Telugu actress Aamani on casting couch: ಇತ್ತೀಚಿನ ದಿನಗಳಲ್ಲಿ ಅನೇಕ ಸ್ಟಾರ್ ನಟಿಯರು ಕಾಸ್ಟಿಂಗ್ ಕೌಚ್ ಅನುಭವಗಳ ಬಗ್ಗೆ ಮಾತನಾಡುತ್ತಿದ್ದಾರೆ. ಸದ್ಯ ಇದೇ ವಿಚಾರವಾಗಿ ಚರ್ಚೆ ನಡೆಯುತ್ತಿದ್ದು, ಹಲವು ಸೆಲೆಬ್ರಿಟಿಗಳು ಸಂದರ್ಶನದ ವೇಳೆ ಈ ವಿಚಾರವನ್ನು ತೆರೆದಿಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ವಿದ್ಯಾಮಾನದ ಬಗ್ಗೆ ಸ್ವರಾ ಭಾಸ್ಕರ್ ಸೇರಿದಂತೆ ಬಾಲಿವುಡ್ ನಟರು ಮಾತ್ರವಲ್ಲ, ಇತರ ಭಾರತೀಯ ಚಿತ್ರರಂಗದ ನಟರೂ ತಮ್ಮ ಅನುಭವಗಳನ್ನು ಹೊರಹಾಕಿದ್ದಾರೆ.
ತೆಲುಗು ಸಿನಿರಂಗದ ಹಿರಿಯ ನಟಿ ಆಮಾನಿ ಕೂಡ ಕಾಸ್ಟಿಂಗ್ ಕೌಚ್’ನಿಂದ ತಾವು ಅನುಭವಿಸಿದ ಸಂಕಷ್ಟಗಳ ಬಗ್ಗೆ ಮಾತನಾಡಿದ್ದಾರೆ.
ಆಮಾನಿ ತೆಲುಗು ಚಿತ್ರರಂಗದ ಪ್ರಮುಖ ನಟಿ. ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ ಆಮಾನಿ ಕೂಡ ಕಾಸ್ಟಿಂಗ್ ಕೌಚ್’ಗೆ ಗುರಿಯಾಗಿದ್ದರು ಎಂದರೆ ನಂಬೋದು ಕಷ್ಟವೇ. ಆಮಾನಿ ಜಂಬ ಲಕಿಡಿ ಪಂಬಾ, ಮಿಸ್ಟರ್ ಪೆಲ್ಲಂ, ನಕ್ಷತ್ರ ಪೋರಾಟಂ, ಶುಭ ಲಗ್ನಂ, ಅಮ್ಮ ದೊಂಗ, ಶುಭ ಸಂಕಲ್ಪಂ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇಂಡಿಯಾ ಟುಡೇ ವರದಿ ಮಾಡಿರುವಂತೆ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇರುವುದನ್ನು ಅಮಾನಿ ದೃಢಪಡಿಸಿದ್ದಾರೆ.
ಸಿನಿಮಾದಲ್ಲಿ ತನ್ನ ಆರಂಭಿಕ ದಿನಗಳಲ್ಲಿ, ಹೊಸ ಪ್ರೊಡಕ್ಷನ್ ಹೌಸ್’ಗಳಿಂದ ನನಗೆ ಕರೆಗಳು ಬರುತ್ತಿದ್ದವು, ಅವರು ತಮ್ಮ ಅತಿಥಿ ಗೃಹಗಳಿಗೆ ಒಬ್ಬಂಟಿಯಾಗಿ ಬರುವಂತೆ ಹೇಳುತ್ತಿದ್ದರು. ಅವರ ಉದ್ದೇಶಗಳನ್ನು ತಕ್ಷಣವೇ ಅರ್ಥಮಾಡಿಕೊಂಡು, ಅದರಿಂದ ದೂರ ಸರಿಯುತ್ತಿದ್ದೆ ಎಂದು ನಟಿ ಹೇಳಿದರು.
ಹೊಸ ಕಂಪನಿಗಳಿಂದ ಮಾತ್ರ ಈ ರೀತಿಯ ಕರೆಗಳು ಬರುತ್ತಿದ್ದವು. ಪ್ರತಿಷ್ಠಿತ, ಅನುಭವಿ ನಿರ್ದೇಶಕರು ಮತ್ತು ನಿರ್ಮಾಣ ಸಂಸ್ಥೆಗಳು ಅಂತಹ ಚಟುವಟಿಕೆಗಳಲ್ಲಿ ಎಂದಿಗೂ ತೊಡಗಿಸಿಕೊಂಡಿಲ್ಲ ಎಂದು ಇದೇ ವೇಳೆ ನಟಿ ದೃಢಪಡಿಸಿದ್ದಾರೆ.
“ಸಿನಿಮಾ ಅವಕಾಶ ಸಿಗುತ್ತದೆ ಎಂದು ಮ್ಯಾನೇಜರ್ ಕರೆದರು ಎನ್ನುವ ಕಾರಣಕ್ಕೆ ಹೋಗುತ್ತೇವೆ. ಅಲ್ಲಿ ಟು ಪೀಸ್ ಬಟ್ಟೆ ಹಾಕಬೇಕು. ತೊಡೆ ಮೇಲೆ ಮಾರ್ಕ್ ಇದ್ಯಾ ಎಂದು ಕೇಳುತ್ತಾರೆ. ನನಗೆ ಇಲ್ಲ ಅಂದ್ರೆ, ಒಮ್ಮೆ ತೋರಿಸಿ ಎನ್ನುತ್ತಾರೆ. ಈ ರೀತಿ ಅವರು ಬೇಕು ಅಂತ ಮಾಡ್ತಾರಾ? ಇದೇ ಕೆಟ್ಟ ಉದ್ದೇಶದಿಂದ ಆಫೀಸ್’ಗೆ ಕರೆಸಿಕೊಳ್ಳುತ್ತಾರಾ? ಗೊತ್ತಿಲ್ಲ" ಎಂದು ಹೇಳಿದ್ದಾರೆ.