ಹಾಲಿವುಡ್ ನಟಿ ಸುಸಾನ್ ಸರಂಡನ್ ಅವರು ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.ನ್ಯೂಯಾರ್ಕ್ ಟೈಮ್ಸ್ ಸುದ್ದಿಯನ್ನು ತನ್ನ ಕಾಮೆಂಟ್ನೊಂದಿಗೆ ಅವರು ಪೋಸ್ಟ್ ಮಾಡಿದ್ದಾರೆ.ಭಾರತದ ರೈತರಿಗೆ ಬೆಂಬಲ ವ್ಯಕ್ತಪಡಿಸುವೆ,ಅವರು ಯಾಕೆ ಪ್ರತಿಭಟಿಸುತ್ತಿದ್ದಾರೆ ಎನ್ನುವುದನ್ನು ತಿಳಿಯಲು ಈ ಕೆಳಗಿನ ಲಿಂಕ್ ನಲ್ಲಿ ಓದಿ ಎಂದು ಅವರು ಪತ್ರಿಕಾ ವರದಿಯನ್ನು ಲಗತ್ತಿಸಿದ್ದಾರೆ.
ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸೋದರ ಸೊಸೆ ಅಮೆರಿಕದ ವಕೀಲೇ ಮೀನಾ ಹ್ಯಾರಿಸ್ ಅವರು ತಮ್ಮ ವಿರುದ್ಧದ ಪ್ರತಿಭಟನೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.ಅವರು ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿದ್ದಕ್ಕೆ ಅವರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು.
ರೈತ ಪ್ರತಿಭಟನೆಯಲ್ಲಿ ಸಿಲುಕಿರುವ ಸಾಗರೋತ್ತರ ಪಿತೂರಿಯ ತನಿಖೆಯು ಗ್ರೇಟಾ ಥನ್ಬರ್ಗ್ ವಿರುದ್ಧವಲ್ಲ, ಆದರೆ ಅವರು ಟ್ವೀಟ್ ಮಾಡಿರುವ ಟೂಲ್ಕಿಟ್ ಬಗ್ಗೆ ಎಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ.ಈ ಟೂಲ್ಕಿಟ್ ಖಲಿಸ್ತಾನಿ ಗುಂಪಿಗೆ ಸಂಬಂಧಿಸಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಯುಎಸ್ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವು ನಿರ್ಣಾಯಕವಾಗಿದೆ,ಆದ್ದರಿಂದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಶನಿವಾರ ಯುಎಸ್ ಮತದಾರರನ್ನು ಜೋ ಬಿಡೆನ್ ಅವರನ್ನು ಆಯ್ಕೆ ಮಾಡುವಂತೆ ಕೇಳಿಕೊಂಡರು.
ಹಿಂದೆಂದಿಗಿಂತಲೂ ಜಾಗತಿಕ ಹವಾಮಾನ ಬದಲಾವಣೆ ವಾಪಕ ಪರಿಣಾಮ ಬೀರುತ್ತಿದೆ, ಭೂಮಿ ಮೇಲೆ ಅನೇಕ ವನ್ಯ ಜೀವಿಗಳು ಹಾಗೂ ಸಂತತಿಗಳು ಕಾಣೆಯಾಗುತ್ತಿವೆ, ಉತ್ತರ ಧ್ರುವದಲ್ಲಿ ಹಿಮ ಗಡ್ಡೆಗಳು ಕರುಗುತ್ತಿವೆ, ಅಮೆಜಾನ್ ಕಾಡುಗಳು ಕಾಡ್ಗಿಚ್ಚಿನಿಂದ ನಾಶವಾಗುತ್ತಿವೆ, ಅದೇ ರೀತಿಯಾಗಿ ಪ್ರವಾಹ ಹಾಗೂ ಬರ ಎನ್ನುವುದು ಸಾಮಾನ್ಯ ಎನ್ನುವಂತಾಗಿದೆ. ಹೀಗೆ ಜಾಗತಿಕ ಹವಾಮಾನ ಬದಲಾವಣೆಯ ಪರಿಣಾಮ ಮಾತ್ರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ.ಈ ಎಲ್ಲ ಪರಿಣಾಮಗಳು ಮಾನವ ನಿರ್ಮಿತ ಕೃತಕ ಸೃಷ್ಟಿಗಳಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.