ಮುಸ್ಲಿಮರ ರಾಜ್ಯ, ಮುಸ್ಲಿಂ ರಾಜ್ಯವಲ್ಲ: ಭಯೋತ್ಪಾದನೆಯ ವಿಷಯದಲ್ಲಿ ತಜಿಕಿಸ್ತಾನದ ಕಠಿಣ ನಿಲುವು
ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಉಜ್ಬೆಕಿಸ್ತಾನ್ (ಐ ಎಂ ಯು) ಮತ್ತು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯ (ಐಸಿಸ್)ಗಳು ತಜಿಕಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪ್ರಮುಖ ಉಗ್ರಗಾಮಿ ಗುಂಪುಗಳು. ಈ ಎರಡು ಗುಂಪುಗಳು ತಜಿಕಿಸ್ಥಾನದಲ್ಲಿ ಬಾಂಬ್ ದಾಳಿ, ಹತ್ಯೆ-ಕಗ್ಗೊಲೆಗಳು ಹಾಗೂ ಅಪಹರಣಗಳಂತಹ ಅನೇಕ ದಾಳಿಗಳನ್ನು ನಡೆಸಿವೆ.
ತಜಿಕಿಸ್ತಾನದಲ್ಲಿ ಭಯೋತ್ಪಾದನೆಯು ರಾಷ್ಟ್ರದ ಸುರಕ್ಷತೆ ಹಾಗೂ ಸ್ಥಿರತೆಗೆ ಒಂದು ಗಂಭೀರವಾದ ಬೆದರಿಕೆಯಾಗಿದೆ. ಆದಾಗಿಯೂ ತಾಜಿಕ್ ಸರ್ಕಾರವು ಭಯೋತ್ಪಾದನೆಯನ್ನು ಹತ್ತಿಕ್ಕಲು ಗಡಿ ಭದ್ರತೆಯನ್ನು ಬಲಪಡಿಸುವುದು, ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ಭಾಗಿದಾರರೊಂದಿಗೆ ಹೆಚ್ಚಿನ ಸಹಕಾರದೊಂದಿಗೆ ವರ್ತಿಸುವುದು ಹಾಗೂ ಉಗ್ರಗಾಮಿ ಗುಂಪುಗಳನ್ನು ಸದೆಬಡಿಯುವುದು ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಆದರೂ ಈ ಭಯೋತ್ಪಾದನೆಯ ಬೆದರಿಕೆ ತಜಿಕಿಸ್ತಾನಕ್ಕೆ ಒಂದು ಗಂಭೀರ ಸವಾಲಾಗಿ ಉಳಿದಿದೆ.
ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಉಜ್ಬೆಕಿಸ್ತಾನ್ (ಐ ಎಂ ಯು) ಮತ್ತು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯ (ಐಸಿಸ್)ಗಳು ತಜಿಕಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪ್ರಮುಖ ಉಗ್ರಗಾಮಿ ಗುಂಪುಗಳು. ಈ ಎರಡು ಗುಂಪುಗಳು ತಜಿಕಿಸ್ಥಾನದಲ್ಲಿ ಬಾಂಬ್ ದಾಳಿ, ಹತ್ಯೆ-ಕಗ್ಗೊಲೆಗಳು ಹಾಗೂ ಅಪಹರಣಗಳಂತಹ ಅನೇಕ ದಾಳಿಗಳನ್ನು ನಡೆಸಿವೆ.
ಎರಡು ಪ್ರಮುಖ ಗುಂಪುಗಳು :
* ಐ ಎಂ ಯು ಉಜ್ಬೆಕಿಸ್ತಾನದಲ್ಲಿ 1990ರ ದಶಕದ ಆರಂಭದಲ್ಲಿ ಸ್ಥಾಪಿತವಾದ ಉಗ್ರಗಾಮಿ ಇಸ್ಲಾಮೀಯ ಗುಂಪಾಗಿದೆ. ಉಜ್ಬೆಕಿಸ್ತಾನ್ ಸರ್ಕಾರವನ್ನು ಉರುಳಿಸಿ ಅಲ್ಲಿ ಇಸ್ಲಾಮಿಕ್ ರಾಜ್ಯವನ್ನು ಸ್ಥಾಪಿಸುವುದು ಈ ಗುಂಪಿನ ಗುರಿಯಾಗಿದೆ. 1999ರಲ್ಲಿ ರಾಜಧಾನಿ ದುಶಾನ್ಬೆಯಲ್ಲಿರುವ ಅಮೇರಿಕಾದ ರಾಯಭಾರ ಕಚೇರಿ ಮತ್ತು ತಜಿಕಿಸ್ತಾನದ ರಕ್ಷಣಾ ಸಚಿವಾಲಯದ ಮೇಲೆ ನಡೆಸಿದ ಬಾಂಬ್ ದಾಳಿಗಳು ಸೇರಿದಂತೆ ಐ ಎಂ ಯು ಅನೇಕ ದಾಳಿಗಳನ್ನು ನಡೆಸಿದೆ.
* ಐಸಿಸ್ 2014ರಲ್ಲಿ ಇರಾಕ್ ಮತ್ತು ಸಿರಿಯಾಗಳಲ್ಲಿ ಹುಟ್ಟಿಕೊಂಡ ಸಲಾಫಿ ಜಿಹಾದಿಸ್ಟ್ ಗುಂಪಾಗಿದೆ. ಇದು ಅತಿ ಶೀಘ್ರವಾಗಿ ವಿಶ್ವದ ಅತ್ಯಂತ ಶಕ್ತಿಶಾಲಿ ಹಾಗೂ ಆತಂಕಕಾರಿ ಭಯೋತ್ಪಾದಕ ಸಂಘಟನೆಗಳಲ್ಲಿ ಒಂದೆನಿಸಿದೆ. 2015ರಲ್ಲಿ ರೂದಕಿ ಜಿಲ್ಲೆಯಲ್ಲಿನ ತಜಿಕ್ ಗಡಿ ಪೋಸ್ಟ್ ನ ಮೇಲಿನ ದಾಳಿ ಒಳಗೊಂಡಂತೆ ಅನೇಕ ದಾಳಿಗಳನ್ನು ಐಸಿಸ್ ನಡೆಸಿದೆ.
ಇದನ್ನೂ ಓದಿ- ಪಾಕಿಸ್ತಾನದೊಡನೆ ಹೆಚ್ಚುತ್ತಿರುವ ಚೀನಾದ ನೌಕಾಬಂಧ: ಯಾವಾಗ ಭಾರತ ಇದಕ್ಕೆ ಪ್ರತಿಕ್ರಿಯಿಸಲಿದೆ?
ತಜಿಕಿಸ್ತಾನ ಯಾವ ರೀತಿ ಭಿನ್ನ?
ತಜಿಕಿಸ್ಥಾನವು 9.3 ಮಿಲಿಯನ್ ಜನಸಂಖ್ಯೆಯುಳ್ಳ ಮಧ್ಯ ಏಷ್ಯಾದ ರಾಷ್ಟ್ರವಾಗಿದೆ ಪ್ರಧಾನವಾಗಿ ಮುಸ್ಲಿಂ ರಾಷ್ಟ್ರವಾಗಿರುವ ಇಲ್ಲಿ 90% ರಷ್ಟು ಜನರು ಸುನ್ನಿ ಮುಸ್ಲಿಮರಾಗಿದ್ದಾರೆ. ಆದರೆ ಇತರ ಇಸ್ಲಾಮಿಕ್ ರಾಷ್ಟ್ರಗಳಿಗಿಂತ ತಜಿಕಿಸ್ತಾನದ ಆಡಳಿತವು ಹಲವಾರು ವಿಧಗಳಲ್ಲಿ ಭಿನ್ನವಾಗಿದೆ.
ಈ ಭಿನ್ನತೆಗಳಲ್ಲಿ ಅತಿ ಮಹತ್ವಪೂರ್ಣವಾದ ಒಂದು ವ್ಯತ್ಯಾಸ ಅಂದರೆ ತಜಿಕಿಸ್ತಾನವು ಜಾತ್ಯಾತೀತ ದೇಶವಾಗಿದೆ. ಅಂದರೆ ಸರ್ಕಾರದ ಆಡಳಿತ ಕ್ರಮ ಇಸ್ಲಾಮಿಕ್ ಕಾನೂ ಆಧಾರವಾಗಿಲ್ಲ ಹಾಗೂ ಧರ್ಮ ಮತ್ತು ಸರ್ಕಾರ ಇವೆರಡನ್ನೂ ಸಂವಿಧಾನದಲ್ಲಿ ಪ್ರತ್ಯೇಕವಾಗಿ ಪ್ರತಿಪಾದಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಅನೇಕ ಇಸ್ಲಾಮೀಯ ರಾಷ್ಟ್ರಗಳು ನಾಗರೀಕರ ಜನಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುವಂತಹ ಇಸ್ಲಾಮಿಕ್ ಕಾನೂನನ್ನು ಆಧರಿಸಿವೆ. ಉದಾಹರಣೆಗೆ ಕೆಲವು ಇಸ್ಲಾಮಿಕ್ ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ನಿರ್ಬಂಧಗಳ ಜೊತೆಗೆ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಮುಖವನ್ನು ಮುಚ್ಚಿಕೊಂಡಿರಬೇಕು.
ಇನ್ನೊಂದು ವ್ಯತ್ಯಾಸವೆಂದರೆ ತಜಿಕಿಸ್ಥಾನ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ಹೊಂದಿದೆ. ರಾಷ್ಟ್ರಾಧ್ಯಕ್ಷರನ್ನು ಜನಪ್ರಿಯ ಮತಗಳಿಂದ ಆಯ್ಕೆ ಮಾಡಲಾಗುವುದು ಹಾಗೂ ಅಲ್ಲಿನ ಸಂಸತ್ತಿನಲ್ಲಿ ಚುನಾಯಿತ ಪ್ರತಿನಿಧಿಗಳು ಇರುವರು. ಇದಕ್ಕೆ ವಿರುದ್ಧವಾಗಿ ಅನೇಕ ಇಸ್ಲಾಮೀಯ ರಾಷ್ಟ್ರಗಳು ಮಾನವ ಹಕ್ಕುಗಳ ದುರ್ಬಳಕೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರತೆಗೆ ಕಾರಣವಾಗುವಂತಹ ಸರ್ವಾಧಿಕಾರದ/ದಬ್ಬಾಳಿಕೆಯ ಆಡಳಿತದಿಂದ ಆಳಲ್ಪಡುತ್ತವೆ.
ಕೊನೆಯದಾಗಿ, ತಜಿಕಿಸ್ತಾನದಲ್ಲಿ ಇತರೆ ಇಸ್ಲಾಮೀಯ ರಾಷ್ಟ್ರಗಳಿಗಿಂತ ತುಲನಾತ್ಮಕವಾಗಿ ಮುಕ್ತ ಆರ್ಥಿಕ ವ್ಯವಸ್ಥೆ ಇದೆ.
ಇದು ವಿಶ್ವ ವಾಣಿಜ್ಯ ಸಂಸ್ಥೆ ವರ್ಲ್ಡ್ ಟ್ರೇಡ್ ಆರ್ಗನೈಸೇಷನ್)ಯ ಸದಸ್ಯ ರಾಷ್ಟ್ರವಾಗಿದ್ದು ಇತರ ಅನೇಕ ರಾಷ್ಟ್ರಗಳೊಂದಿಗೆ ಮುಕ್ತ ವಾಣಿಜ್ಯ ಒಪ್ಪಂದವನ್ನು ಹೊಂದಿದೆ. ಇದು ದೇಶದ ಆರ್ಥಿಕ ವ್ಯವಸ್ಥೆಯನ್ನು ಉತ್ತಮಗೊಳಿಸಿ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಅನೇಕ ಇಸ್ಲಾಮೀಯ ರಾಷ್ಟ್ರಗಳಲ್ಲಿ ಮುಕ್ತವಲ್ಲದ ಆರ್ಥಿಕ ವ್ಯವಸ್ಥೆಯಿದ್ದು ವ್ಯಾಪಾರ ವ್ಯವಹಾರಗಳಿಗೆ ಕಾರ್ಯನಿರ್ವಹಿಸಲು ಅನಾನುಕೂಲವಾಗುವಂತಹ ಹಾಗೂ ಜನರಿಗೆ ಉದ್ಯೋಗಗಳನ್ನು ಪಡೆಯಲು ಕಷ್ಟವಾಗುವಂತಹ ಪ್ರತಿಬಂಧಕ/ ಸೀಮಿತ ಆರ್ಥಿಕ ವ್ಯವಸ್ಥೆಯಿದೆ.
ಇತರ ಇಸ್ಲಾಮೀಯ ರಾಷ್ಟ್ರಗಳಿಗಿಂತ ಭಿನ್ನವಾಗಿರುವ ತಜಿಕಿಸ್ತಾನದ ಆಡಳಿತ ವ್ಯವಸ್ಥೆಯು ನಾಗರಿಕರ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರಿದೆ. ಇತರ ಇಸ್ಲಾಮೀಯ ರಾಷ್ಟ್ರಗಳಲ್ಲಿ ಇರುವುದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯ ಹಾಗೂ ಅವಕಾಶಗಳನ್ನು ಇಲ್ಲಿನ ಜಾತ್ಯಾತೀತ ಹಾಗೂ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರ ಜನರಿಗೆ ನೀಡುತ್ತಿದೆ. ಇಲ್ಲಿನ ಮುಕ್ತ ಆರ್ಥಿಕ ವ್ಯವಸ್ಥೆಯ ಪರಿಣಾಮವಾಗಿ ಈ ದೇಶವು ಉತ್ಕೃಷ್ಟ ಗುಣಮಟ್ಟದ ಜೀವನದೊಂದಿಗೆ ತುಲನಾತ್ಮಕವಾಗಿ ಸಮೃದ್ಧ ರಾಷ್ಟ್ರವಾಗಿದೆ.
ತಜಿಕ್ ಜನರು ಎದುರಿಸುತ್ತಿರುವ ಸವಾಲುಗಳು:
ಆದಾಗ್ಯೂ ತಜಿಕಿಸ್ತಾನವು ಹಲವು ಸವಾಲುಗಳನ್ನು ಎದುರಿಸುತ್ತಿದೆ. 1990ರ ದಶಕದಲ್ಲಿ ನಡೆದ ಆಂತರಿಕ ಯುದ್ಧದಿಂದ ದೇಶವು ಇನ್ನೂ ಚೇತರಿಸಿಕೊಳ್ಳುತ್ತ ಇದೆ. ಸರ್ಕಾರವು ಭ್ರಷ್ಟಾಚಾರ ಹಾಗೂ ಆಡಳಿತದಲ್ಲಿ ಪಾರದರ್ಶಕತೆಯ ಕೊರತೆಯನ್ನು ಎದುರಿಸುತ್ತಿದೆ. ಈ ಸವಾಲುಗಳ ಹೊರತಾಗಿಯೂ ತಜಿಕಿಸ್ತಾನವು ಹಲವಾರು ನೈಸರ್ಗಿಕ ಸಂಪನ್ಮೂಲಗಳೊಂದಿಗೆ ಉಜ್ವಲವಾದ ಭವಿಷ್ಯವನ್ನು ಹೊಂದಿರುವ ದೇಶವಾಗಿದೆ. ಸಮಯೋಚಿತ ಸೂಕ್ತ ಕಾರ್ಯನೀತಿಗಳೊಂದಿಗೆ ತಜಿಕಿಸ್ತಾನವು ಒಂದು ಸಮೃದ್ಧ ಹಾಗೂ ಸ್ಥಿರ ದೇಶವಾಗಬಹುದಾಗಿದೆ.
ವಿವಾದಾತ್ಮಕವಾದ ಗಡ್ಡದ ಮೇಲಿನ ನಿಷೇಧ:
ತಜಿಕಿಸ್ಥಾನದಲ್ಲಿ ವಸ್ತುತಃ/ಕಾರ್ಯತಃ ಗಡ್ಡ ಬೆಳೆಸುವ ಮೇಲೆ ನಿಷೇಧವಿದೆ. ಸರ್ಕಾರವು ಅಧಿಕೃತವಾಗಿ ಗಡ್ಡ ಹೊಂದುವುದನ್ನು ನಿಷೇಧಿಸಿಲ್ಲವಾದರೂ ಪೊಲೀಸರು ಬಲವಂತವಾಗಿ ಮುಖದ ಮೇಲೆ ಕೂದಲಿರುವ ಗಂಡಸರ ಕ್ಷೌರ ಮಾಡಿರುವ ವರದಿಗಳಿವೆ. ಈ ಗಡ್ಡದ ಮೇಲಿನ ನಿಷೇಧವು ಹಿಜಾಬ್ ಗಳ ಆಮದು ಮತ್ತು ಅರಾಬಿಕ್ ಹೆಸರುಗಳ ಬಳಕೆಯ ಮೇಲಿನ ನಿರ್ಬಂಧಗಳನ್ನು ಒಳಗೊಂಡಂತೆ ಇಸ್ಲಾಂ ಧರ್ಮವನ್ನು ದಮನಗೊಳಿಸುವ ಸರ್ಕಾರದ ಉದ್ದೇಶದಂತೆ ಕಂಡು ಬರುತ್ತದೆ.
ಇದನ್ನೂ ಓದಿ- Pakistan Political Crisis: ಇಮ್ರಾನ್ ಖಾನ್‍ನಿಂದ 6 ಸಾವಿರ ಕೋಟಿ ಹಗರಣ- ಶಹಬಾಜ್ ಷರೀಫ್ ವಾಗ್ದಾಳಿ
ಮಾನವ ಹಕ್ಕುಗಳ ಗುಂಪುಗಳು ಈ ನಿಷೇಧವನ್ನು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಟೀಕಿಸಿವೆ. ಆದರೆ ಸರ್ಕಾರವು ಉಗ್ರವಾದವನ್ನು ತಡೆಯುವುದಕ್ಕೆ ಅಗತ್ಯವಾದ ಕ್ರಮ ಎಂದು ಈ ನಿಷೇಧವನ್ನು ಸಮರ್ಥಿಸಿಕೊಂಡಿದೆ. ಸರ್ಕಾರವು ಈ ನಿಷೇಧವನ್ನು ಹಿಂತೆಗೆಯುವ ಯಾವುದೇ ಲಕ್ಷಣವನ್ನು ತೋರಿಸದಿರುವುದು ಹಾಗೂ ಅದಕ್ಕೆ ಸಾರ್ವಜನಿಕರಿಂದ ಯಾವುದೇ ಗಮನಾರ್ಹವಾದ ವಿರೋಧ ವ್ಯಕ್ತವಾಗದಿರುವ ಕಾರಣಗಳಿಂದ ಈ ನಿಷೇಧವು ಸದ್ಯಕ್ಕೆ ಹೀಗೆ ಮುಂದುವರೆಯುವ ಸಾಧ್ಯತೆಗಳಿವೆ.
ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ:
ತಜಿಕಿಸ್ತಾನದಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆಗಳಿಗೆ ಅವಕಾಶವಿದೆ. ಆದರೆ ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಕುರಿತು ಹಲವು ನಿರ್ಬಂಧಗಳಿವೆ. ಉದಾಹರಣೆಗೆ ದೇಶದಲ್ಲಿನ ಎಲ್ಲಾ ಧಾರ್ಮಿಕ ಗುಂಪುಗಳು ಸರ್ಕಾರದೊಂದಿಗೆ ನೋಂದಾಯಿಸಿಕೊ ಕೊಳ್ಳುವುದನ್ನು ಕಡ್ಡಾಯ ಮಾಡಿದೆ. ಜೊತೆಗೆ ತನಗೆ ಉಗ್ರಗಾಮಿ ಎನಿಸಿದ ಗುಂಪುಗಳಿಗೆ ಸರ್ಕಾರವು ನೋಂದಣಿಯನ್ನು ನಿರಾಕರಿಸಬಹುದು. ಸರ್ಕಾರವು ಧಾರ್ಮಿಕ ಚಟುವಟಿಕೆಗಳ ಮೇಲೆ ಸಹ ಗಮನವಿರಿಸಿ ಅವುಗಳ ಮೇಲ್ವಿಚಾರಣೆ ನಡೆಸುತ್ತದೆ. ಧಾರ್ಮಿಕ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿ ಕಿರುಕುಳ ನೀಡುತ್ತಿದೆ ಎಂಬ ವಿಷಯವಾಗಿಯೂ ತಿಳಿದು ಬಂದಿದೆ.
ಈ ನಿರ್ಬಂಧಗಳ ನಡುವೆಯೂ ಹೆಚ್ಚಿನ ಜನರಿಗೆ ಮುಕ್ತವಾಗಿ ತಮ್ಮ ಧಾರ್ಮಿಕ ಆಚರಣೆಗಳನ್ನು ನಡೆಸಲು ಸಾಧ್ಯವಾಗುತ್ತಿದೆ. ಜನಸಂಖ್ಯೆ ಹೆಚ್ಚಿನ ಭಾಗ ಮುಸ್ಲಿಮರಾಗಿದ್ದು ದೇಶಾದ್ಯಂತ ಅನೇಕ ಮಸೀದಿಗಳಿವೆ. ಈ ಮಸೀದಿಗಳನ್ನು ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗಾಗಿ ಬಳಸಲಾಗುತ್ತದೆ.
ತಾಜಿಕ್ ಮಹಿಳೆಯರು ಸವಾಲುಗಳು:
ಇವೆಲ್ಲದರ ಹೊರತಾಗಿಯೂ, ತಾರತಮ್ಯ, ಹಿಂಸೆ, ಬಡತನ ಸೇರಿದಂತೆ ತಾಜಿಕ್ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ.
ತಾರತಮ್ಯ:
ಉದ್ಯೋಗ ಶಿಕ್ಷಣ ಹಾಗೂ ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಾಜಿಕ್ ಮಹಿಳೆಯರು ತಾರತಮ್ಯವನ್ನು ಎದುರಿಸುತ್ತಾರೆ. ಗಂಡು ಮಕ್ಕಳಿಗಿಂತ ಹೆಚ್ಚಾಗಿ ಹೆಣ್ಣು ಮಕ್ಕಳು ಓದು ಮುಗಿಸದೇ ಶಾಲೆಯಿಂದ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಉದ್ಯೋಗದಲ್ಲಿಯೂ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇರುತ್ತದೆ. ಕೇವಲ 19% ರಷ್ಟು ಸ್ಥಾನಗಳನ್ನು ಸಂಸತ್ತಿನಲ್ಲಿ ಮಹಿಳೆಯರು ಹೊಂದಿದ್ದು ಸರ್ಕಾರದಲ್ಲಿಯೂ ಮಹಿಳೆಯರು ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದಾರೆ.
ಹಿಂಸೆ:
ಗಂಡಸರಿಗಿಂತಲೂ ಮಹಿಳೆಯರೇ ಹೆಚ್ಚು ಹಿಂಸೆಯನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಕೌಟುಂಬಿಕ ಹಿಂಸಾಚಾರ ಒಂದು ಪ್ರಮುಖ ಸಮಸ್ಯೆಯಾಗಿದ್ದು ಮಹಿಳೆಯರು ಲೈಂಗಿಕ ದೌರ್ಜನ್ಯ ಹಾಗೂ ಕಳ್ಳ ಸಾಗಣಿಕೆಯ ಬಲಿ ಪಶುಗಳಾಗುವ ಸಾಧ್ಯತೆಗಳು ಹೆಚ್ಚು.
ಬಡತನ:
ಬಡತನ ತಜಿಕ್ ಮಹಿಳೆಯರು ಎದುರಿಸುವ ಇನ್ನೊಂದು ಪ್ರಮುಖ ಸಮಸ್ಯೆ. ಬಡತನದಲ್ಲಿ ಬದುಕುವ ಹಾಗೂ ತಮ್ಮ ಮಕ್ಕಳನ್ನು ಗಂಡಸರ ಸಹಾಯವಿಲ್ಲದೆ ತಾವೇ ಬೆಳೆಸುವ ಜವಾಬ್ದಾರಿಯನ್ನು ಮಹಿಳೆಯರು ತಾವೇ ಹೊರಬೇಕಾದ ಸಾಧ್ಯತೆಗಳೇ ಹೆಚ್ಚು.
ಎಲ್ಲ ಸವಾಲುಗಳ ಹೊರತಾಗಿಯೂ ಅನೇಕ ಸಂಘ-ಸಂಸ್ಥೆಗಳು ದೇಶದಲ್ಲಿ ಮಹಿಳೆಯರ ಜೀವನವನ್ನು ಸುಧಾರಿಸಲು ಶ್ರಮಿಸುತ್ತಿವೆ. ಶಿಕ್ಷಣ, ಆರೋಗ್ಯಶುಶ್ರೂಷೆ ಹಾಗೂ ಇತರ ಸೇವೆಗಳನ್ನು ಅವು ಮಹಿಳೆಯರಿಗೆ ಒದಗಿಸುತ್ತಿವೆ. ಮಹಿಳೆಯರ ವಿರುದ್ಧ ತಾರತಮ್ಯವನ್ನು ನಿಷೇಧಿಸುವ ಅನೇಕ ಕಾನೂನುಗಳನ್ನು ಸರ್ಕಾರವು ಹೊರತಂದಿದ್ದು ಮಹಿಳೆಯರಿಗೆ ಸಹಾಯ ಮಾಡಲು ಅನೇಕ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಿದೆ. ಆದಾಗ್ಯೂ ಇನ್ನು ಹೆಚ್ಚಿನ ಕ್ರಮಗಳ ಅಗತ್ಯವಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.