Child With Snake Video: ಪುಟ್ಟ ಬಾಲಕಿಯ ಮುಂದೆ ದೈತ್ಯ ಹಾವು, ಮುಂದೇನಾಯ್ತು... ಈ ವಿಡಿಯೋ ನೋಡಿ...
Child With Snake Video: ದೈತ್ಯ ಹಾವಿನೊಂದಿಗೆ ಆಟವಾಡುತ್ತಿರುವ ಹುಡುಗಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟ್ರೆಂಡ್ ಆಗುತ್ತಿದೆ. ಈ ವಿಡಿಯೋ ನೋಡಿದರೆ ಯಾರಾದರೂ ಸಹ ಒಂದು ಕ್ಷಣ ಅಬ್ಬಬ್ಬಾ ಎಂದು ಬಾಯಿ ಮೇಲೆ ಬೆರಳಿಡುತ್ತಾರೆ. ಪುಟ್ಟ ಹುಡುಗಿ ಮತ್ತು ಹಾವಿನ ಈ ವೀಡಿಯೊವನ್ನು ಕೆಲವೇ ನಿಮಿಷಗಳಲ್ಲಿ ಸಾವಿರಾರು ಬಾರಿ ವೀಕ್ಷಿಸಲಾಗಿದೆ ಮತ್ತು ಹೆಚ್ಚಿನ ಜನರು ಇದನ್ನು ಲೈಕ್ ಮಾಡಿದ್ದಾರೆ.
Child With Snake Video: ಸೋಶಿಯಲ್ ಮೀಡಿಯಾ ಪ್ರಪಂಚವು ಹಲವು ಆಶ್ಚರ್ಯಕರ ಸಂಗತಿಗಳಿಂದ ತುಂಬಿದೆ. ಇಲ್ಲಿ ಯಾವಾಗ ಯಾವ ವಿಷಯ ವೈರಲ್ ಆಗುತ್ತದೆ ಎಂದು ಊಹಿಸಲು ಸಾಧ್ಯವೇ ಇಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಕಂಡು ಬರುವ ಕೆಲವು ವೀಡಿಯೋಗಳು ನಿಮ್ಮನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಿದರೆ, ಇನ್ನೂ ಕೆಲವು ವಿಡಿಯೋಗಳು ನಿಮ್ಮ ಕಣ್ಣುಗಳನ್ನು ನೀವೇ ನಂಬಲು ಸಾಧ್ಯವಿಲ್ಲ ಎಂಬಂತೆ ಮಾಡುತ್ತವೆ. ಸದ್ಯ ಅಂತಹದ್ದೇ ಒಂದು ವಿಡಿಯೋ ಈಗ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಪುಟ್ಟ ಬಾಲಕಿಯ ಮುಂದೆ ದೈತ್ಯ ಹಾವು ಬಂದಾಗ ಆ ಮಗು ಮಾಡಿರುವ ಕೆಲಸ ಎಲ್ಲರೂ ಬಾಯಿಯ ಮೇಲೆ ಕೈ ಇಡುವಂತೆ ಮಾಡಿದೆ.
ದೈತ್ಯ ಹಾವಿನ ಬಾಲ ಹಿಡಿದು ಎಳೆಯುತ್ತಿರುವ ಬಾಲಕಿ:
ಕೆಲವೇ ಸೆಕೆಂಡುಗಳ ಈ ವೈರಲ್ ವಿಡಿಯೋದಲ್ಲಿ (Viral Video) ಸುಮಾರು ಒಂದೂವರೆ-ಎರಡು ವರ್ಷದ ಬಾಲಕಿ 15 ಅಡಿ ಉದ್ದದ ಹಾವಿನ ಬಾಲ ಹಿಡಿದು ಎಳೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಹಾವು ಮುಂದೆ ಹೋಗಲು ಪ್ರಯತ್ನಿಸಿದಾಗಲೆಲ್ಲಾ ಬಾಲಕಿ ಹಾವಿನ ಬಾಲ ಹಿಡಿದು ಹಿಂದೆ ಎಳೆಯುತ್ತಿದ್ದಾಳೆ. ಹೀಗೆ ಒಮ್ಮೆ ಹಾವು ಕೊಂಚ ಮುಂದೆ ಸರಿದಾಗ ಮುಂದೆ ಬಂದು ಹಾವನ್ನು ಹಿಡಿದುಕೊಳ್ಳಲು ಮುಂದಾಗುತ್ತಾಳೆ, ಅಷ್ಟರಲ್ಲಿ ಅಲ್ಲಿದ್ದವರು ಹಿಂದೆಯಿಂದ ಹಾವನ್ನು ಹಿಡಿಯುವಂತೆ ಸಲಹೆ ನೀಡುತ್ತಾರೆ. ಬಾಲಕಿ ಮತ್ತೆ ಹೋಗಿ ಹಾವಿನ ಬಾಲ ಹಿಡಿದು ತನ್ನ ಕಡೆಗೆ ಹಾವನ್ನು ಎಳೆಯಲು ಪ್ರಯತ್ನಿಸುತ್ತಾಳೆ.
ಇದನ್ನೂ ಓದಿ- Viral Video: ಹಾವು ಮರಿಗೆ ಜನ್ಮ ನೀಡುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲಿದೆ ಅಪರೂಪದ ವೈರಲ್ ವಿಡಿಯೋ
ಪುಟ್ಟ ಹುಡುಗಿ ಮತ್ತು ಹಾವಿನ ಈ ವೈರಲ್ ವೀಡಿಯೊವನ್ನು (Snake Viral Video) ಕೆಲವೇ ನಿಮಿಷಗಳಲ್ಲಿ ಸಾವಿರಾರು ಬಾರಿ ವೀಕ್ಷಿಸಲಾಗಿದೆ ಮತ್ತು ಹೆಚ್ಚಿನ ಜನರು ಇದನ್ನು ಲೈಕ್ ಮಾಡಿದ್ದಾರೆ.
ಇದನ್ನೂ ಓದಿ- Cobra-Rattlesnake Fight: ಇದ್ದಕ್ಕಿದ್ದಂತೆ ಎದುರಾದ ರಾಟಲ್ ಸ್ನೇಕ್-ಕೋಬ್ರಾ, ಮುಂದೆ ಆಗಿದ್ದೇ ಬೇರೆ!
ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದನ್ನು Instagram ನಲ್ಲಿ ಸ್ನೇಕ್._.world ಹೆಸರಿನ ಪುಟದಲ್ಲಿ ಅಪ್ಲೋಡ್ ಮಾಡಲಾಗಿದೆ. ವಿಡಿಯೋವನ್ನು ಯಾವಾಗ ಮತ್ತು ಎಲ್ಲಿ ಸೆರೆಹಿಡಿಯಲಾಗಿದೆ ಎಂಬುದು ತಿಳಿದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.