Viral Video: ಏಕಾಏಕಿ ನಡುರಸ್ತೆಯಲ್ಲಿಯೇ ಇಳಿಯಲು ಆರಂಭಿಸಿದ ವಿಮಾನ, ಗಾಬರಿಗೊಂಡ ಜನ!

ಎಮರ್ಜೆನ್ಸಿ ಲ್ಯಾಂಡಿಂಗ್ ಸಮಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದ್ರೂ ಅನೇಕ ಜನರ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ವಿಮಾನವೊಂದು ಹೆದ್ದಾರಿಯಲ್ಲಿ ಹಠಾತ್ ಲ್ಯಾಂಡಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.    

Written by - Puttaraj K Alur | Last Updated : Jul 10, 2022, 09:12 PM IST
  • ಏಕಾಏಕಿ ನಡುರಸ್ತೆಯಲ್ಲಿಯೇ ಇಳಿಯಲು ಪ್ರಾರಂಭಿಸಿದ ವಿಮಾನ
  • ವಿಮಾನದ ರೆಕ್ಕೆಯ ಕ್ಯಾಮೆರಾದಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ
  • ಪೈಲಟ್ ಸಮಯಪ್ರಜ್ಞೆಯಿಂದ ಉಳಿಯಿತು ಹಲವರ ಜೀವ
Viral Video: ಏಕಾಏಕಿ ನಡುರಸ್ತೆಯಲ್ಲಿಯೇ ಇಳಿಯಲು ಆರಂಭಿಸಿದ ವಿಮಾನ, ಗಾಬರಿಗೊಂಡ ಜನ!    title=
ವಿಮಾನದ ಎಮರ್ಜೆನ್ಸಿ ಲ್ಯಾಂಡಿಂಗ್ ವಿಡಿಯೋ

ನವದೆಹಲಿ: ಅಮೆರಿಕದ ಪೊಲೀಸರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಆಘಾತಕಾರಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರು ವಿಮಾನದ ಪೈಲಟ್ ಅನ್ನು ಶ್ಲಾಘಿಸುತ್ತಿದ್ದಾರೆ. ವರದಿಯ ಪ್ರಕಾರ ಆಗಸದಲ್ಲಿ ಹಾರಾಡುತ್ತಿದ್ದ ವಿಮಾನವೊಂದು ಏಕಾಏಕಿ ನಡುರಸ್ತೆಯಲ್ಲಿಯೇ ಇಳಿಯಲು ಆರಂಭಿಸುತ್ತದೆ. ಇದನ್ನು ಕಂಡ ಜನರು ಹೌಹಾರಿ ಹೋಗಿದ್ದಾರೆ.  

ಹೌದು, ಅಮೆರಿಕದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ವಿಡಿಯೋದಲ್ಲಿ ಕಂಡುಬಂದಿರುವ ವಿಮಾನವು ಸಿಂಗಲ್ ಎಂಜಿನ್ ಹೊಂದಿದೆ. ಇದನ್ನು ಚಲಾಯಿಸುತ್ತಿದ್ದ ಪೈಲಟ್‌ನ ಹೆಸರು ವಿನ್ಸೆಂಟ್ ಫ್ರೇಸರ್ ಎಂದು ಹೇಳಲಾಗಿದೆ. ಈ ಆಘಾತಕಾರಿ ಘಟನೆಯ ದೃಶ್ಯವು ವಿಮಾನದ ರೆಕ್ಕೆಯಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದವರೆಲ್ಲ ಶಾಕ್ ಆಗಿದ್ದಾರೆ.  

ಇದನ್ನೂ ಓದಿ: ವೈದ್ಯಲೋಕಕ್ಕೆ ಅಚ್ಚರಿ: ಅರಿವಿಲ್ಲದೇ 20 ವರ್ಷ ಮುಟ್ಟಿನ ನೋವು ಅನುಭವಿಸಿದ ಪುರುಷ!

ಆಗಿದ್ದೇನು..?

ಈ ಸಿಂಗಲ್ ಇಂಜಿನ್ ವಿಮಾನವನ್ನು ಪೈಲಟ್ ಓಡಿಸುತ್ತಿದ್ದ. ಪೈಲಟ್ ತಮ್ಮ ಮಾವನ ಜೊತೆಗೆ ವಿಮಾನವನ್ನು ಓಡಿಸುತ್ತಿದ್ದರು. ವಿಮಾನದ ಇಂಜಿನ್ ಇದ್ದಕ್ಕಿದ್ದಂತೆ ಕೆಲಸ ನಿಲ್ಲಿಸಿದಾಗ ಇಬ್ಬರು ಗಾಬರಿಗೊಂಡಿದ್ದರು. ಈ ಬಗ್ಗೆ ಪೈಲಟ್ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದಾಗ, ಅವರು ರಸ್ತೆಯಲ್ಲಿಯೇ ಇಳಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಪೈಲಟ್ ಮುಂದೇನು ಮಾಡಬೇಕೆಂದು ಗೊತ್ತಾಗದೆ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ದಾನೆ.

ವಿಮಾನ ಕಂಡು ಭಯಭೀತರಾದ ಜನ!

ಪೈಲಟ್ ತುರ್ತು ಲ್ಯಾಂಡಿಂಗ್ ಮಾಡಲು ನಿರ್ಧರಿಸಿ ವಿಮಾನವನ್ನು ಹೆದ್ದಾರಿಯ ಕಡೆಗೆ ತಿರುಗಿಸಿದ್ದರು. ವಿಮಾನವು ಹೆದ್ದಾರಿಯ ಕಡೆಗೆ ಹೇಗೆ ಬರುತ್ತಿದೆ ಎಂಬುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ವಿಮಾನ ತುರ್ತು ಭೂಸ್ಪರ್ಶ ಮಾಡುತ್ತಿದೆ ಅನ್ನೋದು ತಿಳಿದಿರಲಿಲ್ಲ.  ವಿಮಾನವು ರಸ್ತೆ ಸಮೀಪಿಸುತ್ತಿದ್ದಂತೆ ಜನರು ಹೌಹಾರಿ ಹೋಗಿದ್ದಾರೆ. ಆದರೆ ಪೈಲಟ್ ಸಮಯಪ್ರಜ್ಞೆಯಿಂದ ವಿಮಾನದ ಲ್ಯಾಂಡಿಂಗ್‌ನಲ್ಲಿ ಯಾವುದೇ ತೊಂದರೆಯಾಗಲಿಲ್ಲ.

ಇದನ್ನೂ ಓದಿ: Viral News: ಮೋಜು-ಮಸ್ತಿಯ ತಾಣವಾದ ಶ್ರೀಲಂಕಾ ಅಧ್ಯಕ್ಷರ ನಿವಾಸ..!

ವೀಡಿಯೊ ವೈರಲ್ ಆಗಿದೆ

ಪೈಲಟ್‍ಗೆ ವಿಮಾನವನ್ನು ಲ್ಯಾಂಡ್ ಮಾಡುವ ಕಾರ್ಯವು ತುಂಬಾ ಕಷ್ಟಕರವಾಗಿತ್ತು. ಆದರೆ ಎಲ್ಲಾ ಒತ್ತಡಗಳನ್ನು ಸರಿಯಾಗಿ ನಿಭಾಯಿಸಿ ಸಮಯಪ್ರಜ್ಞೆ ಮೆರೆದ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಇಂಟರ್ನೆಟ್‍ನಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News