ನವದೆಹಲಿ: Chinese Hackers Target SII-Bharat Biotech -  ಭಾರತೀಯ Covid-19 ವ್ಯಾಕ್ಸಿನ್ ಅಭಿವೃದ್ಧಿಪಡಿಸಿದವರನ್ನು,  ಉತ್ಪಾದಕರನ್ನು ಹಾಗೂ ಆಡಳಿತಾಧಿಕಾರಿಗಳನ್ನು ಚೀನಾ ಹ್ಯಾಕರ್ ಗಳು ಗುರಿಯಾಗಿಸುತ್ತಿದ್ದಾರೆ. ಈ ಕುರಿತು ಸೈಬರ್ ಇಂಟೆಲಿಜೆನ್ಸ್ ಸಂಸ್ಥೆಯಾಗಿರುವ Cyfirma ಮಾಹಿತಿ ಬಹಿರಂಗಪಡಿಸಿದ್ದು,  ಭಾರತದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII), ಭಾರತ್ ಬಯೋಟೆಕ್ (BHARAT BAIOTECH), ಪತಂಜಲಿ (PATANJALI) ಮತ್ತು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಅನ್ನು ಹ್ಯಾಕರ್ಸ್ ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದೆ. ಇತ್ತೀಚೆಗಷ್ಟೇ ದೇಶಾದ್ಯಂತ ಕೊವಿಡ್ ಮಹಾ ಲಸಿಕಾಕರಣ ಕಾರ್ಯಕ್ರಮ ನಡೆಯುತ್ತಿದೆ.


COMMERCIAL BREAK
SCROLL TO CONTINUE READING

ಈ 12 ದೇಶಗಳ ಮೇಲೆ ಹ್ಯಾಕರ್ ಗಳ ಕಣ್ಣು
ಪ್ರಸ್ತುತ ಭಾರತ ತನ್ನ ಕೊವಿಡ್-19 ಲಸಿಕೆಯನ್ನು ಹಲವು ದೇಶಗಳಿಗೆ ಮಾರಾಟ ಮಾಡುತ್ತಿದೆ. ವಿಶ್ವಾದ್ಯಂತ ಮಾರಾಟ ಮಾಡಲಾಗುವ ಲಸಿಕೆಗಳ ಶೇ.60 ಕ್ಕಿಂತ ಹೆಚ್ಚು ಉತ್ಪಾದನೆ ಭಾರತದಲ್ಲಿ ನಡೆಯುತ್ತದೆ. ಭಾರತದ ಹೊರತಾಗಿ ಜಪಾನ್, ಅಮೇರಿಕಾ, ಬ್ರಿಟನ್, ಆಸ್ಟ್ರೇಲಿಯಾ, ಸ್ಪೇನ್, ಇಟಲಿ ಹಾಗೂ ಜರ್ಮನಿ ಸೇರಿದಂತೆ ಒಟ್ಟು 12 ರಾಷ್ಟ್ರಗಳ ಮೇಲೆ ಹ್ಯಾಕರ್ ಗಳು ತಮ್ಮ ಕೆಟ್ಟ ದೃಷ್ಟಿ ಬೀರಿದ್ದಾರೆ.


ಈ ಕುರಿತು ಮಾಹಿತಿ ನೀಡಿರುವ Cyfirma ಮುಖ್ಯ ಕಾರ್ಯಕಾರಿ ಅಧಿಕಾರಿ ಕುಮಾರ್ ರಿತೇಶ್,  APT10 SII ಅನ್ನು ಸಕ್ರಿಯವಾಗಿ ಗುರಿಯಾಗಿಸಿಕೊಂಡಿದೆ, SII ಪ್ರಸ್ತುತ ಹಲವಾರು ದೇಶಗಳಿಗೆ ಅಸ್ಟ್ರಾಜೆನೆಕಾ ಲಸಿಕೆಗಳನ್ನು ಉತ್ಪಾದಿಸುತ್ತಿದೆ ಮತ್ತು ಶೀಘ್ರದಲ್ಲೇ ನೊವಾಕ್ಸಾಕ್ಸ್ ಶಾಟ್ಸ್ ಗಳನ್ನೂ ಕೂಡ ಉತ್ಪಾದಿಸಲು ಆರಂಭಿಸಲಿದೆ.


ಇದನ್ನೂ ಓದಿ- ಭಾರತೀಯ ವೆಬ್‌ಸೈಟ್‌ಗಳ ಮೇಲೆ ದಾಳಿ; ಇಲ್ಲಿದೆ 5 ವರ್ಷದ ಡಾಟಾ


"ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ವಿಷಯದಲ್ಲಿ ಹ್ಯಾಕರ್ಗಳು ತಮ್ಮ ಸಾರ್ವಜನಿಕ ಸರ್ವರ್ ಗಳನ್ನು ಹಲವು ದುರ್ಬಲ ಸರ್ವರ್ ಗಳನ್ನು ಸಂಚಾಲಿಸುವ ಹಲವು ಜನರನ್ನು ಪತ್ತೆಹಚ್ಚಲಾಗಿದೆ" ಎಂದು ನಿತೇಶ್ ಹೇಳಿದ್ದಾರೆ.


ಇದನ್ನೂ ಓದಿ-ಅಪಾಯದಲ್ಲಿ ರಾಷ್ಟ್ರೀಯ ಭದ್ರತೆ! NIC ಮೇಲೆ ಸೈಬರ್ ದಾಳಿ, ಸೂಕ್ಷ್ಮ ಮಾಹಿತಿಗೆ ಹ್ಯಾಕರ್ ಗಳ ಕನ್ನ


ಈ ಕುರಿತು ಕಳೆದ ನವೆಂಬರ್ ನಲ್ಲಿ ಮಾಹಿತಿ ನೀಡಿದ್ದ ಮೈಕ್ರೋಸಾಫ್ಟ್ ಕೂಡ ಭಾರತ, ಫ್ರಾನ್ಸ್, ದಕ್ಷಿಣ ಕೊರಿಯಾ ಹಾಗೂ ಅಮೇರಿಕಾದಲ್ಲಿರುವ ಕೊವಿಡ್-19 ಲಸಿಕೆ ಉತ್ಪಾದಕ ಕಂಪನಿಗಳ ಮೇಲೆ ರಷ್ಯಾ ಹಾಗೂ ಉತ್ತರ ಕೊರಿಯಾ ಹ್ಯಾಕರ್ ಗಳನ್ನು ಪತ್ತೆಹಚ್ಚಿರುವುದಾಗಿ ಹೇಳಿತ್ತು. ಇದಲ್ಲದೆ ಉತ್ತರ ಕೊರಿಯಾದ ಹ್ಯಾಕರ್ಗಳು ಬ್ರಿಟಿಶ್ ಡ್ರಗ್ ಮೇಕರ್ ಅಸ್ಟ್ರಾಜೇನಿಕಾ ಸರ್ವರ್ ಅನ್ನು ಭೇದಿಸಿದ್ದಾರೆ(Cyber Attack) ಎಂದು ಮೈಕ್ರೋಸಾಫ್ಟ್ ಹೇಳಿತ್ತು.


ಇದನ್ನೂ ಓದಿ-Cyber Attack Alert...! Google Chrome ಹಾಗೂ Microsoft Edge ಬಳಕೆದಾರರಿಗೆ ಎಚ್ಚರಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.