Professional Girlfriend: ದಿನಕ್ಕೆ 1 ಲಕ್ಷ ಸಂಪಾದಿಸುತ್ತಾಳೆ ಈ ಸುಂದರಿ, ಏನ್ ಕೆಲಸ ಗೊತ್ತಾ?

Professional Girlfriend: 30ರ ಹರೆಯದ ಈ ಸುಂದರಿ ಕಡಿಮೆ ಸಮಯದಲ್ಲಿ ದೊಡ್ಡ ಮೊತ್ತದ ಹಣ ಸಂಪಾದಿಸಿದ್ದಾಳೆ. ಈಕೆ ಹಣ ಗಳಿಸಲು ಆಯ್ದುಕೊಂಡ ಮಾರ್ಗದ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ​

ನವದೆಹಲಿ: ಪ್ರಪಂಚದಲ್ಲಿರುವ ಜನರು ಹಣ ಗಳಿಸಲು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ಕೆಲವರು ಶಾರ್ಟ್‌ಕಟ್‌ಗಳ ಮೂಲಕ ಶ್ರೀಮಂತರಾಗಲು ತಪ್ಪು ದಾರಿ ಹಿಡಿಯುತ್ತಾರೆ. ಮತ್ತೊಂದೆಡೆ ಕೆಲವರು ತಮ್ಮ ವಿಭಿನ್ನ ಆಲೋಚನೆಗಳಿಂದ ಕೋಟಿ ಕೋಟಿ ಸಂಪಾದಿಸುತ್ತಾರೆ. ಅದೇ ರೀತಿ 30ರ ಹರೆಯದ ಈ ಸುಂದರಿ ಕಡಿಮೆ ಸಮಯದಲ್ಲಿ ದೊಡ್ಡ ಮೊತ್ತದ ಹಣ ಸಂಪಾದಿಸಿದ್ದಾಳೆ. ಈಕೆ ಹಣ ಗಳಿಸಲು ಆಯ್ದುಕೊಂಡ ಮಾರ್ಗದ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ದಿನಕ್ಕೆ 1 ಲಕ್ಷ ಗಳಿಸುವ ಈ ಸುಂದರಿಯ ಕೆಲಸವನ್ನು ಕೆಲವರು ಹೊಗಳಿದ್ರೆ ಮತ್ತೆ ಕೆಲವರು ಟೀಕಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಇಂದಿನ ವಿದ್ಯಾವಂತ ಸ್ಮಾರ್ಟ್ ಮಹಿಳೆಯರು ವೃತ್ತಿಯಲ್ಲಿ ಇಂಜಿನಿಯರ್, ಡಾಕ್ಟರ್, ಟೀಚರ್, ಪೋಲೀಸ್, ಲಾಯರ್, ಸಿಎ, ಕಮ್ಯುನಿಟಿ ಹೆಲ್ಪರ್ ಮತ್ತು ಬಿಸ್ನೆಸ್ ಮ್ಯಾನ್ ಹೀಗೆ ಹಲವಾರು ವೃತ್ತಿಯಲ್ಲಿರಬಹುದು. ಆದರೆ ಅಮೆರಿಕದ ಈ ಸುಂದರಿ ‘ವೃತ್ತಿಪರ ಗೆಳತಿ’ ಅಂದರೆ Professional Girlfriend ಆಗಿ ಕೆಲಸ ಮಾಡುತ್ತಿದ್ದಾಳೆ.

2 /5

ಈ ಸೂಪರ್ ಮಾಡೆಲ್ ಮತ್ತು ಮಾಜಿ ಸ್ಟ್ರಿಪ್ಪರ್ ಪ್ರಸ್ತುತ ಚರ್ಚೆಯಲ್ಲಿದ್ದಾರೆ. ಏಕೆಂದರೆ ಈಕೆ ವಿಚಿತ್ರ ರೀತಿಯಲ್ಲಿ ಹಣವನ್ನು ಗಳಿಸುತ್ತಿದ್ದಾಳೆ. ಬಹುಕಾಲದಿಂದ ಅಡಲ್ಟ್ ಇಂಡಸ್ಟ್ರಿಯಲ್ಲಿ ದುಡಿಯುತ್ತಿರುವ ಈ ಮಹಿಳೆಯ ಗಳಿಕೆಯ ರಹಸ್ಯ ಬೀದಿ ಬೀದಿಗಳಲ್ಲಿ ಪ್ರತಿಧ್ವನಿಸುತ್ತಿವೆ.

3 /5

ಸಣ್ಣ ವಯಸ್ಸಿನಲ್ಲಿಯೇ ಶ್ರೀಮಂತೆಯಾಗಿರುವ ಈ ಮಾಡೆಲ್ ಹೆಸರು ಜೆನ್ನಾ ಮ್ಯಾಡಿಸನ್. 30 ವರ್ಷದ ಚಿಕಾಗೋ ಮೂಲದ ಈ ಮಾಡೆಲ್ ದಿನವೊಂದಕ್ಕೆ 1 ಲಕ್ಷ ರೂ.ಗಳನ್ನು ಅತ್ಯಂತ ಆರಾಮದಾಯಕವಾಗಿ ಗಳಿಸುತ್ತಾರೆ. ಹಣ ಪಡೆದು ಬಡವ-ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲರಿಗೂ ವೃತ್ತಿಪರ ಗೆಳತಿಯಾಗಿದ್ದಾಳೆ.

4 /5

ವರದಿಗಳ ಪ್ರಕಾರ ಒಂಟಿ ಪುರುಷರ ಗೆಳತಿಯಾಗಿರುವುದು ಮತ್ತು ಅವರಿಂದ ಭಾರೀ ಶುಲ್ಕವನ್ನು ಪಡೆಯುವುದು ಈ ಸುಂದರಿಯ ಮುಖ್ಯ ಆದಾಯದ ಮೂಲವಾಗಿದೆ. ಏಕಾಂಗಿ ಪುರುಷರು ಅಂದರೆ ಒಂಟಿತನ ಅನುಭವಿಸುವವರು ಹಣ ಕೊಟ್ಟು ಆಕೆಯನ್ನು ಗೆಳತಿಯನ್ನಾಗಿ ಮಾಡಿಕೊಳ್ಳುತ್ತಾರೆ. ಅವಳು ಅವರೊಂದಿಗೆ ಮಾತನಾಡುತ್ತಾಳೆ, ಅವರ ಸಮಸ್ಯೆಗಳು, ದುಃಖ ಮತ್ತು ನೋವುಗಳನ್ನು ಕೇಳುತ್ತಾಳೆ. ಜೊತೆಗೆ ನಗು, ಹಾಸ್ಯ ಮತ್ತು ಪ್ರಣಯ ಹೀಗೆ ಅವರೊಂದಿಗೆ ಎಲ್ಲ ರೀತಿಯಲ್ಲಿಯೂ ಸಹಕರಿಸುತ್ತಾಳೆ. ಆದರೆ ಈಕೆಯ ಎಲ್ಲಾ ಸೇವೆಗಳು ಆನ್‌ಲೈನ್‌ನಲ್ಲಿ ಮಾತ್ರ ಸಿಗುತ್ತವೆ.

5 /5

ಆನ್‌ಲೈನ್ ಸೇವೆ ಎಂದರೆ ಈಕೆ ತನ್ನ ಸೇವೆಗಳನ್ನು ಜನರನ್ನು ಮುಖಾಮುಖಿ ಭೇಟಿ ಮಾಡುವುದಿಲ್ಲ. ತನ್ನ ಫೋನ್ ಮತ್ತು ಸಂದೇಶಗಳ ಮೂಲಕ ಪ್ರೇಮಿಗಳೊಂದಿಗೆ ಸಂಪರ್ಕದಲ್ಲಿರುತ್ತಾಳೆ. ವರದಿಯ ಪ್ರಕಾರ ಈ ಸುಂದರಿ ಸುಮಾರು 3 ಸಾವಿರ ಜನರಿಗೆ ಬಾಡಿಗೆ ಗೆಳತಿಯಾಗಿದ್ದಾಳೆ.