ನವದೆಹಲಿ: ಮೊಬೈಲ್ ಆಪ್ ಗಳ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಕಣ್ಣ ಹಾಕುವ ಸುಮಾರು 34 ಆಪ್ ಗಳನ್ನೂ ಗೂಗಲ್ ಬ್ಯಾನ್ ಮಾಡಿದೆ. ಕಳೆದ ಎರಡು ತಿಂಗಳುಗಳ ಮಧ್ಯೆ ಒಂದು ವಿಶೇಷ ರೀತಿಯ ಮಾಲ್ ವೆಯರ್ ಡಿಟೆಕ್ಟ್ ಮಾಡಲಾಗಿದೆ. ಇವು ಗೂಗಲ್ (Google) ನ ಭದ್ರತಾ ಲೋಪಗಳ ಲಾಭ ಪಡೆದು ನಿಮ್ಮ ಬ್ಯಾಂಕ್ ಖಾತೆಯಿಂದ ಸದ್ದಿಲ್ಲದೇ ಹಣ ಲಪಟಾಯಿಸುತ್ತವೇ.
ಇದನ್ನು ಓದಿ- Google: ಮೊಬೈಲ್ Video Calling ಗಾಗಿ Noise Cancellation ವೈಶಿಷ್ಟ್ಯ ಆರಂಭ
Jocker ಮಾಲ್ವೇರ್ ನಿಂದ ಹೆಚ್ಚು ಅಪಾಯವಿದೆ
ಆಂಗ್ಲ ಮಾಧ್ಯಮ ವೆಬ್ ಸೈಟ್ indianexpress.com ಪ್ರಕಾರ ಗೂಗಲ್ ಜುಲೈ ನಿಂದ ಸೆಪ್ಟೆಂಬರ್ ಅವಧಿಯಲ್ಲಿ Joker Malware ಸೋಂಕಿಗೆ ಒಳಗಾದ ಸುಮಾರು 34 ವೆಬ್ ಸೈಟ್ ಗಳನ್ನೂ ಬ್ಯಾನ್ ಮಾಡಿದೆ. ವರದಿಗಳ ಪ್ರಕಾರ ಜೋಕರ್ ಮಾಲ್ ವೇರ್ ಒಂದು ರೀತಿಯ ಕೋಡ್ ಆಗಿದ್ದು, ಇದು ಅಂಡ್ರಾಯಿಡ್ ಫೋನ್ ಗಳನ್ನು ಗುರಿಯಾಗಿಸುತ್ತದೆ. ಕ್ಯಾಲಿಫೋರ್ನಿಯಾದ ಸೈಬರ್ ಸೆಕ್ಯೂರಿಟಿ ಕಂಪನಿ ಸ್ಕೆಲರ್ (Zscaler), ಈ ನೂತನ ಜೋಕರ್ ಮಾಲ್ವೇರ್ ಅನ್ನು ಪತ್ತೆ ಹಚ್ಚಿದೆ. ಈ ಕುರಿತು ಬಳಕೆದಾರರನ್ನು ಎಚ್ಚರಿಸಿರುವ ಕಂಪನಿ ಒಂದು ವೇಳೆ ನಿಮ್ಮ ಮೊಬೈಲ್ ನಲ್ಲಿ ಈ 34 ಆಪ್ ಗಳಲ್ಲಿ ಯಾವುದೇ ಒಂದು ಆಪ್ ಇದ್ದರೆ, ಅದನ್ನು ಕೂಡಲೇ ಅನ್ ಇನ್ಸ್ಟಾಲ್ ಮಾಡಿ ಎಂದು ಹೇಳಿದೆ.
ಇದನ್ನು ಓದಿ- Google Pay ಇನ್ಮುಂದೆ Tap To Pay ವೈಶಿಷ್ಟ್ಯವನ್ನು ಸಪೋರ್ಟ್ ಮಾಡಲಿದೆ... ಏನಿದು?
ಈ 34 ಆಪ್ ಗಳ ಪಟ್ಟಿ ಇಲ್ಲಿದೆ
All Good PDF Scanner
Mint Leaf Message-Your Private Message
Unique Keyboard – Fancy Fonts & Free Emoticons
Tangram App Lock
Direct Messenger
Private SMS
One Sentence Translator – Multifunctional Translator
Style Photo Collage
Meticulous Scanner
Desire Translate
Talent Photo Editor – Blur focus
Care Message
Part Message
Paper Doc Scanner
Blue Scanner
Hummingbird PDF Converter – Photo to PDF
All Good PDF Scanner
com.imagecompress.android
com.relax.relaxation.androidsms
com.file.recovefiles
com.training.memorygame
Push Message- Texting & SMS
Fingertip GameBox
com.contact.withme.texts
com.cheery.message.sendsms (two different instances)
com.LPlocker.lockapps
Safety AppLock
Emoji Wallpaper
com.hmvoice.friendsms
com.peason.lovinglovemessage
com.remindme.alram
Convenient Scanner 2
Separate Doc Scanner
ಇದನ್ನು ಓದಿ- ಈ Appಗಳಿಂದ ಖಾಲಿಯಾಗುತ್ತೆ ನಿಮ್ಮ Bank Account, ಇಲ್ಲಿದೆ ಪಟ್ಟಿ
ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುತ್ತಿವೆ ಈ ಆಪ್ ಗಳು
ಮಾಹಿತಿ ಪ್ರಕಾರ, ಯಾವುದೇ ಓರ್ವ ಬಳಕೆದಾರ ಯಾವುದೇ ಒಂದು ಸೇವೆಯ ಚಂದಾದಾರಿಕೆ ಹೊಂದಿದ್ದರೆ, ಆ ಆಪ್ ಮೂಲಕ joker ಮಾಲ್ವೇರ್ ಗೂಗಲ್ ನ ಭದ್ರತಾ ಲೋಪಗಳ ಲಾಭ ಪಡೆದು ನಿಮ್ಮ ಮೊಬೈಲ್ ಪ್ರವೇಶಿಸುತ್ತದೆ. ಆದರೆ, ಚಂದದಾರಿಕೆ ಮುಕ್ತಾಯದ ಬಳಿಕವೂ ಕೂಡ ನಿಮ್ಮ ಖಾತೆಯಿಂದ ಹಣ ಕಡಿತವಾಗುತ್ತಲೇ ಇರುತ್ತದೆ. ಇಲ್ಲಿ ಅಪಾಯಕಾರಿ ಸಂಗತಿ ಎಂದರೆ, ಈ ಮಾಲ್ವೇರ್ ಗಳು ನಿಮ್ಮ sms ಹಾಗೂ otp ಗಳನ್ನು ಕೂಡ ಸ್ವಯಂಚಾಲಿತವಾಗಿ ಎತ್ತಿಕೊಳ್ಳುತ್ತವೆ.