ಇಂಗ್ಲೆಂಡ್: ಪ್ರಸಿದ್ಧ ಪೋರ್ಚುಗೀಸ್ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ನವಜಾತ ಅವಳಿ ಮಕ್ಕಳಲ್ಲಿ ಒಂದು ಮಗು ಮೃತಪಟ್ಟಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ರೊನಾಲ್ಡೋ ಬಹಿರಂಗಪಡಿಸಿದ್ದಾರೆ. ರೊನಾಲ್ಡೋ ಪತ್ನಿ ಜಾರ್ಜಿನಾ ರೊಡ್ರಿಗಸ್ ಮತ್ತು ತಮ್ಮ ಸಹಿ ಇರುವ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ: RR vs KKR: ಬಟ್ಲರ್ ಶತಕ, ಚಹಾಲ್ ಹ್ಯಾಟ್ರಿಕ್ ಕೈಚಳಕ, ರಾಜಸ್ಥಾನಕ್ಕೆ ಗೆಲುವಿನ ಪುಳಕ
"ನಮ್ಮ ಅವಳಿ ಮಕ್ಕಳಲ್ಲಿ ಗಂಡು ಮಗು ತೀರಿಕೊಂಡಿದೆ ಎಂದು ಹೇಳಲು ತುಂಬಾ ದುಃಖವಾಗಿದೆ. ಯಾವುದೇ ಪೋಷಕರು ಅನುಭವಿಸಬಹುದಾದ ದೊಡ್ಡ ನೋವು ಇದು'' ಎಂದು ಪೋಸ್ಟ್ ಹಾಕಿರುವ ರೊನಾಲ್ಡೋ ನೋವನ್ನು ತೋಡಿಕೊಂಡಿದ್ದಾರೆ.
— Cristiano Ronaldo (@Cristiano) April 18, 2022
ಇದನ್ನು ಓದಿ: Funny Video: ಇಂತಹ ಇಂಜೀನಿಯರ್ ಬೆಕ್ಕನ್ನು ನೀವೆಂದೂ ನೋಡಿರಲಿಕ್ಕಿಲ್ಲ,.. ವಿಡಿಯೋ ನೋಡಿ ಗೊತ್ತಾಗುತ್ತೆ!
ವರ್ಷದ ಹಿಂದೆ ರೊನಾಲ್ಡೋ ದಂಪತಿ ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದ್ದರು. ಈಗ ಅವಳಿ ಮಕ್ಕಳಲ್ಲಿ ಗಂಡು ಮಗು ಮೃತಪಟ್ಟಿದ್ದು, "ನಮ್ಮ ಹೆಣ್ಣು ಮಗುವಿನ ಜನನವು ಈ ಕ್ಷಣದಲ್ಲಿ ನಮಗೆ ಭರವಸೆ ಮತ್ತು ಸಂತೋಷದಿಂದ ಬದುಕಲು ನಮಗೆ ಶಕ್ತಿಯನ್ನು ನೀಡುತ್ತದೆ. ಈ ನಷ್ಟದಿಂದ ನಾವು ನಲುಗಿ ಹೋಗಿದ್ದೇವೆ. ಈ ಕಷ್ಟದ ಸಮಯದಲ್ಲಿ ನಾವು ಖಾಸಗಿತನವನ್ನು ಬೇಡುತ್ತೇವೆ" ಎಂದು ರೊನಾಲ್ಡೊ ಮನವಿ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.