Shinzo Abe declared dead; ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ನಿಧನ, ಅಧಿಕಾರಿಗಳಿಂದ ಘೋಷಣೆ
ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರು ಶುಕ್ರವಾರ ಬೆಳಗ್ಗೆ ಪಶ್ಚಿಮ ಜಪಾನ್‌ನ ನಾರಾ ಪ್ರಿಫೆಕ್ಚರ್‌ನಲ್ಲಿ ಭಾಷಣ ಮಾಡುವಾಗ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಬೆ ಅವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಅವರ ಎದೆಗೆ ಗುಂಡು ತಗುಲಿದೆ ಎಂದು ವರದಿಯಾಗಿದೆ.
ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರು ಶುಕ್ರವಾರ ಬೆಳಗ್ಗೆ ಪಶ್ಚಿಮ ಜಪಾನ್‌ನ ನಾರಾ ಪ್ರಿಫೆಕ್ಚರ್‌ನಲ್ಲಿ ಭಾಷಣ ಮಾಡುವಾಗ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಬೆ ಅವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಅವರ ಎದೆಗೆ ಗುಂಡು ತಗುಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Watch: ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ, ವಿಡಿಯೋ ವೈರಲ್
ಪತ್ರಿಕೆಯ ಪ್ರಕಾರ, ವ್ಯಕ್ತಿ ಅಬೆಯ ಮೇಲೆ ಹಿಂದಿನಿಂದ ದಾಳಿ ಮಾಡಿದನು. 41 ವರ್ಷದ ಯಮಗಾಮಿ ತೆತ್ಸುಯಾ ಎಂಬ ಶಂಕಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎನ್‌ಎಚ್‌ಕೆ ಪ್ರಕಾರ, 2005 ರ ಸುಮಾರಿಗೆ ಮೂರು ವರ್ಷಗಳ ಕಾಲ ಮಾರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ಗಾಗಿ ಕೆಲಸ ಮಾಡಿದ ಶಂಕಿತ ವ್ಯಕ್ತಿ, ಮಾಜಿ ಪ್ರಧಾನ ಮಂತ್ರಿ ಶಿಂಜೋ ಅಬೆ ಅವರ ಮೇಲೆ ಗುಂಡಿನ ದಾಳಿ ಮಾಡಿದ್ದು ಎಂದು ತಿಳಿದುಬಂದಿದೆ. ಮಾಜಿ ಪಿಎಂ ಅಬೆ ಅವರ ಬಗ್ಗೆ ಅಸಮಾಧಾನ ಹೊಂದಿದ್ದೆ ಮತ್ತು ಅವರನ್ನು ಕೊಲ್ಲುವ ಉದ್ದೇಶವನ್ನು ಹೊಂದಿದ್ದೆ ಎಂದು ಬಂಧಿತ ವ್ಯಕ್ತಿ ತನಿಖಾಧಿಕಾರಿಗಳ ಬಳಿ ಹೇಳಿರುವುದಾಗಿ ವರದಿಯಾಗಿದೆ.
ಭಾನುವಾರದ ಮೇಲ್ಮನೆ ಚುನಾವಣೆಗೆ ಮುನ್ನ ನಡೆದ ಕಾರ್ಯಕ್ರಮವೊಂದರಲ್ಲಿ ಅಬೆ ಭಾಷಣ ಮಾಡುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ ಎಂದು ರಾಷ್ಟ್ರೀಯ ಪ್ರಸಾರಕ ಎನ್‌ಎಚ್‌ಕೆ ಮತ್ತು ಕ್ಯೋಡೋ ಸುದ್ದಿ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ಪ್ರತಿ ದಿನ 1 ಮಿಲಿಯನ್ ಸ್ಪ್ಯಾಮ್ ಅಕೌಂಟ್‌ಗಳು ಪತ್ತೆ, ಆಘಾತಕಾರಿ ವಿಚಾರ ಬಿಚ್ಚಿಟ್ಟ Twitter
ಅಬೆ ಜಪಾನ್‌ನ ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿದ್ದರು. ಅವರು 2006 ರಲ್ಲಿ ಒಂದು ವರ್ಷ ಮತ್ತು ಮತ್ತೆ 2012 ರಿಂದ 2020 ರವರೆಗೆ ಅಧಿಕಾರದಲ್ಲಿದ್ದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.