ಶಾಂಘೈನಲ್ಲಿ ಹೆಚ್ಚಿದ ಕೋವಿಡ್ ಸಾವಿನ ಪ್ರಕರಣ!
ಏಪ್ರಿಲ್ 18ರಂದು ಕೋವಿಡ್‌ನಿಂದ ಮೊದಲ ಸಾವು ಸಂಭವಿಸಿತ್ತು. ಸದ್ಯ ಮೃತರ ಸಂಖ್ಯೆ 10ಕ್ಕೇರಿದ್ದು, ಜನರಲ್ಲಿ ಭಯ ಮನೆಮಾಡಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ಹಣಕಾಸು ನಗರಿ ಎಂದೇ ಪ್ರಸಿದ್ಧವಾಗಿರುವ ಶಾಂಘೈನಲ್ಲಿ ಕೊರೊನಾ ಮತ್ತೆ ತಾಂಡವವಾಡುತ್ತಿದೆ. ಇಲ್ಲಿ ಕೋವಿಡ್ -19 ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಸಾವಿರಾರು ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇನ್ನು ಏಪ್ರಿಲ್ 19ರಂದು ಏಳು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಏಪ್ರಿಲ್ 18ರಂದು ಕೋವಿಡ್‌ನಿಂದ ಮೊದಲ ಸಾವು ಸಂಭವಿಸಿತ್ತು. ಸದ್ಯ ಮೃತರ ಸಂಖ್ಯೆ 10ಕ್ಕೇರಿದ್ದು, ಜನರಲ್ಲಿ ಭಯ ಮನೆ ಮಾಡಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಫುಟ್ಬಾಲ್ ಆಟಗಾರ ರೊನಾಲ್ಡೊ ಮಗು ಸಾವು!
ಶಾಂಘೈನಲ್ಲಿ ಕಠಿಣ ಕ್ರಮ:
ಕಠಿಣ ಲಾಕ್‌ಡೌನ್‌ಗಳು, ಕೊರೊನಾ ಮಾಸ್ ಟೆಸ್ಟ್ ಮತ್ತು ಸುದೀರ್ಘ ಸಂಪರ್ಕ ತಡೆ ಸೇರಿದಂತೆ ಅನೇಕ ಕಠಿಣ ಕ್ರಮಗಳಿಂದ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟುಗಳನ್ನು ತಪ್ಪಿಸಿದೆ. ಆದರೆ ಅಧಿಕ ಪ್ರಮಾಣದಲ್ಲಿ ವೃದ್ಧರು ಚೀನಾದಲ್ಲಿ ನೆಲೆಸಿರುವುದರಿಂದ ಮತ್ತು ಕಡಿಮೆ ಲಸಿಕೆ ದರ ಹೊಂದಿರುವುದರಿಂದ ಕೊರೊನಾ ಹೆಚ್ಚಾಗಿ ಹರಡುತ್ತಿದೆ ಎಂಬ ಮಾತುಗಳು ಕೇಳಿ ಬಂದಿದೆ.
ದೇಶದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಮೂರನೇ ಎರಡರಷ್ಟು ನಿವಾಸಿಗಳು ಎರಡನೇ ಡೋಸ್ ಕೋವಿಡ್ ಲಸಿಕೆಗಳನ್ನು ಸ್ವೀಕರಿಸಿದ್ದಾರೆ. ಶೇ. 40ಕ್ಕಿಂತ ಕಡಿಮೆ ಜನರು ಬೂಸ್ಟರ್ ಡೋಸ್ ಪಡೆದಿದ್ದಾರೆ ಎಂದು ಶಾಂಘೈನ ಆರೋಗ್ಯ ಅಧಿಕಾರಿಗಳು ಭಾನುವಾರ ತಿಳಿಸಿದ್ದರು.
ಇನ್ನು ಅನೇಕ ವರದಿಯಾಗದ ಸಾವು ಪ್ರಕರಣಗಳು ಇವೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯತ್ತಿದೆ. ಜನವರಿಯಲ್ಲಿ ಒಮಿಕ್ರಾನ್ ರೂಪಾಂತರವು ಹೆಚ್ಚಾದಾಗಿನಿಂದ ಕೊರೊನಾದಿಂದ ಸುಮಾರು 9,000 ಸಾವು ಸಂಭವಿಸಿವೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ: ಭೀಕರ ಅಪಘಾತ: ಆರು ಮಂದಿ ಸಾವು, ಹಲವರಿಗೆ ಗಾಯ
ಶಾಂಘೈ ನಗರದಲ್ಲಿ 20,000ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಬಹುಪಾಲು ಲಕ್ಷಣ ರಹಿತವಾಗಿವೆ. ಶಾಂಘೈನ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 25 ಸಾವಿರದ ಆಸುಪಾಸಿನಲ್ಲಿದ್ದು, 2.5 ಕೋಟಿ ನಿವಾಸಿಗಳಲ್ಲಿ ಹೆಚ್ಚಿನವರು ಮಾರ್ಚ್‌ನಿಂದ ತಮ್ಮ ಮನೆಗಳಲ್ಲೇ ಲಾಕ್ ಆಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.