Nuclear Weapon Race: ಸದ್ಯ ಇಡೀ ಪ್ರಪಂಚ ಪರಮಾಣು ಸಿಡಿಮದ್ದುಗಳ ರಾಶಿಗಳ ಮೇಲೆಯೇ ಕುಳಿತಿದೆ ಎಂದರೆ ತಪ್ಪಾಗಲಾರದು. ಹೌದು ವಿಶ್ವದ ಪರಮಾಣು ಶಸ್ತ್ರಾಸ್ತ್ರಗಳ ಎಣಿಕೆ ಅತ್ಯಂತ ಅಪಾಯಕಾರಿ ಸಂಕೇತ ನೀಡುತ್ತಿದೆ. ಪ್ರಪಂಚವು ಪ್ರಸ್ತುತ ಹೆಚ್ಚಿನ ಸಂಖ್ಯೆಯ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ತೈವಾನ್ ಬಿಕ್ಕಟ್ಟು, ಚೀನಾದ ವಿಸ್ತರಣಾವಾದಿ ನೀತಿ ಮತ್ತು ಉಕ್ರೇನ್-ರಷ್ಯಾ ಯುದ್ಧದಿಂದಾಗಿ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಬೆದರಿಕೆಯೂ ಹೆಚ್ಚಾಗಿದೆ.


COMMERCIAL BREAK
SCROLL TO CONTINUE READING

ಪರಮಾಣು ಶಸ್ತ್ರಾಸ್ತ್ರಗಳಲ್ಲಿ ಭಾರಿ ಹೆಚ್ಚಳ
 ಹದಗೆಡುತ್ತಿರುವ ಅಂತರಾಷ್ಟ್ರೀಯ ಸಂಬಂಧಗಳ ನಡುವೆ ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಅಂದರೆ SIPRI ಯ ವರದಿಯಲ್ಲಿ ಬೆಚ್ಚಿಬೀಳುವ ಸಂಗತಿಗಳು ಮುನ್ನೆಲೆಗೆ ಬಂದಿವೆ. ವರದಿಯ ಪ್ರಕಾರ, ಪ್ರಸ್ತುತ ಜಗತ್ತಿನಲ್ಲಿ 12,512 ಪರಮಾಣು ಬಾಂಬ್‌ಗಳಿವೆ. ಕಳೆದ ಒಂದು ವರ್ಷದಲ್ಲಿ ಈ ಸಂಖ್ಯೆಯಲ್ಲಿ ಶೇ.86 ರಷ್ಟು ಏರಿಕೆಯಾಗಿದೆ. ಈ ವಿಚಾರದಲ್ಲಿ ಅಮೆರಿಕಕ್ಕೆ ಪೈಪೋಟಿ ನೀಡಲು ಯತ್ನಿಸುತ್ತಿರುವ ಚೀನಾ ಒಂದೇ 60 ಬಾಂಬ್ ಗಳನ್ನು ತನ್ನ ಸಂಗ್ರಹದಲ್ಲಿ ಹೆಚ್ಚಿಸಿಕೊಂಡಿದೆ. ಚೀನಾದ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆ ಪ್ರಸ್ತುತ 350 ರಿಂದ 410 ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ, ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ ಭದ್ರತೆಯು ಈಗಾಗಲೇ ಪ್ರಪಂಚದ ಆತಂಕಕ್ಕೆ ಕಾರಣವಾಗಿದೆ.


ಇದನ್ನೂ ಓದಿ-US-China Relationship: ಈ ದೇಶದಲ್ಲಿ ಕುಳಿತು ಅಮೆರಿಕಾದ ಮೇಲೆ ಬೇಹುಗಾರಿಕೆ ನಡೆಸುತ್ತಿತ್ತು ಚೀನಾ!


2035 ರ ವೇಳೆಗೆ 900 ಪರಮಾಣು ಶಸ್ತ್ರಾಸ್ತ್ರಗಳನ್ನು ತಲುಪುವ ಗುರಿಯನ್ನು ಚೀನಾ ಹೊಂದಿದೆ. ಪ್ರಸ್ತುತ, ಚೀನಾ 2027 ರ ವೇಳೆಗೆ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು 550 ಕ್ಕೆ ಹೆಚ್ಚಿಸಬೇಕಾಗಿದೆ. ಸಿಪ್ರಿಯ ಪರಮಾಣು ವಿಜ್ಞಾನಿ ಹ್ಯಾನ್ಸ್ ಎಂ. ಕ್ರಿಸ್ಟೇನ್ಸನ್, 'ಚೀನಾ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ಪ್ರಾರಂಭಿಸಿದೆ' ಎಂದು ಹೇಳಿದ್ದಾರೆ.


ಇದನ್ನೂ ಓದಿ-Ukraine-Russia War: ರಷ್ಯಾ ಒಳಹೊಕ್ಕು ದಾಳಿ ಮಾಡುವ ಶಕ್ತಿ ಪಡೆದುಕೊಂಡ ಯುಕ್ರೈನ್, ಪುಟಿನ್ ಟೆನ್ಷನ್ ನಲ್ಲಿ ಹೆಚ್ಚಳ


ಒಂದು ವರ್ಷದಲ್ಲಿ ಪ್ರವೃತ್ತಿ ಬದಲಾಗಿದೆ
ಚೀನಾ ಯಾವಾಗಲೂ ರಾಷ್ಟ್ರೀಯ ಭದ್ರತೆಯ ಕುರಿತು ಮಾತನಾಡುತ್ತಿದ್ದರು, ಅದು ಕನಿಷ್ಠ ಪರಮಾಣು ತಡೆಯನ್ನು ಹೊಂದಲು ಬಯಸುತ್ತದೆ. ಆದರೆ ಹೊಸ ಬಹಿರಂಗಪಡಿಸುವಿಕೆಗಳು ಬೇರೆಯೇ ಸಾಕ್ಷಿಗಳನ್ನು ನೀಡುತ್ತಿವೆ. SIPRI ಪ್ರಕಾರ, ಕಳೆದ 30 ವರ್ಷಗಳಿಂದ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆ ಕ್ಷೀಣಿಸುತ್ತಿದೆ. ಆದರೆ ಈ ವರ್ಷ ಟ್ರೆಂಡ್ ಬದಲಾಗಿದೆ. ತಜ್ಞರ ಪ್ರಕಾರ, ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ, ಪರಮಾಣು ಯುದ್ಧದ ಎಚ್ಚರಿಕೆಗಳನ್ನು ಹಲವು ಬಾರಿ ನೀಡಲಾಗಿದೆ. ಅವರ ಪ್ರಕಾರ, ಒಂದೇ ಒಂದು ತಪ್ಪು ನಡೆದು ಹೋಗಿ ಒಂದು ವೇಳೆ ಪರಮಾಣು ಯುದ್ಧ ಆರಂಭಗೊಂದರೆ, ನಂತರ ಅದು ಇಡೀ ಮಾನವಕುಲಕ್ಕೆ ಮಾರಕವಾಗಲಿದೆ.  ವರದಿಯ ಪ್ರಕಾರ, ಪ್ರಸ್ತುತ ಪ್ರಪಂಚದಲ್ಲಿ ಅಂತಹ 9,756 ಪರಮಾಣು ಬಾಂಬ್‌ಗಳಿವೆ, ಅವುಗಳು ಯಾವುದೇ ಹಂತಗಳಲ್ಲಿ ಸಿಡಿಯುವ ಸಾಧ್ಯತೆ ಅಲ್ಲಗಳೆಯಲಾಗುವುದಿಲ್ಲ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.