President of Pakistan : ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (PPP) ಹಿರಿಯ ನಾಯಕ ಆಸಿಫ್‌ ಅಲಿ ಜರ್ದಾರಿ ಆಯ್ಕೆಯಾಗಿದ್ದಾರೆ. 2ನೇ ಬಾರಿಗೆ ಪಾಕಿಸ್ತಾನದ ಅಧ್ಯಕ್ಷ ಚುಕ್ಕಾಣಿ ಜರ್ದಾರಿ ಪಾಲಾಗಿದೆ. 


COMMERCIAL BREAK
SCROLL TO CONTINUE READING

ಶನಿವಾರ ನಡೆದ ಅಧ್ಯಕ್ಷರ ಚುನಾವಣೆಯ ವೇಳೆ ಆಸಿಫ್‌ ಅಲಿ ಜರ್ದಾರಿ ಗೆಲುವು ಕಾಣುವ ಮೂಲಕ ಪಾಕಿಸ್ತಾನದ ಅಧ್ಯಕ್ಷರೆನಿಸಿಕೊಂಡಿದ್ದಾರೆ. ಇದರೊಂದಿಗೆ ಪಾಕಿಸ್ತಾನದ 14ನೇ ಅಧ್ಯಕ್ಷ ಎನ್ನುವ ಕೀರ್ತಿ ಅವರದಾಗಿದೆ.


ಇದನ್ನು ಓದಿ : "ಅವಕಾಶ ಕೇಳ್ಕೊಂಡು ಹೋದಾಗ ಬಟ್ಟೆ ಬಿಚ್ಚು… ಮಚ್ಚೆ ಇದ್ಯಾ? ತೋರಿಸು ಅಂತಿದ್ರು"- ಖ್ಯಾತ ನಟಿಯ ಸೆನ್ಸೇಶನಲ್ ಹೇಳಿಕೆ


ಪಿಪಿಪಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನೇತೃತ್ವದ ಸಮ್ಮಿಶ್ರ ಸರ್ಕಾರದ ಜಂಟಿ ಅಭ್ಯರ್ಥಿ ಜರ್ದಾರಿ ಅವರು 255 ಮತಗಳನ್ನು ಪಡೆದುಕೊಂಡರೆ, ಇಮ್ರಾನ್ ಖಾನ್ ಬೆಂಬಲಿತ ಸುನ್ನಿ ಇತ್ತೆಹಾದ್ ಕೌನ್ಸಿಲ್ (ಎಸ್‌ಐಸಿ) ಅಭ್ಯರ್ಥಿ ಮಹಮೂದ್ ಖಾನ್ ಅಚಕ್ಜಾಯ್ 119 ಮತಗಳನ್ನು ಪಡೆದುಕೊಂಡರು. ಪಿಪಿಪಿಯ ಹಿರಿಯ ನಾಯಕರಾಗಿರುವ ಆಸಿಫ್‌ ಅಲಿ ಜರ್ದಾರಿ, 2ನೇ ಬಾರಿಗೆ ಅಧ್ಯಕ್ಷ ಹುದ್ದೆ ವಹಿಸಿಕೊಂಡ ಹಿರಿಯ ನಾಗರೀಕ ಎನಿಸಿಕೊಂಡಿದ್ದಾರೆ. 


ಇದನ್ನು ಓದಿ : Starbucks : ಕೊಯಮತ್ತೂರಿನಲ್ಲಿ ಮೊದಲ ಸ್ಟಾರ್ ಬಕ್ಸ್ , ಇದು ಭಾರತದಲ್ಲಿ 400ನೇ ಮಳಿಗೆ 


ಕಳೆದ ವರ್ಷ ಐದು ವರ್ಷಗಳ ಅವಧಿ ಮುಗಿಸಿರುವ ಡಾ.ಆರಿಫ್ ಅಲ್ವಿ ಅವರ ಸ್ಥಾನವನ್ನು ಅವರು ವಹಿಸಿಕೊಳ್ಳಲಿದ್ದಾರೆ. ಆದರೆ, ಹೊಸ ಸರ್ಕಾರ ಸಂಪೂರ್ಣವಾಗಿ ರಚನೆಯಾಗದ ಕಾರಣ ಅವರು ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಜರ್ದಾರಿ ಅವರು ಪಾಕಿಸ್ತಾನದ ಇತಿಹಾಸದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ನಾಗರಿಕರಾಗಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.