OMG: 3 ಸಾವಿರ ಕಾರುಗಳನ್ನು ಸಾಗಿಸುತ್ತಿದ್ದ ಬೃಹತ್ ಹಡಗಿಗೆ ಬೆಂಕಿ..!
Ameland rescue: ಕೆಲವರು ಜೀವ ಉಳಿಸಿಕೊಳ್ಳಲು ಹಡಗಿನಿಂದ ಸಮುದ್ರಕ್ಕೆ ಜಿಗಿದಿದ್ದಾರೆ. ಲೈಫ್‌ಬೋಟ್‌ನ ಕ್ಯಾಪ್ಟನ್ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಸಮುದ್ರಕ್ಕೆ ಜಿಗಿದವರ ಪೈಕಿ ಕೆಲವರ ಮೂಳೆ ಮುರಿದಿವೆ.
ಹೇಗ್: ಸುಮಾರು 3,000 ಕಾರುಗಳನ್ನು ಹೊತ್ತೊಯ್ಯುತ್ತಿದ್ದ ನೆದರ್ಲೆಂಡ್ಸ್‌ನ ಹಡಗಿನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆಂದು ವರದಿಯಾಗಿದೆ. ಉತ್ತರ ಸಮುದ್ರದಲ್ಲಿ ಬುಧವಾರ 3 ಸಾವಿರ ಕಾರುಗಳನ್ನು ಹೊತ್ತು ಸಾಗುತ್ತಿದ್ದ ಸರಕು ಸಾಗಣೆಯ ಹಡಗಿನಲ್ಲಿ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದ್ದು, ಹೊತ್ತಿ ಉರಿದಿದೆ ಎಂದು ಡಚ್ ಕರಾವಳಿ ಕಾವಲು ಪಡೆ ಮಾಹಿತಿ ನೀಡಿದೆ.
ಹಡಗಿನಲ್ಲಿ ಕಾಣಿಸಿಕೊಂಡಿರುವ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ಬೆಂಕಿಯ ಕೆನ್ನಾಲಿಗೆ ಇಡೀ ಹಡಗಿಗೆ ವ್ಯಾಪಿಸುತ್ತಿದ್ದು, ಅದು ಮುಳುಗದಂತೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 23 ಸಿಬ್ಬಂದಿಯನ್ನು ಹಡಗಿನಿಂದ ಕೆಳಗಿಳಿಸಲು ದೋಣಿಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಲಾಗಿದೆ. ಅವರು ಬೆಂಕಿಯನ್ನು ನಂದಿಸಲು ವಿಫಲ ಪ್ರಯತ್ನ ಮಾಡಿದರು ಎಂದು ಕರಾವಳಿ ಸಿಬ್ಬಂದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Viral Shocking News: ಮೆದುಳು ತಿನ್ನುವ ಅಮೀಬಾಗೆ 2 ವರ್ಷದ ಮಗು ಬಲಿ!
ಕೆಲವರು ಜೀವ ಉಳಿಸಿಕೊಳ್ಳಲು ಹಡಗಿನಿಂದ ಸಮುದ್ರಕ್ಕೆ ಜಿಗಿದಿದ್ದಾರೆ. ಲೈಫ್‌ಬೋಟ್‌ನ ಕ್ಯಾಪ್ಟನ್ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಸಮುದ್ರಕ್ಕೆ ಜಿಗಿದವರ ಪೈಕಿ ಕೆಲವರ ಮೂಳೆ ಮುರಿದಿವೆ. ಕೆಲವರು ಸಣ್ಣಪುಟ್ಟ ಸುಟ್ಟ ಗಾಯಗಳೊಂದಿಗೆ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಉತ್ತರ ನೆದರ್ಲೆಂಡ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಫ್ರೆಮೆಂಟಲ್ ಹೆದ್ದಾರಿಯು ಜರ್ಮನಿಯ ಬಂದರು ಬ್ರೆಮೆನ್‌ನಿಂದ ಈಜಿಪ್ಟ್‌ನ ಪೋರ್ಟ್ ಸೈಡ್‌ಗೆ ಪ್ರಯಾಣಿಸುತ್ತಿದ್ದಾಗ ಡಚ್ ದ್ವೀಪವಾದ ಅಮೆಲ್ಯಾಂಡ್‌ನ ಉತ್ತರಕ್ಕೆ ಸುಮಾರು 27 ಕಿಲೋಮೀಟರ್ (17 ಮೈಲುಗಳು) ದೂರದಲ್ಲಿ ಹಡಗಿಗೆ ಬೆಂಕಿ ಹೊತ್ತಿಕೊಂಡಿತು. ಹಡಗಿಗೆ ಬೆಂಕಿಯ ಹೇಗೆ ಹೊತ್ತಿಕೊಂಡಿತು ಮತ್ತು ಸಿಬ್ಬಂದಿ ಹೇಗೆ ಸಾವನ್ನಪ್ಪಿದರು ಎಂಬುದು ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: Professional Girlfriend: ದಿನಕ್ಕೆ 1 ಲಕ್ಷ ಸಂಪಾದಿಸುತ್ತಾಳೆ ಈ ಸುಂದರಿ, ಏನ್ ಕೆಲಸ ಗೊತ್ತಾ?
ಹಡಗಿನಲ್ಲಿದ್ದ 3 ಸಾವಿರ ಕಾರುಗಳ ಪೈಕಿ 25 ಎಲೆಕ್ಟ್ರಿಕ್ ಕಾರುಗಳಿದ್ದವು. ಇವುಗಳಿಂದ ಏನಾದ್ರೂ ಬೆಂಕಿ ಕಾಣಿಸಿಕೊಂಡಿತಾ ಅನ್ನೋ ಪ್ರಶ್ನೆ ಮೂಡಿದೆ. ಪ್ರಸ್ತುತ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯತ್ತಿದ್ದು, ಹಡಗು ಮುಳುಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.