ಶಾಮೀಲಾಗಿದ್ದಾರೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.