Corona Vaccine: ಲಸಿಕೆ ಪ್ರಮಾಣಪತ್ರದಲ್ಲಿ ಹೆಸರು, ಜನ್ಮ ದಿನಾಂಕ, ಲಿಂಗ ತಪ್ಪಿದ್ದರೆ ಅದನ್ನು ಈ ರೀತಿ ಸರಿಪಡಿಸಿ

ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ಸಮಯದಲ್ಲಿ, ಯಾರಾದರೂ ತಪ್ಪಾಗಿ ಅವನ / ಅವಳ ಹೆಸರು, ಹುಟ್ಟಿದ ದಿನಾಂಕ ಅಥವಾ ಲಿಂಗವನ್ನು ತಪ್ಪಾಗಿ ನಮೂದಿಸಿದ್ದರೆ ಮತ್ತು ಇದು ಲಸಿಕೆ ಪ್ರಮಾಣಪತ್ರದಲ್ಲಿಯೂ ತಪ್ಪಾಗಿಯೇ ತೋರಿಸುತ್ತದೆ. ಆದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಈಗ ಅದನ್ನು ಕೋವಿನ್ ಪೋರ್ಟಲ್‌ನಲ್ಲಿ (cowin.gov.in) ಸುಲಭವಾಗಿ ಸರಿಪಡಿಸಬಹುದು.

Written by - Yashaswini V | Last Updated : Jun 9, 2021, 07:45 AM IST
  • ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ಸಮಯದಲ್ಲಿ ನಿಮ್ಮ ಮಾಹಿತಿಯನ್ನು ತಪ್ಪಾಗಿ ನಮೂದಿಸಿದ್ದರೆ ಅದನ್ನು ಸರಿಪಡಿಸಬಹುದು
  • ನೀವು ಲಸಿಕೆ ಪಡೆದಿದ್ದು ಮತ್ತು ಲಸಿಕೆ ಪ್ರಮಾಣಪತ್ರದಲ್ಲಿ ಯಾವುದೇ ಮಾಹಿತಿ ತಪ್ಪಾಗಿದ್ದರೂ ನೀವು ಅದನ್ನು ಸರಿಪಡಿಸಬಹುದು
  • ನೀವು ಇದನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ತಿಳಿಯಿರಿ
Corona Vaccine: ಲಸಿಕೆ ಪ್ರಮಾಣಪತ್ರದಲ್ಲಿ ಹೆಸರು, ಜನ್ಮ ದಿನಾಂಕ, ಲಿಂಗ ತಪ್ಪಿದ್ದರೆ ಅದನ್ನು ಈ ರೀತಿ ಸರಿಪಡಿಸಿ title=
ಕರೋನಾ ಲಸಿಕೆ ಪ್ರಮಾಣಪತ್ರದಲ್ಲಿ ನೀಡಲಾದ ವೈಯಕ್ತಿಕ ಮಾಹಿತಿ ತಪ್ಪಿದೆಯೇ? ಅದನ್ನು ಈ ರೀತಿ ಸರಿಪಡಿಸಿ

ನವದೆಹಲಿ: ಕೊರೊನಾವೈರಸ್ ವಿರುದ್ಧದ ಯುದ್ಧದಲ್ಲಿ ಹೋರಾಡುವ ನಿಟ್ಟಿನಲ್ಲಿ ದೇಶಾದ್ಯಂತ ಶೀಘ್ರವಾಗಿ ಲಸಿಕೆ ಹಾಕಲಾಗುತ್ತಿದೆ. ಇದಕ್ಕಾಗಿ, ಜನರು ಕೋವಿನ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ, ಆದರೆ ಈ ಮಧ್ಯೆ ಅನೇಕ ಜನರು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ನೋಂದಣಿ ಸಮಯದಲ್ಲಿ ಅವರು ತಮ್ಮ ವಿವರಗಳನ್ನು ತಪ್ಪಾಗಿ ನಮೂದಿಸಿರುವುದಾಗಿ ದೂರಿದ್ದಾರೆ. ಈ ಕಾರಣದಿಂದಾಗಿ, ಲಸಿಕೆ ಪ್ರಮಾಣಪತ್ರದಲ್ಲಿ ಹೆಸರು, ಜನ್ಮ ದಿನಾಂಕ, ಲಿಂಗಕ್ಕೆ ಸಂಬಂಧಿಸಿದ ವಿವರಗಳು ತಪ್ಪಾಗಿವೆ ಎಂದು ಹೇಳಲಾಗುತ್ತಿದೆ. ನೀವೂ ಕೂಡ ಈ ತಪ್ಪನ್ನು ಮಾಡಿದ್ದರೆ ಚಿಂತಿಸುವ ಅಗತ್ಯವಿಲ್ಲ. ಕೋವಿನ್ ಪೋರ್ಟಲ್ (cowin.gov.in) ನಲ್ಲಿ ಅದನ್ನು ಹೇಗೆ ಸರಿಪಡಿಸಬಹುದು ಎಂದು ನಾವು ನಿಮಗೆ ತಿಳಿಸುತ್ತೇವೆ.

ಕೋವಿನ್ ಪೋರ್ಟಲ್‌ನಲ್ಲಿ ಹೆಸರು, ಜನ್ಮ ದಿನಾಂಕ ಮತ್ತು ಲಿಂಗವನ್ನು ಸರಿಪಡಿಸಬಹುದು:
ಕರೋನಾ ಲಸಿಕೆ (Corona Vaccine) ಪಡೆಯಲು ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ಸಮಯದಲ್ಲಿ, ಯಾರಾದರೂ ಅವನ / ಅವಳ ಹೆಸರು, ಹುಟ್ಟಿದ ದಿನಾಂಕ ಅಥವಾ ಲಿಂಗವನ್ನು ತಪ್ಪಾಗಿ ನಮೂದಿಸಿದ್ದರೆ, ಇದು ಲಸಿಕೆ ಪ್ರಮಾಣಪತ್ರದಲ್ಲಿಯೂ ತಪ್ಪಾಗಿಯೇ ಮುದ್ರಿತವಾಗುತ್ತದೆ. ಆದರೆ ಈಗ ಇದನ್ನು COWIN ನಲ್ಲಿ ಸರಿ ಮಾಡಬಹುದು. ನೀವು  ಕೋವಿನ್ ಪೋರ್ಟಲ್‌ಗೆ (cowin.gov.in) ಭೇಟಿ ನೀಡಿ, ಇದರ ನಂತರ ಸರಿಯಾದ ಹೆಸರು, ಹುಟ್ಟಿದ ದಿನಾಂಕ ಮತ್ತು ಲಿಂಗವನ್ನು ಸರಿಯಾಗಿ ಭರ್ತಿ ಮಾಡಿ. ಬಳಿಕ ಲಸಿಕೆ ಪ್ರಮಾಣಪತ್ರದಲ್ಲಿಯೂ ನಿಮ್ಮ ವೈಯಕ್ತಿಕ ಮಾಹಿತಿ ಸರಿಯಾಗಿ ಕಾಣಿಸುತ್ತದೆ. ಆದಾಗ್ಯೂ, ವಿವರಗಳನ್ನು ಒಮ್ಮೆ ಮಾತ್ರ ನವೀಕರಿಸಬಹುದು ಎಂಬುದನ್ನು ನೆನಪಿನಲ್ಲಿಡಿ.

ಇದನ್ನೂ ಓದಿ - Covaxin, Covishield ಇವೆರಡರಲ್ಲಿ ಯಾವ ಲಸಿಕೆ ಹೆಚ್ಚು ಪರಿಣಾಮಕಾರಿ? ಸಂಶೋಧನೆ ಹೇಳಿದ್ದೇನು?

ಲಸಿಕೆ ಪಡೆದ ನಂತರ, ತಪ್ಪನ್ನು ಸರಿಪಡಿಸಬಹುದು:
ನೀವು ಲಸಿಕೆ ಪಡೆದಿದ್ದರೆ ಮತ್ತು ಲಸಿಕೆ ಪ್ರಮಾಣಪತ್ರದಲ್ಲಿ ಯಾವುದೇ ತಪ್ಪು ಇದ್ದರೆ, ನೀವು ಅದನ್ನು ಕೋವಿನ್ (CoWIN) ಪೋರ್ಟಲ್‌ನಲ್ಲಿ (cowin.gov.in) ಸರಿಪಡಿಸಬಹುದು. ಪೋರ್ಟಲ್‌ನಲ್ಲಿ ನೋಂದಣಿ ಸಮಯದಲ್ಲಿ ಮಾಡಿದ ತಪ್ಪನ್ನು ಸರಿಪಡಿಸಿ ಮತ್ತು ನೀವು ಮತ್ತೆ ಹೊಸ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದು.

ತಪ್ಪನ್ನು ಹೇಗೆ ಸರಿಪಡಿಸಬಹುದು?
ನೀವು ಕೋವಿನ್ ಪೋರ್ಟಲ್ (cowin.gov.in) ಗೆ ಹೋಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ಲಾಗ್ ಇನ್ ಆಗಬೇಕು. ಲಾಗ್ ಇನ್ ಮಾಡಿದ ನಂತರ, ಖಾತೆಯ ವಿವರಗಳ ಕೆಳಗೆ Raise an Issue ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಸದಸ್ಯರ ಹೆಸರನ್ನು ಆಯ್ಕೆ ಮಾಡಿದ ನಂತರ, ಪ್ರಮಾಣಪತ್ರದಲ್ಲಿ ತಿದ್ದುಪಡಿ (Correction in Certificate) ಆಯ್ಕೆಮಾಡಿ. ಇದರ ನಂತರ, ಹೆಸರು, ಹುಟ್ಟಿದ ವರ್ಷ ಮತ್ತು ಲಿಂಗದ ಆಯ್ಕೆಯು ಕೆಳಗೆ ಬರುತ್ತದೆ, ಅಲ್ಲಿಂದ ನೀವು ಅದನ್ನು ಸರಿಪಡಿಸಬಹುದು.

ಇದನ್ನೂ ಓದಿ - ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಯ ಗರಿಷ್ಠ ಬೆಲೆ ನಿಗದಿಪಡಿಸಿದ ಕೇಂದ್ರ ಸರ್ಕಾರ

ಲಸಿಕೆ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬೇಡಿ:
ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ದೋಸ್ತ್ ಎಂಬ ಸಂಸ್ಥೆ ಸಾಮಾಜಿಕ ಮಾಧ್ಯಮಗಳಲ್ಲಿ ಲಸಿಕೆ ಪ್ರಮಾಣಪತ್ರಗಳನ್ನು ಹಂಚಿಕೊಳ್ಳದಂತೆ ಜನರಿಗೆ ಟ್ವೀಟ್ ಮಾಡುವ ಮೂಲಕ ಸಲಹೆ ನೀಡಿದೆ. ಕರೋನಾ ಲಸಿಕೆ ಪ್ರಮಾಣಪತ್ರದಲ್ಲಿ ಹೆಸರು, ವಯಸ್ಸು ಮತ್ತು ಲಿಂಗ ಮತ್ತು ಮುಂದಿನ ಡೋಸ್ ದಿನಾಂಕ ಸೇರಿದಂತೆ ಹಲವು ಮಾಹಿತಿಯನ್ನು ಒಳಗೊಂಡಿದೆ. ಈ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದು ನಿಮಗೆ ದುಬಾರಿ ಎಂದು ಸಾಬೀತಾಗಬಹುದು. ಸೈಬರ್ ವಂಚಕರು ನಿಮ್ಮನ್ನು ಮೋಸಗೊಳಿಸಲು ನಿಮ್ಮ ಮಾಹಿತಿಯನ್ನು ಬಳಸಬಹುದು. ಆದ್ದರಿಂದ, ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬೇಡಿ ಎಂದು ಸೈಬರ್ ದೋಸ್ತ್ ಟ್ವೀಟ್ ಮೂಲಕ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News