Chinese Vaccine- ಚೀನಾಕ್ಕೆ ದೊಡ್ಡ ಹೊಡೆತ ನೀಡಿದ ಸೌದಿ ಅರೇಬಿಯಾ, ಪಾಕಿಸ್ತಾನಕ್ಕೆ ಟೆನ್ಶನ್
ಸೌದಿ ಅರೇಬಿಯಾದ ಈ ನಿರ್ಧಾರದಿಂದ ಪಾಕಿಸ್ತಾನ ಉದ್ವಿಗ್ನತೆಗೆ ಒಳಗಾಗಿದೆ ಮತ್ತು ಶೇಖ್ ರಶೀದ್ ಅವರ ಪತ್ರಿಕಾಗೋಷ್ಠಿಯಲ್ಲಿ ಈ ಉದ್ವಿಗ್ನತೆ ಸ್ಪಷ್ಟವಾಗಿ ಗೋಚರಿಸಿದೆ.
ಇಸ್ಲಾಮಾಬಾದ್: ಚೀನಾದ ಲಸಿಕೆ (Chinese Vaccine) ಬಗ್ಗೆ ಪಾಕಿಸ್ತಾನದ ಸಮಸ್ಯೆಗಳು ಕಡಿಮೆಯಾಗುವಂತೆ ಕಾಣುತ್ತಿಲ್ಲ. ಚೀನಾದ ಕರೋನಾ ಲಸಿಕೆ ಪಡೆದವರಿಗೆ ಇದೀಗ ಸೌದಿ ಅರೇಬಿಯಾ ಕೂಡ ಪ್ರವೇಶವನ್ನು ನಿಷೇಧಿಸಿದೆ. ಚೀನಾದ ಲಸಿಕೆಗಳಾದ ಸಿನೋಫಾರ್ಮ್ ಮತ್ತು ಸಿನೋವಾಕ್ (Sinopharm and Sinovac) ಅನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಗುರುತಿಸಿದ್ದರೂ, ಸೌದಿ ಅರೇಬಿಯಾ (Saudi Arabia) ಸೇರಿದಂತೆ ಹಲವು ದೇಶಗಳು ಈ ಲಸಿಕೆಗಳ ಬಗ್ಗೆ ವಿಶ್ವಾಸ ಹೊಂದಿಲ್ಲ. ಅದಕ್ಕಾಗಿಯೇ ಅವರು ಚೀನಾದ ಲಸಿಕೆ ಪಡೆದ ಜನರ ಪ್ರವೇಶವನ್ನು ನಿಷೇಧಿಸಿದ್ದಾರೆ. ಆದರೆ ಸೌದಿ ಅರೇಬಿಯಾದ ಈ ನಿರ್ಧಾರದಿಂದ ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿದೆ.
ವಾಸ್ತವವಾಗಿ, ಪಾಕಿಸ್ತಾನದ ಹೆಚ್ಚಿನ ಸಂಖ್ಯೆಯ ಜನರು ಸೌದಿ ಅರೇಬಿಯಾದಲ್ಲಿ (Saudi Arabia) ಕೆಲಸ ಮಾಡುತ್ತಾರೆ. ಆದ್ದರಿಂದ ಸೌದಿ ಸರ್ಕಾರದ ಈ ನಿರ್ಧಾರವು ಪಾಕಿಸ್ತಾನದ ನಿದ್ದೆಗೆಡಿಸಿದೆ. ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ (Sheikh Rashid) ಇತ್ತೀಚೆಗೆ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರೇ ಈ ವಿಷಯವನ್ನು ವೈಯಕ್ತಿಕವಾಗಿ ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಏಕೆಂದರೆ ಸೌದಿ ಅರೇಬಿಯಾದ ಇತರ ಕೆಲವು ಮಧ್ಯಪ್ರಾಚ್ಯ ರಾಷ್ಟ್ರಗಳು ಚೀನಾದ ಲಸಿಕೆಯನ್ನು (Chinese Vaccine) ಪರೀಕ್ಷಿಸುತ್ತಿವೆ. ಅದೇ ಸಮಯದಲ್ಲಿ, ಡಾನ್ ವರದಿಯ ಪ್ರಕಾರ, ಸೌದಿ ಅರೇಬಿಯಾದಲ್ಲಿ ಶಿಫಾರಸು ಮಾಡಲಾದ ಲಸಿಕೆಗಳಲ್ಲಿ ಫಿಜರ್, ಅಸ್ಟ್ರಾಜೆನಿಕಾ, ಮಾಡರ್ನಾ ಮತ್ತು ಜಾನ್ಸನ್ ಮತ್ತು ಜಾನ್ಸನ್ ಸೇರಿವೆ.
ಇದನ್ನೂ ಓದಿ - GDP Growth Rate 2021: 2021ರಲ್ಲಿ ಶೇ.8.3 ಹಾಗೂ 2022 ರಲ್ಲಿ ಶೇ.7.5 ರಷ್ಟು ಇರಲಿದೆ ಭಾರತದ GDP ಗ್ರೋಥ್ ರೇಟ್-World Bank
ಲಸಿಕೆಗಾಗಿ ಚೀನಾವನ್ನು ಹೊಗಳಿದ ಪಾಕ್ ಸಚಿವ:
ಸೌದಿ ಅರೇಬಿಯಾದ (Saudi Arabia) ಈ ನಿರ್ಧಾರದಿಂದ ಪಾಕಿಸ್ತಾನವು ಉದ್ವಿಗ್ನತೆಗೆ ಒಳಗಾಗಿದೆ ಎಂಬುದು ಶೇಖ್ ರಶೀದ್ ಅವರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಆದರೆ, ಸಿನೊಫಾರ್ಮ್ ಉತ್ತಮ ಲಸಿಕೆ ಮತ್ತು ಈ ವಿಷಯದಲ್ಲಿ ಚೀನಾ ಸಹಕಾರ ನೀಡಿದ್ದಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ ಎಂದವರು ತಿಳಿಸಿದ್ದಾರೆ. ವಿಶೇಷವೆಂದರೆ, ಬೀಜಿಂಗ್‌ನ ಬಯೋ-ಇನ್‌ಸ್ಟಿಟ್ಯೂಟ್ ಆಫ್ ಬಯೋಲಾಜಿಕಲ್ ಪ್ರಾಡಕ್ಟ್ಸ್ ಕಂ, ಲಿಮಿಟೆಡ್ ಸಿದ್ಧಪಡಿಸಿದ ಸಿನೊಫಾರ್ಮ್ ಕೋವಿಡ್ -19 ಲಸಿಕೆಯನ್ನು (Covid-19 Vaccine) ತುರ್ತು ಬಳಕೆಗಾಗಿ ಡಬ್ಲ್ಯುಎಚ್‌ಒ ಅನುಮೋದಿಸಿದೆ.
ಇದನ್ನೂ ಓದಿ - Corona Vaccine: ಲಸಿಕೆ ಪ್ರಮಾಣಪತ್ರದಲ್ಲಿ ಹೆಸರು, ಜನ್ಮ ದಿನಾಂಕ, ಲಿಂಗ ತಪ್ಪಿದ್ದರೆ ಅದನ್ನು ಈ ರೀತಿ ಸರಿಪಡಿಸಿ
ಫಿಜರ್‌ನಲ್ಲಿ ವಿಶ್ವಾಸ:
ಚೀನಾದ ಲಸಿಕೆ ಬಗ್ಗೆ ಅನೇಕ ದೇಶಗಳು ಕಳವಳ ವ್ಯಕ್ತಪಡಿಸಿದ್ದ ಹಿನ್ನಲೆಯಲ್ಲಿ ಈ ಹಿಂದೆ, ಸೌದಿ ಅರೇಬಿಯಾದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಕೆಲಸದ ವೀಸಾದಲ್ಲಿ ಹೊರಗೆ ಕೆಲಸ ಮಾಡುತ್ತಿರುವವರು ಅಥವಾ ಅಧ್ಯಯನಕ್ಕಾಗಿ ಅಥವಾ ಹಜ್‌ಗಾಗಿ ಅಲ್ಲಿಗೆ ಹೋಗಲು ಬಯಸುವವರಿಗೆ ಫಿಜರ್ ಲಸಿಕೆ ನೀಡಲಾಗುವುದು ಎಂದು ಪಾಕಿಸ್ತಾನದಿಂದ ಹೇಳಲಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.