ನವದೆಹಲಿ: ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಯುಎಸ್ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವು ನಿರ್ಣಾಯಕವಾಗಿದೆ,ಆದ್ದರಿಂದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಶನಿವಾರ ಯುಎಸ್ ಮತದಾರರನ್ನು ಜೋ ಬಿಡೆನ್ ಅವರನ್ನು ಆಯ್ಕೆ ಮಾಡುವಂತೆ ಕೇಳಿಕೊಂಡರು.


COMMERCIAL BREAK
SCROLL TO CONTINUE READING

ಫ್ರೈಡೇಸ್ ಫಾರ್ ಫ್ಯೂಚರ್"ಹವಾಮಾನ ಪ್ರತಿಭಟನೆಯ 17 ವರ್ಷದ ಸಂಸ್ಥಾಪಕಿ ಗ್ರೇಟಾ ಥನ್ಬರ್ಗ್ ಟ್ವೀಟ್ ಮೂಲಕ ಜೋ ಬಿಡೆನ್ ಗೆ ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ. ಹವಾಮಾನ ಬದಲಾವಣೆಯ ಎಚ್ಚರಿಕೆಗಳನ್ನು ತಳ್ಳಿಹಾಕಿ ಥನ್‌ಬರ್ಗ್‌ರನ್ನು ವ್ಯಂಗ್ಯವಾಡಿದ್ದ ಟ್ರಂಪ್ ಗೆ  ವಿರುದ್ಧವಾಗಿ ಮತ ಚಲಾಯಿಸಲು ಗ್ರೇಟಾ ವಿನಂತಿಸಿಕೊಂಡಿದ್ದಾರೆ.


ಜನ್ಮ ದಿನದಂದು ಸಂಸತ್ತಿನ ಹೊರಗೆ 7 ಗಂಟೆ ಪ್ರತಿಭಟನೆಗೆ ಕುಳಿತ ಗ್ರೆಟಾ ಥನ್ಬರ್ಗ್ !



ಈ ಹಿಂದೆ ಟ್ರಂಪ್ ಗ್ರೇಟಾಳನ್ನು ಉದ್ದೇಶಿಸಿ 'ಗ್ರೇಟಾ ತನ್ನ ಕೋಪ ತಗ್ಗಿಸಲು ಶ್ರಮಿಸಬೇಕು, ನಂತರ ಸ್ನೇಹಿತನೊಂದಿಗೆ ಹಳೆಯ ಹಳೆಯ ಚಲನಚಿತ್ರಕ್ಕೆ ಹೋಗಿ! ಚಿಲ್ ಗ್ರೇಟಾ, ಚಿಲ್!" ಎಂದು ಟ್ರಂಪ್ ಹಿಂದೊಮ್ಮೆ ಟ್ವೀಟ್ ಮಾಡಿದ್ದರು.ಥನ್ಬರ್ಗ್ ವಿಶ್ವಸಂಸ್ಥೆಯನ್ನು ಉದ್ದೇಶಿಸಿ "ನಿಮಗೆ ಎಷ್ಟು ಧೈರ್ಯ?" ಎಂದು ಭಾಷಣ ಮಾಡಿದ ಬೆನ್ನಲ್ಲೇ ಟ್ರಂಪ್ ಇದಕ್ಕೆ ಪ್ರತಿಕ್ರಿಯಿಸುತ್ತಾ' ಅವಳು ಉಜ್ವಲ ಮತ್ತು ಅದ್ಭುತ ಭವಿಷ್ಯವನ್ನು ಎದುರು ನೋಡುತ್ತಿರುವ ತುಂಬಾ ಸಂತೋಷದ ಯುವತಿಯಂತೆ ಕಾಣುತ್ತಿದ್ದಾಳೆ" ಎಂದು ಹೇಳಿದ್ದರು.


ಮತ್ತೊಂದೆಡೆ ಬಿಡೆನ್ ಥನ್ಬರ್ಗ್ ಅವರ ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟಕ್ಕೆ ಇರುವ ಅವರ ಬದ್ಧತೆಯನ್ನು ಶ್ಲಾಘಿಸಿದ್ದಾರೆ.