Ukraine-Russia War: ರಷ್ಯಾ ಒಳಹೊಕ್ಕು ದಾಳಿ ಮಾಡುವ ಶಕ್ತಿ ಪಡೆದುಕೊಂಡ ಯುಕ್ರೈನ್, ಪುಟಿನ್ ಟೆನ್ಷನ್ ನಲ್ಲಿ ಹೆಚ್ಚಳ

Ukraine-Russia War Latest News: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟೆನ್ಷನ್ ಅನ್ನು ಯುಕ್ರೈನ್ ಹೆಚ್ಚಿಸಿದೆ. ಇದಕ್ಕೂ ಮೊದಲು ಕ್ರೇಮ್ಲೀನ್ ವರೆಗೂ ಕೂಡ ಡ್ರೋನ್ ದಾಳಿ ನಡೆಸಲಾಗಿದ್ದು, ಯುಕ್ರೈನ್ ರಷ್ಯಾ ಒಳಹೊಕ್ಕು ದಾಳಿ ನಡೆಸುವ ಶಕ್ತಿ ಪಡೆದುಕೊಂಡಿದೆಯಾ ಎಂಬ ಭೀತಿ ಇದೀಗ ರಷ್ಯಾಗೆ ಕಾಡಲಾರಂಭಿಸಿದೆ.   

Written by - Nitin Tabib | Last Updated : Jun 10, 2023, 04:10 PM IST
  • ಶತ್ರು ದೇಶದ ಡ್ರೋನ್‌ಗಳು ರಷ್ಯಾದೊಳಗೆ ನುಗ್ಗಿ ದಾಳಿ ನಡೆಸಿರುವುದು ಬಹುತೇಕ ಎಲ್ಲರಿಗೂ ಕೂಡ ಅಚ್ಚರಿ ಮೂಡಿಸಿದೆ.
  • ರಷ್ಯಾದ ಗುಪ್ತಚರ ಸಂಸ್ಥೆಗಳು ಈ ದಾಳಿಯ ಬಗ್ಗೆ ತನಿಖೆ ನಡೆಸುತ್ತಿವೆ.
  • ಆದರೆ, ಆರಂಭಿಕ ತನಿಖೆಯಲ್ಲಿ ಇದರ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ರಷ್ಯಾ ಹೇಳಿದೆ.
Ukraine-Russia War: ರಷ್ಯಾ ಒಳಹೊಕ್ಕು ದಾಳಿ ಮಾಡುವ ಶಕ್ತಿ ಪಡೆದುಕೊಂಡ ಯುಕ್ರೈನ್, ಪುಟಿನ್ ಟೆನ್ಷನ್ ನಲ್ಲಿ ಹೆಚ್ಚಳ title=

Ukraine-Russia War Update: ಉಕ್ರೇನ್ ಈಗ ರಷ್ಯಾದಂತಹ ಪ್ರಬಲ ರಾಷ್ಟ್ರದ ಒಳಹೊಕ್ಕು ದಾಳಿ  ನಡೆಸುವ ಶಕ್ತಿಯನ್ನು ಪಡೆದುಕೊಂಡಿದೆಯೇ? ಹೌದು, ರಷ್ಯಾದಲ್ಲಿ ಮತ್ತೊಮ್ಮೆ ಡ್ರೋನ್ ದಾಳಿ ನಡೆದಿರುವುದರಿಂದ ಈ ಪ್ರಶ್ನೆ ಉದ್ಭವಿಸುವುದು ಸಹಜ. ರಷ್ಯಾದ ವೊರೊನೆಜ್ ನಗರದ ಮೇಲೆ ಡ್ರೋನ್ ದಾಳಿಯಿಂದಾಗಿ ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಯಾರೋ ತಮ್ಮ ಮೊಬೈಲ್‌ನಿಂದ ವಿಡಿಯೋವೊಂದನ್ನು ಚಿತ್ರೀಕರಿಸಿದ್ದು. ವಿಡಿಯೋದಲ್ಲಿ ಡ್ರೋನ್ ಆಕಾಶದಲ್ಲಿ ಹಾರುತ್ತಿರುವುದನ್ನು ನೀವು ನೋಡಬಹುದು. ಬಳಿಕ ಆ ಡ್ರೋನ್ ಅತ್ಯಂತ ವೇಗವಾಗಿ ಕೆಳಗೆ ಬರುತ್ತದೆ ಮತ್ತು ಕೆಲವು ಸೆಕೆಂಡುಗಳ ನಂತರ ಡ್ರೋನ್ ವಸತಿ ಪ್ರದೇಶದಲ್ಲಿ ಬೀಳುತ್ತದೆ. ಡ್ರೋನ್ ಬಿದ್ದ ತಕ್ಷಣ ಭಾರೀ ಸ್ಫೋಟದ ಸದ್ದು ಕೇಳಿಬರುತ್ತಿದೆ. ಕಟ್ಟಡದಿಂದ ಬೆಂಕಿಯ ಜ್ವಾಲೆ ಮತ್ತು ಹೊಗೆ ಬರುವುದನ್ನು ನೀವು ಗಮನಿಸಬಹುದು. ಡ್ರೋನ್‌ನಲ್ಲಿ ಮದ್ದುಗುಂಡುಗಳನ್ನು ಅಳವಡಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಡ್ರೋನ್ ದಾಳಿಯಲ್ಲಿ ಮೂವರು ರಷ್ಯಾದ ನಾಗರಿಕರು ಗಾಯಗೊಂಡಿದ್ದಾರೆ. ವಸತಿ ಕಟ್ಟಡದ ಹಲವು ಮಹಡಿಗಳು ನಾಶವಾಗಿವೆ. ಗಾಜುಗಳು ಒಡೆದು ಗೋಡೆಗಳೂ ಕುಸಿದಿವೆ.

ರಷ್ಯಾ ಒಳಹೊಕ್ಕು ದಾಳಿ ನಡೆಸುತ್ತಿದೆ ಯುಕ್ರೈನ್
ಶತ್ರು ದೇಶದ ಡ್ರೋನ್‌ಗಳು ರಷ್ಯಾದೊಳಗೆ ನುಗ್ಗಿ ದಾಳಿ ನಡೆಸಿರುವುದು ಬಹುತೇಕ ಎಲ್ಲರಿಗೂ ಕೂಡ ಅಚ್ಚರಿ ಮೂಡಿಸಿದೆ. ರಷ್ಯಾದ ಗುಪ್ತಚರ ಸಂಸ್ಥೆಗಳು ಈ ದಾಳಿಯ ಬಗ್ಗೆ ತನಿಖೆ ನಡೆಸುತ್ತಿವೆ. ಆದರೆ, ಆರಂಭಿಕ ತನಿಖೆಯಲ್ಲಿ ಇದರ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ರಷ್ಯಾ ಹೇಳಿದೆ. ಕೆಲವೇ ದಿನಗಳ ಹಿಂದೆ, ಮಾಸ್ಕೋದಲ್ಲಿ ಡ್ರೋನ್ ದಾಳಿ ನಡೆದಿತ್ತು, ಇದರಲ್ಲಿ ಮಾಸ್ಕೋದ ವಸತಿ ಕಟ್ಟಡವನ್ನು ಗುರಿಯಾಗಿಸಲಾಗಿತ್ತು. ಈ ಕಟ್ಟಡದಲ್ಲಿ ರಷ್ಯಾದ ಗುಪ್ತಚರ ಸಂಸ್ಥೆಯ ಅಧಿಕಾರಿಗಳ ಮನೆಗಳಿದ್ದವು. ರಷ್ಯಾ ತನ್ನ ಗಡಿಯಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ನಿಯೋಜಿಸಿದೆ, ಆದರೂ ಉಕ್ರೇನ್‌ನ ಡ್ರೋನ್‌ಗಳು ರಷ್ಯಾವನ್ನು ಪ್ರವೇಶಿಸುತ್ತಿವೆ ಮತ್ತು ಪ್ರವೇಶಿಸುವುದು ಮಾತ್ರವಲ್ಲದೆ ದಾಳಿ ಕೂಡ ನಡೆಸುತ್ತಿವೆ. 

ಇದನ್ನೂ ಓದಿ-PM Modi US Visit: ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಯುಎಸ್ ನಲ್ಲಿ ಭಾರಿ ಸಂಭ್ರಮ, 'ಐತಿಹಾಸಿಕ ಭೇಟಿ ಇದಾಗಿರಲಿದೆ' ಎಂದ ಪೆಂಟಗನ್

ಡ್ರೋನ್ ದಾಳಿಯಲ್ಲಿ 3 ಥಿಯರಿಗಳು ಹೊರಹೊಮ್ಮಿವೆ
ಮಾಸ್ಕೋ ಸೇರಿದಂತೆ ರಷ್ಯಾದ ನಗರಗಳಲ್ಲಿ ಉಕ್ರೇನ್‌ನ ಡ್ರೋನ್ ದಾಳಿ ದೊಡ್ಡ ಘಟನೆಯಾಗಿದೆ. ಈ ದಾಳಿಗಳಿಂದಾಗಿ, ರಷ್ಯಾ ನಿಜಕ್ಕೂ ಬಾಹುಬಲಿಯಾಗಿದೆಯಾ ಎಂಬ ಪ್ರಶ್ನೆಗಳು ಉದ್ಭವಿಸತೊಡಗಿವೆ. ಮೊದಲು ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿ, ನಂತರ ಮಾಸ್ಕೋದಲ್ಲಿ ರಷ್ಯಾದ ಅಧಿಕಾರಿಗಳ ಮನೆ ಮತ್ತು ಈಗ ವೊರೊನೆಜ್ ನಗರದಲ್ಲಿ ಡ್ರೋನ್ ದಾಳಿ ಅನೇಕ ಥಿಯರಿಗಳಿಗೆ ಎಡೆಮಾಡಿಕೊಟ್ಟಿದೆ. ಥಿಯರಿ 1 - ಒಂದು ವರ್ಷಕ್ಕೂ ಹೆಚ್ಚು ಕಾಲ ಯುದ್ಧದಲ್ಲಿ ಹೋರಾಡುತ್ತಿರುವ ಉಕ್ರೇನ್ ರಷ್ಯಾದೊಳಗೆ ದಾಳಿ ಮಾಡುವ ಶಕ್ತಿಯನ್ನು ಪಡೆದುಕೊಂಡಿದೆಯೇ? ಥಿಯರಿ 2 - ರಷ್ಯಾ ಉದ್ದೇಶಪೂರ್ವಕವಾಗಿ ಡ್ರೋನ್ ದಾಳಿಯನ್ನು ತನ್ನದೇ ಆದ ಪ್ರದೇಶಗಳ ಮೇಲೆ ನಡೆಸುತ್ತಿದೆಯೇ, ಇದರಿಂದ ಉಕ್ರೇನ್ ಮೇಲೆ ಪ್ರಮುಖ ದಾಳಿಯನ್ನು ನಡೆಸಲು ದಾರಿಯಾಗುತ್ತದೆ. ಸಿದ್ಧಾಂತ 3 - ಪುಟಿನ್ ವಿರೋಧಿ ಮತ್ತು ಈ ದಾಳಿಗಳನ್ನು ನಡೆಸುತ್ತಿರುವ ಯಾವುದೇ ಗುಂಪು ರಷ್ಯಾದೊಳಗೆ ಇದೆಯೇ? ಎಂಬುದಾಗಿದೆ.

ಇದನ್ನೂ ಓದಿ-Bomb Blast: ಮತ್ತೊಮ್ಮೆ ಭೀಕರ ಬಾಂಬ್ ದಾಳಿಗೆ ನಡುಗಿದ ಅಫ್ಘಾನ್ ಭೂಮಿ, 11 ಜನರ ದುರ್ಮರಣ

ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿಯ ದುಸ್ಸಾಹಸ
ಡ್ರೋನ್ ದಾಳಿಯ ಹೊಣೆಯನ್ನು ರಷ್ಯಾ ಉಕ್ರೇನ್‌ ಮೇಲೆ ಹೊರಿಸಿದೆ. ಡ್ರೋನ್ ದಾಳಿಯು ವೊರೊನೆಜ್ ನಗರದ ಕಟ್ಟಡವನ್ನು ಹಾನಿಗೊಳಿಸಿದ್ದು, ಕೆಲವರಿಗೆ ಗಾಯಗಳಾಗಿವೆ. ಆದರೆ ಒಂದರ ಹಿಂದೆ ಒಂದರಂತೆ ನಡೆಯುತ್ತಿರುವ ಈ ಡ್ರೋನ್ ದಾಳಿ ಪುಟಿನ್ ಎದೆಯ ಮೇಲೆ ನೇರ ದಾಳಿಯಾಗಿದ್ದು, ಇದಕ್ಕೆ ರಷ್ಯಾದ ನಡುಕ ಸಮರ್ಥನೀಯವಾಗಿದೆ. 3 ಮೇ 2023 ರಂದು, ಮಾಸ್ಕೋದಲ್ಲಿ ಪುಟಿನ್ ಅವರ ಕಚೇರಿ ಇರುವ ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿ ಕೂಡ ನಡೆದಿದೆ. ಈ ದಾಳಿಯ ಹಿಂದೆ ರಷ್ಯಾ ಕೀವ್ ಹೆಸರಿಸಿತ್ತು. ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡಲು ಯತ್ನಿಸಿತ್ತು ಎಂದು ರಷ್ಯಾ ಆರೋಪಿಸಿತ್ತು. ಝೆಲೆನ್ಸ್ಕಿ ಪ್ರತಿ ಬಾರಿ ರಷ್ಯಾದಲ್ಲಿ ದಾಳಿಯಲ್ಲಿ ತನ್ನ ಕೈವಾಡವನ್ನು ನಿರಾಕರಿಸಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧವು ಒಂದು ಕಾಲು ವರ್ಷದಿಂದಲ್ಲೂ ಹೆಚ್ಚು ಕಾಲ ನಡೆಯುತ್ತಿದೆ. ರಷ್ಯಾದಲ್ಲಿ ನಡೆಯುತ್ತಿರುವ ಡ್ರೋನ್ ದಾಳಿಗಳು ಇದೀಗ ಉಕ್ರೇನ್‌ನ ಹೆಚ್ಚುತ್ತಿರುವ ಶಕ್ತಿಯನ್ನು ತೋರಿಸುತ್ತಿರುವುದು ಮಾತ್ರ ನಿಜ ಮತ್ತು ಇದರಿಂದಾಗಿ ಪುಟಿನ್ ಕೋಪವು ಮುಗಿಲು ಮುಟ್ಟಿದೆ ಎಂದರೆ ತಪ್ಪಾಗಲಾರದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News