ನವದೆಹಲಿ: ಇನ್ಸ್ಟಂಟ್ ಮೆಸೇಜಿಂಗ್ ಆಪ್ ವಾಟ್ಸಾಪ್ ಮುಂದಿನ ದಿನಗಳಲ್ಲಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದ್ದು ಇದರಿಂದ ಬಳಕೆದಾರರು ತಮ್ಮ ಚಾಟಿಂಗ್ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಬಹುದಾಗಿದೆ. ಇದಕ್ಕೂ ಮೊದಲು ಅನಿಮೇಟೆಡ್ ಸ್ಟಿಕ್ಕರ್‌ಗಳನ್ನು ಪರಿಚಯಿಸಿತ್ತು. ಇದು ಐಒಎಸ್ ಮತ್ತು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಇದೇ ವೇಳೆ ಕಂಪನಿಯು ಶೀಘ್ರದಲ್ಲೇ ಹಲವು ಸಾಧನಗಳಲ್ಲಿ ವಾಟ್ಸಾಪ್ ಅನ್ನು ಬಳಸಲು ಸಾಧ್ಯವಾಗುವಂತಹ ವೈಶಿಷ್ಟ್ಯವನ್ನು ಜಾರಿಗೆ ತರಲಿದೆ ಎಂಬ ಚರ್ಚೆಯಿದೆ. ಈ ವೈಶಿಷ್ಟ್ಯವು ವಾಟ್ಸಾಪ್ ವೆಬ್‌ ಗಿಂತ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ಇದೇ ವೇಳೆ, ಕಂಪನಿಯು ಈ ವೈಶಿಷ್ಟ್ಯದ ಮೇಲೆ ಕೆಲಸ ಮಾಡಲು ಆರಂಭಿಸಿದ್ದು, ಶಿಘ್ರದಲ್ಲೇ ಅದನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.


COMMERCIAL BREAK
SCROLL TO CONTINUE READING

WABetaInfo ಮೂಲಕ ಪ್ರಕಟಿಸಲಾಗಿರುವ ವರದಿಯೊಂದರ ಪ್ರಕಾರ, ಈ ವೈಶಿಷ್ಟ್ಯವನ್ನು v2.20.196.8 ಬೀಟಾ ಆವೃತ್ತಿಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವೈಶಿಷ್ಟ್ಯ ಬಳಸಿ ಬಳಕೆದಾರರು ಏಕಕಾಲಕ್ಕೆ ಹಲವು ಡಿವೈಸ್ ಗಳ ಮೇಲೆ ತಮ್ಮ ವಾಟ್ಸ್ ಆಪ್ ಖಾತೆಯನ್ನು ನಿರ್ವಹಿಸಬಹುದಾಗಿದೆ. ಇದರ ಜೊತೆಗೆ ಒಂದು ಸ್ಕ್ರೀನ್ ಶಾಟ್ ಕೂಡ ಹಂಚಿಕೊಳ್ಳಲಾಗಿದ್ದು ಇದರಲ್ಲಿ 'Linked Devices'ಗಳ ಆಯ್ಕೆ ನೀಡಲಾಗಿದೆ. ಇದು ಮುಂದಿನ ವೈಶಿಷ್ಟ್ಯವಾಗಿದ್ದು, ಇದರಿಂದ ಬಳಕೆದಾರರು ಒಂದೇ ಸಂಖ್ಯೆಯನ್ನು ಏಕಕಾಲಕ್ಕೆ 4 ಸ್ಮಾರ್ಟ್ ಫೋನ್ ಗಳಲ್ಲಿ ಬಳಸಬಹುದಾಗಿದೆ.


ಹಾಗೆ ನೋಡುವುದಾದರೆ whatsApp ನಲ್ಲಿ ಮಲ್ಟಿಪಲ್ ಡಿವೈಸಿಸ್ ಗಾಗಿ WhatsApp Web ವೈಶಿಷ್ಟ್ಯ ನೀಡಲಾಗಿದೆ. ಆದರೆ. ಬಳಕೆದಾರರು ಈ ವೈಶಿಷ್ಟ್ಯವನ್ನು ಬಳಕೆದಾರರು ತಮ್ಮ ಸ್ಮಾರ್ಟ್ ಫೋನ್ ಅನ್ನು ಡೆಸ್ಕ್ ಟಾಪ್ ಗೆ ಕನೆಕ್ಟ್ ಮಾಡಲು ಬಳಸುತ್ತಾರೆ. ಮುಂಬರುವ ವೈಶಿಷ್ಟ್ಯದ ಮೂಲಕ ಬಳಕೆದಾರರು ತಮ್ಮ ಒಂದೇ ವಾಟ್ಸ್ ಆಪ್ ಖಾತೆಯನ್ನು ಏಕಕಾಲಕ್ಕೆ ಹಲವು ಡಿವೈಸ್ ಮೇಲೆ ಉಪಯೋಗಿಸಬಹುದು ಹಾಗೂ ಯಾವ ಡಿವೈಸ್ ನಿಂದ ಬೇಕಾದರೂ ಲಾಗೌಟ್ ಮಾಡಬಹುದು.