Taiwan Earthquake: ಇತ್ತೀಚೆಗಷ್ಟೇ ಭೂಕಂಪದಿಂದ ನಲುಗಿದ್ದ ತೈವಾನ್‌ನಲ್ಲಿ ನಿನ್ನೆ ತಡರಾತ್ರಿ ಮತ್ತೆ ಭೂಕಂಪ (Taiwan Earthquake)  ಸಂಭವಿಸಿದೆ. ಒಂದೇ ರಾತ್ರಿಯಲ್ಲಿ ದೇಶದಲ್ಲಿ 80 ಬಾರಿ ಭೂಕಂಪ ಸಂಭವಿಸಿರುವ ಬಗ್ಗೆ ವರದಿಯಾಗಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3ರಷ್ಟಿತ್ತು ಎಂದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ಸೋಮವಾರ (ಏಪ್ರಿಲ್ 22)  ತೈವಾನ್‌ನಲ್ಲಿ ಸ್ಥಳೀಯ ಕಾಲಮಾನ ಸಂಜೆ 5:08 ಕ್ಕೆ (0908 GMT) ಭೂಕಂಪ ಅಪ್ಪಳಿಸಿತು.  ರಾಜಧಾನಿ ತೈಪೆಯಲ್ಲೂ ಕೂಡ ಭೂಕಂಪದ (Earthquake) ಅನುಭವವಾಗಿದೆ. 


ಇದನ್ನೂ ಓದಿ- ಕಾರು ಅಪಘಾತದಲ್ಲಿ ನಟ ಪಂಕಜ್ ತ್ರಿಪಾಠಿ ಸೋದರ ಮಾವ ಸಾವು, ಸಹೋದರಿಗೆ ಗಂಭೀರ ಗಾಯ


ರಾಜಧಾನಿ ತೈಪೆ ಸೇರಿದಂತೆ ಉತ್ತರ, ಪೂರ್ವ ಮತ್ತು ಪಶ್ಚಿಮ ತೈವಾನ್‌ನ ದೊಡ್ಡ ಭಾಗಗಳಲ್ಲಿ ಕಟ್ಟಡಗಳು ಅಲುಗಾಡಿದ ಅನುಭವವಾಗಿದೆ. ತೈವಾನ್‌ನ ಶೌಫೆಂಗ್ ಟೌನ್‌ಶಿಪ್, ಹುವಾಲಿಯನ್ ಕೌಂಟಿಯಲ್ಲಿ ಸೋಮವಾರ 9 ನಿಮಿಷಗಳಲ್ಲಿ ಐದು ಭೂಕಂಪಗಳು ಸಂಭವಿಸಿವೆ ಎಂದು ಕೇಂದ್ರ ಸುದ್ದಿ ಸಂಸ್ಥೆ ಫೋಕಸ್ ತೈವಾನ್ ವರದಿ ಮಾಡಿದೆ.


ಇದನ್ನೂ ಓದಿ- ಇಂಡೋನೇಷ್ಯಾ : ಸುಲವೆಸಿ ದ್ವೀಪದಲ್ಲಿ ಜ್ವಾಲಾಮುಖಿ, ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ


ತೈವಾನ್‌ನಲ್ಲಿನ ವಿರಳ ಜನಸಂಖ್ಯೆ ಹೊಂದಿರುವ ಹುವಾಲಿಯನ್ ಏಪ್ರಿಲ್ 3 ರಂದು  7.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದು ಪರ್ವತ ಪ್ರದೇಶದ ಸುತ್ತಲೂ ಭೂಕುಸಿತಗಳನ್ನು ಉಂಟುಮಾಡಿತು. ಈ ದುರ್ಘಟನೆಯಲ್ಲಿ  ಕನಿಷ್ಠ 14ಮಂದಿ ಸಾವನ್ನಪ್ಪಿದ್ದರು. ರಸ್ತೆಗಳು ಕೂಡ ಹಾನಿಗೊಳಗಾಗಿದ್ದವು.  ಈ ಸಂದರ್ಭದಲ್ಲಿ ಹುವಾಲಿಯನ್‌ನಲ್ಲಿ ಭೂಕಂಪದ ಕೇಂದ್ರವಿತ್ತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.