OMG: ಬೆಕ್ಕನ್ನು ಕೊಲೆಗೈಯಲು ಚಾಕು ತಂದ ಇಲಿರಾಯ! ಹಿಂದೆಂದು ನೋಡಿರ್ಲಿಕ್ಕಿಲ್ಲ ಇಂಥಾ ವಿಡಿಯೋ
Mouse Viral Video: ಈ ವಿಡಿಯೋವನ್ನು ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರ ನಿದ್ದೆಯೇ ಹಾರಿಹೋಗಿದೆಯಂತೆ. ವಿಡಿಯೋದಲ್ಲಿ ಇಲಿಯೊಂದು ಚಾಕು ತೆಗೆದುಕೊಂಡು ಬರುವುದನ್ನು ನೀವು ನೋಡಬಹುದು. ಬೆಕ್ಕನ್ನು ಕೊಲೆಗೈಯಲು ಅದು ಚಾಕು ತರುತ್ತಿದೆ ಎಂಬಂತೆ ಗೋಚರಿಸುತ್ತಿದೆ.
Mouse Trending Video: ಸಾಮಾಜಿಕ ಮಧ್ಯಮಗಳಲ್ಲಿ ಜೀವಿಗಳ ಹಲವು ಬೆಚ್ಚಿಬೀಳಿಸುವ ವಿಡಿಯೋಗಳನ್ನು ನೀವು ನೋಡಿರಬಹುದು. ಅವುಗಳಲ್ಲಿನ ಕೆಲ ವಿಡಿಯೋಗಳನ್ನು ವೀಕ್ಷಿಸಿ ಅದ್ಹೇಗೆ ಸಾಧ್ಯ ಅಂತ ನಿಮಗೂ ಒಂದು ಕ್ಷಣ ಅನ್ನಿಸಿರಬಹುದು. ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ವೀಕ್ಷಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರ ರಾತ್ರಿಯ ನಿದ್ರೆಯೇ ಹಾರಿಹೋಗಿದೆ. ಈ ವಿಡಿಯೋದಲ್ಲಿ ಇಲಿಯೊಂದು ಚಾಕು ಹಿಡಿದುಕೊಂಡು ಬರುವುದನ್ನು ನೀವು ನೋಡಬಹುದು. ಬೆಕ್ಕಿನ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಇಲಿ ಹವಣಿಸುತ್ತಿದೆ ಎಂಬಂತೆ ಕಂಗೊಳಿಸುತ್ತಿದೆ.
ಈ ವಿಡಿಯೋ ಇಂಟರ್ನೆಟ್ ಮೇಲೆ ಭಾರಿ ಸಂಚಲನ ಮೂಡಿಸಿದೆ. ಇಲಿ ಯಾರ ಕೊಲೆಗೆ ಪ್ಲಾನ್ ಮಾಡಿದೆ ಎಂಬುದು ಮಾತ್ರ ಮಾಧ್ಯಮ ಬಳಕೆದಾರರಿಗೆ ಅರ್ಥವಾಗುತ್ತಿಲ್ಲ. ವಿಡಿಯೋಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮದೇ ಆದ ರೀತಿಯಲ್ಲಿ ವಿಡಿಯೋಗೆ ಕತೆ ಕಟ್ಟುತ್ತಿದ್ದಾರೆ. ಕೆಲವರು ಗಜ್ಜರಿಯನ್ನು ಕತ್ತರಿಸಲು ಇಲಿ ಚಾಕು ತಂದಿದೆ ಎನ್ನುತ್ತಿದ್ದರೆ, ಇನ್ನೂ ಕೆಲವರು ತನ್ನ ಸಂಗಾತಿ ಹೆಣ್ಣು ಇಲಿಯ ಹತ್ಯೆಗೈದ ಬೆಕ್ಕಿನ ವಿರುದ್ಧ ಸೇಡು ತೀರಿಸಿಕೊಳ್ಳಲು ಇಲಿ ಚಾಕು ತಂದಿದೆ. ಇದೆ ಚಾಕುವಿನಿಂದ ಅದು ಬೆಕ್ಕಿನ ಕೊಲೆಗೈಯಲಿದೆ ಎನ್ನುತ್ತಿದ್ದಾರೆ. ಅದೇನೇ ಇದ್ದರೂ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ವೀಕ್ಷಿಸಿರುವ ಮಾಧ್ಯಮ ಬಳಕೆದಾರರು ಅದನ್ನು ತಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುತ್ತಿದ್ದಾರೆ... ವಿಡಿಯೋ ನೋಡಿ...
Shocking Video : ನೃತ್ಯ ಮಾಡುತ್ತ ಕುಸಿದುಬಿದ್ದು ಪ್ರಾಣಬಿಟ್ಟ ಡ್ಯಾನ್ಸರ್
ಬಾಯಿಯಲ್ಲಿ ಚಾಕು ಹಿಡಿದುಕೊಂಡು ಬಂದ ಇಲಿರಾಯ
ಇಲಿಯೊಂದು ಚಾಕು ತರುವುದನ್ನು ನೀವು ಈ ವಿಡಿಯೋದಲ್ಲಿ ವೀಕ್ಷಿಸಬಹುದು. ಇಲಿರಾಯ ಚಾಕುವನ್ನು ತನ್ನ ಬಾಯಿಯಲ್ಲಿ ಹಿಡಿದು ವೇಗವಾಗಿ ಓಡೋಡಿ ಬರುತ್ತಿದೆ. ನಿಜಕ್ಕೂ ಯಾವುದಾದರೊಂದು ಬೆಕ್ಕಿನ ಮರ್ಡರ್ ಮಾಡಿ ಇಲಿ ಓಡಿಹೊಗುತ್ತಿದೆ ಎಂಬಂತಿದೆ ಈ ದೃಶ್ಯ. ಈ ಸಂಪೂರ್ಣ ದೃಶ್ಯ ಮನೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ ಟ್ವಿಟ್ಟರ್ ಮೇಲೆ @Laughs_4_All ಹೆಸರಿನ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. 6 ಸೆಕೆಂಡ್ ಕಾಲಾವಧಿಯ ಈ ವಿಡಿಯೋ ಇದುವರೆಗೆ 2 ಲಕ್ಷ 24 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.